ಟೆನಿಸ್ ಆಟಗಾರ್ತಿಯೊಂದಿಗೆ ಸಪ್ತಪದಿ ತುಳಿದ ನೀರಜ್ ಚೋಪ್ರಾ; ಹಿಮಾನಿ ಮೋರ್ ಟೆನಿಸ್ ವೃತ್ತಿಜೀವನ ಹೀಗಿದೆ
- Neeraj Chopra - Himani Mor: ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರ ಮದುವೆಯು ಸರಳವಾಗಿ ನಡೆದಿದೆ. ಹಿಮಾನಿ ಮೋರ್ ಅವರೊಂದಿಗೆ ಸಪ್ತಪದಿ ತುಳಿದಿದ್ದು, ಜೋಡಿಯು ವಿವಾಹದ ಬಳಿಕ ಹನಿಮೂನ್ ಮೂಡ್‌ನಲ್ಲಿದೆ. ಹಿಮಾನಿ ಟೆನಿಸ್ ಆಟಗಾರ್ತಿಯಾಗಿದ್ದು, ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

(1 / 7)
ನೀರಜ್ ಪತ್ನಿಯ ಹೆಸರು ಹಿಮಾನಿ ಮೋರ್. ಹಿಮಾನಿ ಟೆನಿಸ್ ಆಟಗಾರ್ತಿ. ಅವರ ವೃತ್ತಿಜೀವನದ ಬಗ್ಗೆ ತಿಳಿಯೋಣ.
(Social media)(2 / 7)
ವರದಿಗಳ ಪ್ರಕಾರ, ಹಿಮಾನಿ 2017ರಲ್ಲಿ ವಿಶ್ವ ವಿಶ್ವವಿದ್ಯಾಲಯ ಟೆನಿಸ್ ಕ್ರೀಡಾಕೂಟ ಮತ್ತು ವಿಶ್ವ ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
(Social media)(3 / 7)
ವಿಶ್ವ ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿಮಾನಿ, ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಹಿಮಾನಿ ರಾಷ್ಟ್ರೀಯ ಶ್ರೇಯಾಂಕ 42 ಮತ್ತು ಮಹಿಳಾ ಡಬಲ್ಸ್‌ನಲ್ಲಿ 27ನೇ ಶ್ರೇಯಾಂಕ ಪಡೆದಿದ್ದಾರೆ.
(Social media)(4 / 7)
ಹಿಮಾನಿ ಉತ್ತಮ ಟೆನಿಸ್ ಆಟಗಾರ್ತಿಯಾಗಿದ್ದು, 2016 ಮತ್ತು 2017ರಲ್ಲಿ ಮಲೇಷ್ಯಾದಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಜೂನಿಯರ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ ಎಂದು ಅವರು ಓದಿದ ಶಾಲೆಯ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.
(@Neeraj_chopra1)(6 / 7)
ನೀರಜ್ ಅವರ ಪತ್ನಿ ಹಿಮಾನಿಗೆ ಈಗ 25 ವರ್ಷ ವಯಸ್ಸು. ಅವರು ಹರಿಯಾಣದವರು. ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ನ ವಿದ್ಯಾರ್ಥಿನಿಯಾಗಿದ್ದರು. ವರದಿಗಳ ಪ್ರಕಾರ ಹಿಮಾನಿ ರಾಜ್ಯಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ ಪದವಿ ಪಡೆದಿದ್ದಾರೆ.
(PTI)ಇತರ ಗ್ಯಾಲರಿಗಳು