ವಿಶ್ವ ಬ್ಲಿಟ್ಜ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಆರ್ ವೈಶಾಲಿ; ಚೀನಾಗೆ ಒಲಿದ ಚಾಂಪಿಯನ್ ಪಟ್ಟ
- ವಿಶ್ವ ಬ್ಲಿಟ್ಜ್ ಚಾಂಪಿಯನ್‌ಶಿಪ್‌ನ ( World Blitz Championship) ಮಹಿಳಾ ವಿಭಾಗದಲ್ಲಿ ಭಾರತದ ಆರ್ ವೈಶಾಲಿ (R Vaishali) ಕಂಚಿನ ಪದಕ ಗೆದ್ದಿದ್ದಾರೆ. ಕ್ವಾರ್ಟರ್ ಫೈನಲ್‌ಲ್ಲಿ ಚೀನಾದ ಝು ಜಿನರ್ ಅವರನ್ನು 2.5-1.5ರಿಂದ ಸೋಲಿಸಿದ ವೈಶಾಲಿ, ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸುವಲ್ಲಿ ವಿಫಲರಾದರು.

(1 / 6)
ಸೆಮಿಫೈನಲ್‌ನಲ್ಲಿ ವೈಶಾಲಿ ಚೀನಾದ ಮತ್ತೊಬ್ಬ ಎದುರಾಳಿ ಜು ವೆಂಜುನ್ ವಿರುದ್ಧ 0.5-2.5 ಅಂತರದಲ್ಲಿ ಸೋತರು.
(HT_PRINT)(2 / 6)
ರ್ಯಾಪಿಡ್ ಈವೆಂಟ್‌ನಲ್ಲಿ ಕೊನೇರು ಹಂಪಿ ಅವರ ಪ್ರಶಸ್ತಿ ವಿಜೇತ ಪ್ರದರ್ಶನದ ಬೆನ್ನಲ್ಲೇ, ದೇಶದ ಚೆಸ್ ಆಟಗಾರ್ತಿ ಮತ್ತೊಂದು ಪ್ರಶಸ್ತಿ ಗೆದ್ದಿದ್ದಾರೆ. ಚಾಂಪಿಯನ್ ಆಗದಿದ್ದರೂ, ಕಂಚು ಗೆದ್ದ ತೃಪ್ತಿ ವೈಶಾಲಿಗಿದೆ.
(Hindustan Times)(3 / 6)
ಆಟದಲ್ಲಿ ಚೀನೀಯರ ಸಂಪೂರ್ಣ ಪ್ರಾಬಲ್ಯದ ಸ್ಪರ್ಧೆಯಲ್ಲಿ, ಸಹ ಆಟಗಾರ ಲೀ ಟಿಂಗ್ಜಿ ಅವರನ್ನು 3.5-2.5 ಅಂತರದಿಂದ ಸೋಲಿಸಿದ ಜು ವೆಂಜುನ್ ವಿಶ್ವ ಪ್ರಶಸ್ತಿಯನ್ನು ಗೆದ್ದರು.
(Hindustan Times)(4 / 6)
ವಿಶ್ವ ಚಾಂಪಿಯನ್ ಮತ್ತು ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (ಫಿಡೆ) ಉಪಾಧ್ಯಕ್ಷ ವಿಶ್ವನಾಥನ್ ಆನಂದ್ ಅವರು, ವೈಶಾಲಿ ಅವರ ಆಟಕ್ಕೆ ಅಭಿನಂದಿಸಿದ್ದಾರೆ. 2024ಕ್ಕೆ ವಿದಾಯ ಹೇಳಲು ಇದು ಉತ್ತಮ ಮಾರ್ಗವಾಗಿದೆ ಎಂದು ಹೇಳಿದ್ದಾರೆ.
(Hindustan Times)(5 / 6)
"ಕಂಚಿನ ಪದಕ ಗೆದ್ದ ವೈಶಾಲಿಗೆ ಅಭಿನಂದನೆಗಳು. ಆಕೆಯದ್ದು ನಿಜಕ್ಕೂ ಶಕ್ತಿ ತುಂಬಿದ ಪ್ರದರ್ಶನವಾಗಿತ್ತು. ಇದು ನಮ್ಮ ವೆಸ್ಟ್ ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿಗೆ ನಮಗೆ ಹೆಮ್ಮೆ ತಂದಿದೆ" ಎಂದು ಆನಂದ್ 'ಎಕ್ಸ್'ನಲ್ಲಿ ಬರೆದಿದ್ದಾರೆ.
(PTI)ಇತರ ಗ್ಯಾಲರಿಗಳು