ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಡೋಪಿಂಗ್ ಪ್ರಕರಣ ಪತ್ತೆ; ಇರಾಕ್‌ನ ಜೂಡೋ ಆಟಗಾರ ಅಮಾನತು
- Sajjad Sehen doping: ಪ್ಯಾರಿಸ್ ಒಲಿಂಪಿಕ್ಸ್-2024 ಉದ್ಘಾಟನಾ ಸಮಾರಂಭ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು, ಮೊದಲ ಡೋಪಿಂಗ್ ಪ್ರಕರಣವೊಂದು ಪತ್ತೆಯಾಗಿದೆ.
- Sajjad Sehen doping: ಪ್ಯಾರಿಸ್ ಒಲಿಂಪಿಕ್ಸ್-2024 ಉದ್ಘಾಟನಾ ಸಮಾರಂಭ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು, ಮೊದಲ ಡೋಪಿಂಗ್ ಪ್ರಕರಣವೊಂದು ಪತ್ತೆಯಾಗಿದೆ.
(1 / 7)
ಪ್ಯಾರಿಸ್ ಒಲಿಂಪಿಕ್ಸ್ ಅಧಿಕೃತ ಆರಂಭ ಪಡೆದುಕೊಂಡ ಬೆನ್ನಲ್ಲೇ ಮೊದಲ ಡೋಪಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ.
(2 / 7)
ಇರಾಕ್‌ನ 28 ವರ್ಷದ ಜೂಡೋ ಆಟಗಾರ ಸಜ್ಜದ್ ಸೆಹೆನ್ ಅವರು ಡೋಪಿಂಗ್ ಟೆಸ್ಟ್ನಲ್ಲಿ ಸಿಕ್ಕಿ ಬಿದ್ದಿದ್ದು, ಅಮಾನತು ಮಾಡಲಾಗಿದೆ.
(3 / 7)
ಸಜ್ಜದ್ ಅವರಿಂದ ಜುಲೈ 23ರ ಮಂಗಳವಾರ ತೆಗೆದುಕೊಂಡ ಸ್ಯಾಂಪಲ್ನಲ್ಲಿ ಎರಡು ಅನಾಬೊಲಿಕ್ ಸ್ಟೀರಾಯ್ಡ್ (ಮೆಟಾಂಡಿನೋನ್ ಮತ್ತು ಬೋಲ್ಡೆನೋನ್) ಪತ್ತೆಯಾಗಿದೆ.
(4 / 7)
ಮೊದಲ ಡೋಪಿಂಗ್ ಪ್ರಕರಣದ ಕುರಿತು ಪ್ಯಾರಿಸ್ ಒಲಿಂಪಿಕ್ಸ್ 2024 ಉದ್ಘಾಟನಾ ಸಮಾರಂಭ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಘೋಷಿಸಲಾಯಿತು.
(5 / 7)
ಸೆಹೆನ್ ಅವರನ್ನು ಸದ್ಯಕ್ಕೆ ಅಮಾನತುಗೊಳಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಆ್ಯಂಟಿ ಡೋಪಿಂಗ್ ಕಾರ್ಯಕ್ರಮ ಮೇಲ್ವಿಚಾರಣೆ ಮಾಡುವ ಇಂಟರ್ನ್ಯಾಷನಲ್ ಟೆಸ್ಟ್ ಏಜೆನ್ಸಿ (ITA) ಹೇಳಿದೆ.
(6 / 7)
ಸ್ಪರ್ಧಿಸುವುದು, ತರಬೇತಿ ಪಡೆಯುವುದು ಅಥವಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ತಡೆಯಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.
(AFP)ಇತರ ಗ್ಯಾಲರಿಗಳು