ಚಿನ್ನ ಗೆದ್ದ ಜಾಫರ್ ಖಾನ್-ನಿಯೋಲ್ ಅನ್ನಾಗೆ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ, ಹಾಕಿಯಲ್ಲಿ ಹಾವೇರಿ ಚಾಂಪಿಯನ್; ಕರ್ನಾಟಕ ಕ್ರೀಡಾಕೂಟ ಸಂಪನ್ನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿನ್ನ ಗೆದ್ದ ಜಾಫರ್ ಖಾನ್-ನಿಯೋಲ್ ಅನ್ನಾಗೆ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ, ಹಾಕಿಯಲ್ಲಿ ಹಾವೇರಿ ಚಾಂಪಿಯನ್; ಕರ್ನಾಟಕ ಕ್ರೀಡಾಕೂಟ ಸಂಪನ್ನ

ಚಿನ್ನ ಗೆದ್ದ ಜಾಫರ್ ಖಾನ್-ನಿಯೋಲ್ ಅನ್ನಾಗೆ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ, ಹಾಕಿಯಲ್ಲಿ ಹಾವೇರಿ ಚಾಂಪಿಯನ್; ಕರ್ನಾಟಕ ಕ್ರೀಡಾಕೂಟ ಸಂಪನ್ನ

  • ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ (ಜನವರಿ 23) ಜರುಗಿದ ಕರ್ನಾಟಕ ಕ್ರೀಡಾಕೂಟ ಸಮಾರೋಪ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಗೆದ್ದವರಿಗೆ ಪದಕ ವಿತರಣೆ ಮಾಡಲಾಯಿತು. 

ಬೆಳಗಾವಿಯ ಜಾಫರ್ ಖಾನ್ ಮತ್ತು ಬೆಂಗಳೂರಿನ ನಿಯೋಲ್ ಅನ್ನಾ ಕಾರ್ನೆಲಿಯೊ ಅವರು 'ಕರ್ನಾಟಕ ಕ್ರೀಡಾಕೂಟ'ದ ಅಥ್ಲೇಟಿಕ್ಸ್​​ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಶ್ರೇಷ್ಠ ಅಥ್ಲೀಟ್ ಗೌರವಕ್ಕೆ ಪಾತ್ರರಾಗಿದ್ದಾರೆ. ದಕ್ಷಿಣ ಕನ್ನಡ-ಉಡುಪಿಯಲ್ಲಿ ನಡೆದ ಕ್ರೀಡಾಕೂಟದ ಸಮಾರೋಪವು ಜನವರಿ 24ರಂದು ನಡೆಯಿತು.
icon

(1 / 10)

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಲಾಂಗ್ ಜಂಪ್​ನಲ್ಲಿ 7.44 ಮೀಟರ್​ ಜಗಿದು ಚಿನ್ನದ ಪದಕ ಜಯಿಸಿದ್ದ ಜಾಫರ್ ಖಾನ್, ಈ ಕೂಟದಲ್ಲಿ ಒಟ್ಟು 1,016 ಅಂಕ ಪಡೆದರೆ, ನಿಯೋಲ್ 100 ಮೀಟರ್ ಓಟವನ್ನು 11 ನಿಮಿಷ 93 ಸೆಕೆಂಡ್​ಗಳಲ್ಲಿ ಪೂರೈಸಿ ಒಟ್ಟು 1,005 ಅಂಕ ಪಡೆದು ಮಿಂಚಿದರು.
icon

(2 / 10)

ಖೋ ಖೋ ಪುರುಷರ ವಿಭಾಗದಲ್ಲಿ ಬೆಳಗಾವಿ ಚಿನ್ನ, ಬಾಗಲಕೋಟೆ ಬೆಳ್ಳಿ, ಧಾರವಾಡ-ರಾಯಚೂರು ತಂಡಗಳು ಕಂಚಿನ ಪದಕ ಗೆದ್ದಿವೆ. ಖೋ ಖೋ ಮಹಿಳೆಯರ ವಿಭಾಗದಲ್ಲಿ ಬೆಳಗಾವಿ ತಂಡ ಚಿನ್ನ, ಮೈಸೂರು ಬೆಳ್ಳಿ, ಬೆಂಗಳೂರು ಮತ್ತು ರಾಯಚೂರು ತಂಡಗಳು ಕಂಚಿನ ಪದಕ ಗೆದ್ದವು.
icon

(3 / 10)

ವಾಲಿಬಾಲ್​ನಲ್ಲಿ ಪುರುಷರ ವಿಭಾಗದಲ್ಲಿ ಬೆಂಗಳೂರು ಎ ಚಾಂಪಿಯನ್ ಆಗಿದೆ. ಉಡುಪಿ ಬೆಳ್ಳಿ, ಬೆಳಗಾವಿ ಕಂಚು ಗೆದ್ದಿತು. ಮಹಿಳೆಯರ ವಿಭಾಗದಲ್ಲಿ ಉಡುಪಿ ತಂಡ ಚಾಂಪಿಯನ್ ಆಯಿತು. ಮೈಸೂರು ಬೆಳ್ಳಿ, ಕೊಪ್ಪಳ ತಂಡ ಕಂಚು ಗೆದ್ದಿತು.
icon

(4 / 10)

ಪುರುಷರ ಹ್ಯಾಂಡ್​ ಬಾಲ್​ನಲ್ಲಿ ಬೆಂಗಳೂರು ಗ್ರಾಮಾಂತರ ಚಿನ್ನ, ಮೈಸೂರು ಬೆಳ್ಳಿ, ಬೆಂಗಳೂರು ನಗರ, ಉಜಿರೆಯ ಎಸ್​ಡಿಎಂ ತಂಡಗಳು ಕಂಚಿನ ಪದಕ ಗೆದ್ದವು. ಮಹಿಳೆಯರ ವಿಭಾಗದಲ್ಲಿ ಹಾಸನ ಚಿನ್ನ, ದಾವಣಗೆರೆ ಬೆಳ್ಳಿ, ಚಿತ್ರದುರ್ಗ, ಬೆಂಗಳೂರು ಕಂಚು ಗೆದ್ದಿದ್ದಾರೆ.
icon

(5 / 10)

ಪುರುಷರ ಬ್ಯಾಸ್ಕೆಟ್​ ಬಾಲ್​ನಲ್ಲಿ ಬ್ಯಾಂಕ್ ಆಫ್ ಬರೋಡಾ ಚಿನ್ನ ಗೆದ್ದರೆ, ಡೈಸ್ ಬೆಂಗಳೂರು ಬೆಳ್ಳಿಗೆ ಮುತ್ತಿಕ್ಕಿತು. ದಕ್ಷಿಣ ಕನ್ನಡ ಕಂಚು ಗೆದ್ದಿತು. ಮಹಿಳೆಯರ ವಿಭಾಗದಲ್ಲಿ ಮೌಂಟ್ಸ್ ತಂಡ ಚಿನ್ನ, ಡೈಸ್ ಮೈಸೂರು ಬೆಳ್ಳಿ, ಡೈಸ್ ಮಂಡ್ಯ ಕಂಚು ಗೆದ್ದಿತು.
icon

(6 / 10)

ಪುರುಷರ ಹಾಕಿಯಲ್ಲಿ ಹಾಸನ ತಂಡದ ವಿರುದ್ಧ 1-0 ಅಂತರದಿಂದ ಗೆದ್ದ ಹಾವೇರಿ ಚಿನ್ನಕ್ಕೆ ಮುತ್ತಿಕ್ಕಿತು.
icon

(7 / 10)

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್, 'ನಮ್ಮ ಅಥ್ಲೀಟ್‌ಗಳ ಬದ್ಧತೆ ಮತ್ತು ಪರಿಶ್ರಮಕ್ಕೆ ಶ್ಲಾಘನೀಯ. ನೂತನ ಪ್ರತಿಭೆಗಳನ್ನು ಹುಡುಕುವುದಕ್ಕಾಗಿ ಪ್ರಾದೇಶಿಕ ಮಟ್ಟದಲ್ಲಿ 3 ತಿಂಗಳಿಗೊಮ್ಮೆ ಮತ್ತು ಜಿಲ್ಲಾಮಟ್ಟದಲ್ಲಿ 6 ತಿಂಗಳಿಗೊಮ್ಮೆ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಬೇಕು' ಎಂದು ಕೋರಿದ್ದಾರೆ.
icon

(8 / 10)

ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತನಾಡಿ, 'ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿದರೆ ಇತರೆ ಕಾನೂನು ಬಾಹಿರ ಚಟುವಟಿಕೆಗಳ ಕಡೆಗೆ ಯುವಜನರು ಗಮನಹರಿಸುವುದನ್ನು ತಡೆಯಬಹುದು. ಕರ್ನಾಟಕ ಕ್ರೀಡಾಕೂಟವನ್ನು ಈ ವರ್ಷ ಮಂಗಳೂರು ಮತ್ತು ಉಡುಪಿಯಲ್ಲಿ ಆಯೋಜಿಸಲಾಗಿದ್ದು, ಮುಂದಿನ ವರ್ಷ ತುಮಕೂರಿನಲ್ಲಿ ನಡೆಸಬೇಕೆಂದು' ಎಂದು ಮನವಿ ಮಾಡಿದ್ದಾರೆ.
icon

(9 / 10)

ಕರ್ನಾಟಕ ಒಲಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜ್ ಅವರು ಮಾತನಾಡಿ, 'ಕ್ರೀಡೆಯನ್ನು ಕಡ್ಡಾಯ ಮಾಡುವಂತೆ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದೇನೆ. ಪ್ರಸ್ತುತ 10ನೇ ತರಗತಿಯವರೆಗೆ ಮಾತ್ರ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ' ಎಂದರು.
icon

(10 / 10)

ಇತರ ಗ್ಯಾಲರಿಗಳು