ಖೋ ಖೋ ವಿಶ್ವಕಪ್ 2025: ನೇಪಾಳ ವಿರುದ್ಧ ಭಾರತದ ಅಭಿಯಾನ ಆರಂಭ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ
- ಖೋ ಖೋ ವಿಶ್ವಕಪ್ 2025 ಇಂದಿನಿಂದ (ಜನವರಿ 13, ಸೋಮವಾರ) ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಖೋ ಖೋ ವಿಶ್ವಕಪ್ ನಡೆಯುತ್ತಿದ್ದು, ಚೊಚ್ಚಲ ಆವೃತ್ತಿಗೆ ಭಾರತ ಆತಿಥ್ಯ ನೀಡುತ್ತಿದೆ. ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿದ್ದು, ಪುರುಷರ 20 ಮತ್ತು ಮಹಿಳೆಯರ ವಿಭಾಗದಲ್ಲಿ 19 ತಂಡಗಳು ಭಾಗವಹಿಸಲಿವೆ.
- ಖೋ ಖೋ ವಿಶ್ವಕಪ್ 2025 ಇಂದಿನಿಂದ (ಜನವರಿ 13, ಸೋಮವಾರ) ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಖೋ ಖೋ ವಿಶ್ವಕಪ್ ನಡೆಯುತ್ತಿದ್ದು, ಚೊಚ್ಚಲ ಆವೃತ್ತಿಗೆ ಭಾರತ ಆತಿಥ್ಯ ನೀಡುತ್ತಿದೆ. ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿದ್ದು, ಪುರುಷರ 20 ಮತ್ತು ಮಹಿಳೆಯರ ವಿಭಾಗದಲ್ಲಿ 19 ತಂಡಗಳು ಭಾಗವಹಿಸಲಿವೆ.
(1 / 10)
ಇದೇ ಮೊದಲ ಬಾರಿಗೆ ಖೋ ಖೋ ವಿಶ್ವಕಪ್ ನಡೆಯುತ್ತಿರುವುದು ಒಂದೆಡೆಯಾದರೆ, ಭಾರತ ಆತಿಥ್ಯ ವಹಿಸುತ್ತಿರುವುದು ಮತ್ತೊಂದು ವಿಶೇಷ. ಹೀಗಾಗಿ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಪ್ರೇಮಿಗಳು ಆಸಕ್ತಿಯಿಂದ ಕಾಯುತ್ತಿದ್ದಾರೆ.
(HT_PRINT)(2 / 10)
ಆತಿಥೇಯ ಭಾರತ ತಂಡವು ಇಂದು (ಸೋಮವಾರ) ರಾತ್ರಿ 8:30ಕ್ಕೆ ನೇಪಾಳ ವಿರುದ್ಧದ ಗ್ರೂಪ್ ಎ ಪುರುಷರ ಪಂದ್ಯವನ್ನು ಆಡುತ್ತಿದೆ. ಇದರೊಂದಿಗೆ ಖೋ ಖೋ ವಿಶ್ವಕಪ್‌ಗೆ ಅಧಿಕೃತ ಚಾಲನೆ ಸಿಗಲಿದೆ.
(AFP)(4 / 10)
ಮಹಿಳಾ ವಿಭಾಗದಲ್ಲಿ, ಭಾರತವು ಜನವರಿ 14ರಂದು ಸಂಜೆ 7 ಗಂಟೆಗೆ ತನ್ನ ಅಭಿಯಾನ ಆರಂಭಿಸಲಿದೆ. ಭಾರತ ವನಿತೆಯರ ಖೋ ಖೋ ತಂಡವು ದಕ್ಷಿಣ ಕೊರಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಸೆಣಸಲಿದೆ.
(Mohd Zakir)(5 / 10)
ಪುರುಷ ಮತ್ತು ಮಹಿಳಾ ತಂಡಗಳನ್ನು ತಲಾ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ರೌಂಡ್-ರಾಬಿನ್ ಹಂತದಲ್ಲಿ ಪ್ರತಿ ತಂಡವು ಗುಂಪಿನಲ್ಲಿರುವ ಎಲ್ಲಾ ತಂಡಗಳ ವಿರುದ್ಧ ತಲಾ ಒಮ್ಮೆ ಆಡುತ್ತದೆ. ಪ್ರತಿ ಪೂಲ್‌ನಿಂದ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುತ್ತವೆ
(AFP)(6 / 10)
ಕೊನೆಯ ಎಂಟು ತಂಡಗಳು ನಾಕೌಟ್ ಹಂತದಲ್ಲಿ ಆಡುತ್ತವೆ. ಕ್ವಾರ್ಟರ್ ಫೈನಲ್ ವಿಜೇತ ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಜನವರಿ 19ರಂದು ಫೈನಲ್ ಪಂದ್ಯ ನಡೆಯಲಿದೆ.
(Amit Sharma)(7 / 10)
ಖೋ ಖೋ ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ಮತ್ತು ಸ್ಟಾರ್ ಸ್ಪೋರ್ಟ್ಸ್ ಫಸ್ಟ್ ವಾಹಿನಿಯಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದು.
(Mohd Zakir)(8 / 10)
ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಖೋ ಖೋ ಪಂದ್ಯಗಳನ್ನು ಮೊಬೈಲ್ ಮೂಲಕ ವೀಕ್ಷಿಸಬಹುದು.
(Amit Sharma)(9 / 10)
ಖೋ ಖೋ ವಿಶ್ವಕಪ್ ಟೂರ್ನಿಯು ಜನವರಿ 13ರಿಂದ 19ರವರೆಗೆ ಆಯೋಜನೆಯಾಗಿದೆ. 19ರಂದು ಎರಡೂ ವಿಭಾಗಗಳ ಫೈನಲ್ ಪಂದ್ಯ ನಡೆಯಲಿವೆ.
(PTI)ಇತರ ಗ್ಯಾಲರಿಗಳು