Vaikunta Ekadasi 2025: ಜನವರಿ 10ಕ್ಕೆ ವೈಕುಂಠ ಏಕಾದಶಿ; ಕರ್ನಾಟಕದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಿವು, ಹೇಗಿರುತ್ತೆ ಸಂಭ್ರಮ
- ನಾಳೆ (ಜನವರಿ 10, ಶುಕ್ರವಾರ) ವೈಕುಂಠ ಏಕಾದಶಿ ಆಚರಿಸಲಾಗುತ್ತಿದೆ. ಈ ಸಡಗರದ ನಿಮಿತ್ತವಾಗಿ ಕರ್ನಾಟಕದಲ್ಲಿರುವ ಪ್ರಮುಖ ವೈಷ್ಣವ ಕ್ಷೇತ್ರಗಳ ಬಗ್ಗೆ ತಿಳಿಯೋಣ. ಮಾಲೂರಿನ ಚಿಕ್ಕತಿರುಪತಿಯಿಂದ ಹಿಡಿದು ಮೇಲುಕೋಟೆ ಚೆಲುವನಾರಾಯಣ ದೇವಾಲಯದವರಿಗೆ ದೇಗುಲಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
- ನಾಳೆ (ಜನವರಿ 10, ಶುಕ್ರವಾರ) ವೈಕುಂಠ ಏಕಾದಶಿ ಆಚರಿಸಲಾಗುತ್ತಿದೆ. ಈ ಸಡಗರದ ನಿಮಿತ್ತವಾಗಿ ಕರ್ನಾಟಕದಲ್ಲಿರುವ ಪ್ರಮುಖ ವೈಷ್ಣವ ಕ್ಷೇತ್ರಗಳ ಬಗ್ಗೆ ತಿಳಿಯೋಣ. ಮಾಲೂರಿನ ಚಿಕ್ಕತಿರುಪತಿಯಿಂದ ಹಿಡಿದು ಮೇಲುಕೋಟೆ ಚೆಲುವನಾರಾಯಣ ದೇವಾಲಯದವರಿಗೆ ದೇಗುಲಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
(1 / 11)
ವೈಕುಂಠ ಏಕಾದಶಿ ದಿನ ಭಕ್ತರು ಉಪವಾಸವಿದ್ದು ವಿಷ್ಣು ಹಾಗೂ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಮರುದಿನ ಉಪವಾಸ ಅಂತ್ಯಗೊಳಿಸುತ್ತಾರೆ. ಈ ಶುಭದಿನದಂದು ಎಲ್ಲಾ ದೇವಾಲಯಗಳಲ್ಲಿ ಉತ್ತರದ ಬಾಗಿಲಿನಿಂದ ಭಕ್ತರಿಗೆ ದರ್ಶನ ಸೌಲಭ್ಯ ಮಾಡಲಾಗುತ್ತದೆ. ಇದನ್ನು ಮುಕ್ಕೋಟಿ ಏಕಾದಶಿ ಅಂತಲೂ ಕರೆಯುತ್ತಾರೆ.
(2 / 11)
ನಾಳೆ (ಜನವರಿ 10, ಶುಕ್ರವಾರ) ವೈಕುಂಠ ಏಕಾದಶಿಯ ಆಚರಣೆಗಾಗಿ ಎಲ್ಲಾ ದೇವಾಲಯಗಳಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿಶೇಷ ದೀಪಾಲಂಕಾರ, ಪೆಂಡಾಲ್, ವಿವಿಧ ಬಣ್ಣಗಳ ಹೂವಿನ ಅಲಂಕಾರ, ಭಕ್ತರ ದರ್ಶನಕ್ಕೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
(3 / 11)
ಕೋಲಾರ ಜಿಲ್ಲೆಯ ಮಾಲೂರಿನ ಚಿಕ್ಕ ತಿರುಪತಿಯಿಂದ ಹಿಡಿದು ತುಮಕೂರು ಜಿಲ್ಲೆಯ ದೇವರಾಯನದುರ್ಗದ ಯೋಗ ಮತ್ತು ಭೋಗ ನರಸಿಂಹ ದೇವಾಲಯಗಳ ವರೆಗೆ ಕರ್ನಾಟಕದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಲ್ಲಿ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಾಜ್ಯದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳ ವಿವರ ಇಲ್ಲಿದೆ.
(4 / 11)
ಮಾಲೂರಿನ ಚಿಕ್ಕ ತಿರುಪತಿ: ಕೋಲಾರ ಜಿಲ್ಲೆ ಮಾಲೂರು ತಾಲೂಕು ಲಕ್ಕೂರು ಹೋಬಳ್ಳಿಯಲ್ಲಿರುವ ಚಿಕ್ಕ ತಿರುಪತಿ ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಕ್ಷೇತ್ರವಾಗಿದ್ದು, ವೈಕುಂಠ ಏಕಾದಶಿಯನ್ನು ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಚಿಕ್ಕ ತಿರುಪತಿಯಲ್ಲಿನ ಶ್ರೀ ಪ್ರಸನ್ನ ವೆಂಕಟೇಶ್ವರ ದೇವಾಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
(5 / 11)
ಅರಸೀಕೆರೆ ಮಾಲೇಕಲ್ ಚಿಕ್ಕ ತಿರುಪತಿ: ರಾಜ್ಯದ ಮತ್ತೊಂದು ಚಿಕ್ಕ ತಿರುಪತಿ ಅಂತಲೇ ಜನಪ್ರಿಯವಾಗಿದ್ದು, ಇಲ್ಲಿನ ಲಕ್ಷ್ಮಿವೆಂಕಟರಮಣ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಕರ್ನಾಟಕ ಪ್ರಮುಖ ವೈಷ್ಣವ ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ.
(6 / 11)
ಬೆಂಗಳೂರು ಇಸ್ಕಾನ್: ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ರಾಧಾ ಕೃಷ್ಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ವೈಕುಂಠ ಏಕಾದಶಿಯಂದು ಇಲ್ಲಿ ವಿಶೇಷ ಸೇವೆಗಳನ್ನು ಮಾಡಲಾಗುತ್ತದೆ. ನೂರಾರು ಮಂದಿ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ.
(7 / 11)
ರಂಗನಾಥಸ್ವಾಮಿ ದೇಗುಲ, ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಾಲಯದಲ್ಲೂ ವೈಕುಂಠ ಏಕಾದಶಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ವಿಷ್ಣುವಿನ ಪ್ರತಿರೂಪದ ಈ ದೇವಾಲಯವನ್ನು ವೈಷ್ಣವ ಸಂಪ್ರದಾಯದ 108 ಅಭಿಮಾನ ಕ್ಷೇತ್ರಗಳಲ್ಲಿ ಒಂದೆಂದು ವರ್ಗೀಕರಿಸಲಾಗಿದೆ. ವೈಕುಂಠ ಏಕಾದಶಿಯಂದು ನೂರಾರು ಭಕ್ತರು ದೇವರ ದರ್ಶನ ಪಡೆಯಲಿದ್ದಾರೆ.
(8 / 11)
ಅಪ್ರಮೇಯ ಸ್ವಾಮಿ ದೇಗುಲ, ಚನ್ನಪಟ್ಟಣ: ರಾಮನಗರ ಜಿಲ್ಲೆ ಚನ್ನಪಟ್ಟಣದ ಸಮೀಪದಲ್ಲೇ ಇರುವ ಅಪ್ರಮೇಯ ಸ್ವಾಮಿ ದೇಗುಲ ಕರ್ನಾಟಕ ಪ್ರಮುಖ ವೈಷ್ಣವ ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ. ವೈಕುಂಠ ಏಕಾದಶಿಯಂದು ವಿಶೇಷ ಪೂಜೆ ಮಾಡಲಾಗುತ್ತದೆ.
(9 / 11)
ಮೇಲುಕೋಟೆ ಚೆಲುವನಾರಾಯಣ ದೇಗುಲ:ಮಂಡ್ಯ ಜಿಲ್ಲೆಯ ಮೇಲುಕೋಟೆ ಚೆಲುವನಾರಾಯಣ ದೇವಾಲಯವು ಐತಿಹಾಸಿಕವಾಗಿದ್ದು, ವೈಕುಂಠ ಏಕಾದಶಿಯನ್ನು ಇಲ್ಲಿ ಸಂಭ್ರಮ ಸಡಗರದಿಂದ ನೆರವೇರುತ್ತದೆ. ದೇವಾಲಯದ ಆವರಣದಲ್ಲಿ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. ನೂರಾರು ಭಕ್ತರು ಚೆಲುವನಾರಾಯಣನ ದರ್ಶನಕ್ಕೆ ಕಾತುರರಾಗಿದ್ದಾರೆ.
(10 / 11)
ಕೋಟ ಗುರು ನರಸಿಂಹ ದೇಗುಲ:ಉಡುಪಿ ನಗರದಿಂದ 22 ಕಿಲೋ ಮೀಟರ್ ದೂರದಲ್ಲಿರುವ ಕೋಟ ಗುರು ನರಸಿಂಹ ದೇವಾಲಯದಲ್ಲಿ ಸಾಲಿಗ್ರಾಮವು ವಿಷ್ಣುವಿನ ಸಿಂಹದ ತಲೆಯ ರೂಪದಲ್ಲಿದೆ. ಇಲ್ಲೂ ಕೂಡ ಜನವರಿ 10ರ ಶುಕ್ರವಾರ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಭಕ್ತರು ದೇವರ ದರ್ಶನ ಪಡೆಯಲಿದ್ದಾರೆ.
ಇತರ ಗ್ಯಾಲರಿಗಳು