ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದ 61ರ ಹರೆಯದ ಆಟಗಾರ್ತಿ; ನಿ ಕ್ಸಿಯಾ ಲಿಯಾನ್ ಫಿಟ್‌ನೆಸ್‌ ಸೀಕ್ರೆಟ್‌ ನೀವೂ ತಿಳ್ಕೊಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದ 61ರ ಹರೆಯದ ಆಟಗಾರ್ತಿ; ನಿ ಕ್ಸಿಯಾ ಲಿಯಾನ್ ಫಿಟ್‌ನೆಸ್‌ ಸೀಕ್ರೆಟ್‌ ನೀವೂ ತಿಳ್ಕೊಳಿ

ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದ 61ರ ಹರೆಯದ ಆಟಗಾರ್ತಿ; ನಿ ಕ್ಸಿಯಾ ಲಿಯಾನ್ ಫಿಟ್‌ನೆಸ್‌ ಸೀಕ್ರೆಟ್‌ ನೀವೂ ತಿಳ್ಕೊಳಿ

  • ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 61 ವರ್ಷದ ಆಟಗಾರ್ತಿಯೊಬ್ಬರು ಭಾಗವಹಿಸಿದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಲಕ್ಸೆಂಬರ್ಗ್‌ನ ಈ ಸೀನಿಯರ್‌ ಸಿಟಿಜನ್‌, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಟೇಬಲ್‌ ಟೆನಿಸ್‌ನಲ್ಲಿ ಆಡಿದ್ದಾರೆ. ಅಲ್ಲದೆ ದಾಖಲೆಯನ್ನೂ ಮಾಡಿದ್ದಾರೆ. ಅವರ ಕುರಿತು ತಿಳಿಯೋಣ ಬನ್ನಿ.

ಇವರ ಹೆಸರು. ನಿ ಕ್ಸಿಯಾ ಲಿಯಾನ್. ವಿಶೇಷವೆಂದರೆ ಮೊದಲ ಸುತ್ತಿನಲ್ಲಿ ಇವರು ಟರ್ಕಿಯ ಸಿಬೆಲ್ ಅಲ್ಟಿಂಕಾಯಾ ಅವರನ್ನು ಸೋಲಿಸುವ ಮೂಲಕ ಒಲಿಂಪಿಕ್ಸ್‌ ಟೇಬಲ್ ಟೆನಿಸ್ ಪಂದ್ಯ ಗೆದ್ದ ಅತ್ಯಂತ ಹಿರಿಯ ಆಟಗಾರ್ತಿ ಎನಿಸಿಕೊಂಡರು.ಅಂದ ಹಾಗೆ ಇವರು ಸೋಲಿಸಿದ್ದು, ಇವರಿಗಿಂತ ಅರ್ಧಕ್ಕರ್ಧ ಚಿಕ್ಕ ವಯಸ್ಸಿನ ಆಟಗಾರ್ತಿಯನ್ನು.
icon

(1 / 5)

(AP)

1963ರಲ್ಲಿ ಚೀನಾದ ಶಾಂಘೈನಲ್ಲಿ ಜನಿಸಿದ ನಿ ಕ್ಸಿಯಾ ಲಿಯಾನ್, 1983ರಲ್ಲಿ ಎರಡು ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ತಮ್ಮ ತರಬೇತುದಾರ ಟಾಮಿ ಡೇನಿಯಲ್ಸನ್ ಅವರನ್ನು ಮದುವೆಯಾದ ನಂತರ, ನಿ 1989ರಲ್ಲಿ ಜರ್ಮನಿಗೆ ತೆರಳಿದರು. ಆ ನಂತರ 1991ರಲ್ಲಿ ಲಕ್ಸೆಂಬರ್ಗ್‌ ಪೌರತ್ವ ಪಡೆದರು. ಆ ಬಳಿಕ 1998 ಮತ್ತು 2002ರಲ್ಲಿ ಅವರು ಲಕ್ಸೆಂಬರ್ಗ್‌ ಪರ ಎರಡು ಯುರೋಪಿಯನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
icon

(2 / 5)

(REUTERS)

ಲಿಯಾನ್ ಈ ಬಾರಿ ತಮ್ಮ ಆರನೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ದಾಖಲೆ ನಿರ್ಮಿಸಿದ್ದಾರೆ. 2000ರಲ್ಲಿ ಲಿಯಾನ್ ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಆಗ ಅವರಿಗೆ 37 ವರ್ಷ ವಯಸ್ಸು. 2000ರ ಸಿಡ್ನಿ ಒಲಿಂಪಿಕ್ಸ್‌ನಿಂದ ನಂತರದ ಎಲ್ಲಾ ಕ್ರೀಡಾಕೂಟಗಳಿಗೆ ಅವರು ಅರ್ಹತೆ ಗಳಿಸಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ಮೂಲಕ, 58 ವರ್ಷದ ಕ್ಸಿಯಾ ಲಿಯಾನ್ ಅವರು ಟೇಬಲ್ ಟೆನ್ನಿಸ್ ಆಡಿದ ಅತ್ಯಂತ ಹಿರಿಯ ಒಲಿಂಪಿಯನ್ ಆದರು.
icon

(3 / 5)

(AFP)

60ರ ಹರೆಯದಲ್ಲಿಯೂ ಫಿಟ್‌ ಆಗಿ ಆಡಲು ಲಿಯಾನ್ ಅವರು ಸೂಕ್ತ ಆಹಾರ ಕ್ರಮ ಅನುಸರಿಸುತ್ತಾರೆ. ತರಕಾರಿಗಳು, ನಟ್ಸ್‌, ಮೀನು ಮತ್ತು ಸೀಮಿತ ಮಾಂಸಾಹಾರ ಸೇವನೆ ಅನುಸರಿಸುತ್ತಾರೆ. ವೈವಿಧ್ಯಮಯ ಆಹಾರ, ಯಥೇಚ್ಛವಾಗಿ ನೀರು ಕುಡಿಯುವುದು, ಸಕ್ಕರೆ ಪಾನೀಯಗಳನ್ನು ತಪ್ಪಿಸುವುದು ಆರೋಗ್ಯದ ಗುಟ್ಟು ಎಂದಿದ್ದಾರೆ. ಇದೇ ವೇಳೆ ಕಿರಿಯ ಆಟಗಾರರಿಗೆ ತರಬೇತಿ ನೀಡುವ ಮೂಲಕ ಆಟದ ಫಿಟ್‌ನೆಸ್‌ ಉಳಿಸಿಕೊಂಡಿರುವುದಾಗಿ ಹೇಳಿದ್ದಾರೆ.
icon

(4 / 5)

ಪ್ಯಾರಿಸ್‌ನಲ್ಲಿ ಸಂದರ್ಶನವೊಂದರಲ್ಲಿ ಉತ್ಸಾಹದಿಂದ ಮಾತನಾಡಿದ ಲಿಯಾನ್‌, "ನಾನು ಅತ್ಯಂತ ಹಿರಿಯ ಅಥ್ಲೀಟ್. ಅತ್ಯುತ್ತಮ ಸಾಧನೆ ಮಾಡಲು ಶ್ರಮಿಸುತ್ತಿರುವ ಮಕ್ಕಳಿಗೆ ನಾನು ಉದಾಹರಣೆಯಾಗಿದ್ದೇನೆ. ನನ್ನ ವಯಸ್ಸು ನನಗೆ ನೆನಪಿಲ್ಲ. ಆದರೆ ನಾನು ಇನ್ನೂ 16ರ ಹರೆಯದವಳು ಆಗಿದ್ದರೆ ಚೆನ್ನಾಗಿರುತ್ತದೆ" ಎಂದು ಕ್ಸಿಯಾ ಲಿಯಾನ್ ನಗುತ್ತಾ ಹೇಳುತ್ತಾರೆ.
icon

(5 / 5)

ಇತರ ಗ್ಯಾಲರಿಗಳು