Photos: ಚೊಚ್ಚಲ ಖೋ ಖೋ ವಿಶ್ವಕಪ್‌ಗೆ ವಿಧ್ಯುಕ್ತ ಚಾಲನೆ; ಗಮನ ಸೆಳೆದ ವರ್ಣರಂಜಿತ ಸಾಂಸ್ಕೃತಿಕ ಪ್ರದರ್ಶನ
- Kho Kho World Cup 2025: ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಖೋ ಖೋ ವಿಶ್ವಕಪ್‌ಗೆ ಅದ್ಧೂರಿ ಚಾಲನೆ ನೀಡಲಾಯ್ತು. ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಚೊಚ್ಚಲ ವಿಶ್ವಕಪ್ ಟೂರ್ನಿಗೆ ಜನವರಿ 13ರ ಸೋಮವಾರ ರಾತ್ರಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಧ್ಯುಕ್ತ ಚಾಲನೆ ಸಿಕ್ಕಿತು.
- Kho Kho World Cup 2025: ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಖೋ ಖೋ ವಿಶ್ವಕಪ್‌ಗೆ ಅದ್ಧೂರಿ ಚಾಲನೆ ನೀಡಲಾಯ್ತು. ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಚೊಚ್ಚಲ ವಿಶ್ವಕಪ್ ಟೂರ್ನಿಗೆ ಜನವರಿ 13ರ ಸೋಮವಾರ ರಾತ್ರಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಧ್ಯುಕ್ತ ಚಾಲನೆ ಸಿಕ್ಕಿತು.
(1 / 10)
ಉಪರಾಷ್ಟ್ರಪತಿ ಜಗದೀಪ್ ಧನಕರ್, ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
(PTI)(2 / 10)
ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಸೇರಿದಂತೆ ಸಾವಿರಾರು ಅಭಿಮಾನಿಗಳು ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನೆರೆದಿದ್ದರು.
(Kho Kho Federation of India)(3 / 10)
ಉದ್ಘಾಟನಾ ಸಮಾರಂಭದಲ್ಲಿ ವರ್ಣರಂಜಿತ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಭೂಮಿ ತಾಯಿಗೆ ಗೌರವ ಸಲ್ಲಿಸುವ ಪ್ರದರ್ಶನ ಗಮನ ಸೆಳೆಯಿತು.
(Kho Kho Federation of India)(4 / 10)
ಖೋ ಖೋ ಫೆಡರೇಶನ್ ಆಫ್ ಇಂಡಿಯಾ ಪುರುಷರ ಮತ್ತು ಮಹಿಳಾ ಪಂದ್ಯಾವಳಿಯ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿತು.
(PTI)(5 / 10)
ಭಾರತೀಯ ಧ್ವಜದ ಔಪಚಾರಿಕ ಮೆರವಣಿಗೆ ನಡೆಯಿತು. ಭಾಗವಹಿಸುವ ದೇಶಗಳು ಕ್ರೀಡಾಂಗಣದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಕ್ರೀಡಾಪಟುಗಳು ಪ್ರೇಕ್ಷಕರತ್ತ ಕೈಬೀಸಿದರು.
(Kho Kho Federation of India)(6 / 10)
ಜನವರಿ 13ರಿಂದ 19ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಒಟ್ಟು 39 ತಂಡಗಳು ಭಾಗವಹಿಸಲಿವೆ.
(PTI)(7 / 10)
ಪುರುಷರ ಸ್ಪರ್ಧೆಯಲ್ಲಿ 20 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಮಹಿಳೆಯರ ವಿಭಾಗದಲ್ಲಿ 19 ದೇಶ ಭಾಗವಹಿಸುತ್ತಿವೆ. ಲೀಗ್ ಹಂತವು ಜನವರಿ 16 ರಂದು ಕೊನೆಗೊಳ್ಳಲಿದೆ.
(Kho Kho Federation of India)(8 / 10)
ಜನವರಿ 17ರಂದು ಪ್ಲೇಆಫ್ ಹಂತ ಆರಂಭವಾಗುತ್ತವೆ. ಫೈನಲ್ ಪಂದ್ಯಗಳು ಜನವರಿ 19ರಂದು ನಡೆಯಲಿದೆ.
(Kho Kho Federation of India)(9 / 10)
ಮೊದಲ ದಿನ ನಡೆದ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ನೇಪಾಳ ವಿರುದ್ಧ 5 ಅಂಕಗಳ ಅಂತರದಿಂದ ಗೆದ್ದು ಬೀಗಿತು.
(PTI)ಇತರ ಗ್ಯಾಲರಿಗಳು









