Vaikunta Ekadashi: ತಿರುಮಲದಲ್ಲಿ ವೈಕುಂಠ ಏಕಾದಶಿ ಸಂಭ್ರಮ; ಉತ್ತರ ದ್ವಾರದಲ್ಲಿ ಭಕ್ತರಿಗೆ ದರ್ಶನ, ಫೋಟೊಗಳು ನೋಡಿ
- ವೈಕುಂಠ ಏಕಾದಶಿ 2025: ತಿರುಮಲದಲ್ಲಿ ವೈಕುಂಠ ಏಕಾದಶಿಯ ಉತ್ತರ ದ್ವಾರದಲ್ಲಿ ವೆಂಕಟೇಶ್ವರನ ದರ್ಶನ ಪಡೆಯಲು ಭಕ್ತರು ಹರಸಾಹಸ ಪಡುತ್ತಿದ್ದಾರೆ. ಮುಕ್ಕೋಟಿ ಏಕಾದಶಿ ಸಂದರ್ಭದಲ್ಲಿ ಸಾವಿರಾರು ಭಕ್ತರು ತಿರುಮಲಕ್ಕೆ ಧಾವಿಸಿದ್ದು, ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

(1 / 8)
ಇಂದು (ಜನವರಿ 10, ಶುಕ್ರವಾರ) ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ತಿರುಮಲದಲ್ಲಿ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
(3 / 8)
ತಿರುಪತಿ ದೇವಸ್ಥಾನದ ಉತ್ತರ ದ್ವಾರವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಸಾವಿರಾರು ಭಕ್ತರು ತಿಮ್ಮಪ್ಪನ ದರ್ಶನಕ್ಕಾಗಿ ತಿರುಮಲದಲ್ಲಿ ಸೇರಿದ್ದರು. ಹಂತ ಹಂತವಾಗಿ ಎಲ್ಲಾ ಭಕ್ತರಿಗೆ ಉತ್ತರ ದ್ವಾರದ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
(5 / 8)
ದೇವರ ದರ್ಶನಕ್ಕಾಗಿ ಮಂಟಪಗಳಲ್ಲಿ ಕಾಯುತ್ತಿದ್ದ ಭಕ್ತರಿಗೆ ತಂಡೋಪ ತಂಡವಾಗಿ ದರ್ಶನ ಮಾಡಿಸುವ ವ್ಯವಸ್ಥೆಯನ್ನು ಟಿಟಿಡಿ ಕೈಗೊಂಡಿದೆ.
(7 / 8)
ಪ್ರತಿ ವರ್ಷ ವೈಕುಂಠ ಏಕಾದಶಿಯ ದಿನ ತಿರುಮಲದಲ್ಲಿ ವಿಶೇಷ ಸೇವೆಗಳು ನಡೆಯುತ್ತವೆ. ಅಂದು ದೇವಾಲಯದಲ್ಲಿ ಹಬ್ಬದ ವಾತಾವರಣ ಇರುತ್ತೆ.
ಇತರ ಗ್ಯಾಲರಿಗಳು