ಐಟಿ ಆಫೀಸರ್ ಪ್ರಿಯಾಂಕಾ ಇಂಗ್ಳೆ ನಾಯಕತ್ವದಲ್ಲಿ ಖೋ ಖೋ ವಿಶ್ವಕಪ್ ಗೆದ್ದ ಭಾರತ; ಮರಾಠಿ ಸುಂದರಿ ಈಗ ಮನೆಮಾತು
- ಭಾರತ ಪುರುಷ ಹಾಗೂ ಮಹಿಳೆಯರ ಖೋ ಖೋ ತಂಡಗಳು ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿದೆ. ಮಹಾರಾಷ್ಟ್ರದ ಆಟಗಾರ್ತಿ ಪ್ರಿಯಾಂಕಾ ಇಂಗ್ಳೆ ನಾಯಕತ್ವದಲ್ಲಿ ವನಿತೆಯರ ತಂಡವು ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿತು. ಸದ್ಯ ದೇಶಾದ್ಯಂತ ಪ್ರಿಯಾಂಕಾ ಮನೆಮಾತಾಗಿದ್ದಾರೆ.
- ಭಾರತ ಪುರುಷ ಹಾಗೂ ಮಹಿಳೆಯರ ಖೋ ಖೋ ತಂಡಗಳು ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿದೆ. ಮಹಾರಾಷ್ಟ್ರದ ಆಟಗಾರ್ತಿ ಪ್ರಿಯಾಂಕಾ ಇಂಗ್ಳೆ ನಾಯಕತ್ವದಲ್ಲಿ ವನಿತೆಯರ ತಂಡವು ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿತು. ಸದ್ಯ ದೇಶಾದ್ಯಂತ ಪ್ರಿಯಾಂಕಾ ಮನೆಮಾತಾಗಿದ್ದಾರೆ.
(1 / 8)
ವಿಶ್ವಕಪ್‌ನಲ್ಲಿ ಭಾರತ ಖೋ ಖೋ ತಂಡ ಇತಿಹಾಸ ನಿರ್ಮಿಸಿತು. ಭಾರತ ತಂಡವು ಚೊಚ್ಚಲ ಖೋ-ಖೋ ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಮಹಿಳಾ ಮತ್ತು ಪುರುಷರ ತಂಡಗಳು ವಿಶ್ವಕಪ್ ಗೆದ್ದಿವೆ. ಈ ನಡುವೆ ಭಾರತೀಯ ಮಹಿಳಾ ತಂಡದ ನಾಯಕಿ, ಮಹಾರಾಷ್ಟ್ರದ ಪ್ರಿಯಾಂಕಾ ಗಮನ ಸೆಳೆದರು.
(PTI)(2 / 8)
ಮರಾಠಿ ಹುಡುಗಿ ಪ್ರಿಯಾಂಕಾ ಇಂಗ್ಳೆ ನೇತೃತ್ವದ ಭಾರತೀಯ ಮಹಿಳಾ ತಂಡವು 2025ರ ಖೋ-ಖೋ ವಿಶ್ವಕಪ್ ಗೆದ್ದ ಬೆನ್ನಲ್ಲೇ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ.
(Mohd Zakir )(3 / 8)
ಪ್ರಿಯಾಂಕಾ ಅವರ ತಂದೆ ಬೀಡ್ ಜಿಲ್ಲೆಯ ಕೇಜ್ ತಾಲ್ಲೂಕಿನ ಕಲಾಂಬ ಗ್ರಾಮದವರು. ಕುಟುಂಬವನ್ನು ಆರ್ಥಿಕವಾಗಿ ಮುನ್ನಡೆಸಲು ಅವರು ಪುಣೆಗೆ ತೆರಳಿದರು. ಪ್ರಿಯಾಂಕಾ ಜನಿಸಿದ್ದು ಕೂಡಾ ಪುಣೆಯಲ್ಲೇ.
(Mohd Zakir)(4 / 8)
ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಪ್ರಿಯಾಂಕಾ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಪ್ರಿಯಾಂಕಾ ಅವರ ಓಟದ ವೇಗ ಮತ್ತು ಚುರುಕುತನದಿಂದಾಗಿ ಅವರು ವಿವಿಧ ಸ್ಪರ್ಧೆಗಳಿಗೆ ಆಯ್ಕೆಯಾದರು. ಇದುವೇ ಅವರನ್ನು ಖೋ ಖೋ ಆಡುವಂತೆ ಪ್ರೇರೇಪಿಸಿತು.
(Mohd Zakir )(5 / 8)
2023ರಲ್ಲಿ ನಡೆದ 4ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾಂಕಾ ಚಿನ್ನದ ಪದಕ ಗೆದ್ದರು. 2022ರ ಆರಂಭದಲ್ಲಿ ಅವರಿಗೆ ರಾಷ್ಟ್ರಮಟ್ಟದಲ್ಲಿ ರಾಣಿ ಲಕ್ಷ್ಮೀಬಾಯಿ ಪ್ರಶಸ್ತಿಯೂ ಸಿಕ್ಕಿತು.
(Mohd Zakir )(6 / 8)
15 ವರ್ಷ ವಯಸ್ಸಿನಲ್ಲೇ ಖೋ-ಖೋದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಅವರು ತಮ್ಮ ವೃತ್ತಿಜೀವನದಲ್ಲಿ 23 ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅವರು ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
(Mohd Zakir )(7 / 8)
ಪ್ರಿಯಾಂಕಾ ಪ್ರಸ್ತುತ ಮುಂಬೈನ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಿಯಾಂಕಾ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.
(Mohd Zakir )ಇತರ ಗ್ಯಾಲರಿಗಳು