ಫೋಟೊ ಹಿಂದಿನ ಕಥೆ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಅತ್ಯುತ್ತಮ ಛಾಯಾಚಿತ್ರಗಳು
- Paris Olympics 2024: ಮೋಡಗಳ ಮೇಲೆ ಹಾರುತ್ತಿರುವ ಸರ್ಫರ್, ಪ್ಯಾರಿಸ್‌ನ ಕಾಂಕಾರ್ಡ್ ಒಬೆಲಿಸ್ಕ್ ಮೇಲೆ ಸವಾರಿ ಮಾಡುತ್ತಿರುವ ಬಿಎಂಎಕ್ಸ್ ಚಾಂಪಿಯನ್. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ದೃಶ್ಯಗಳಿವು.
- Paris Olympics 2024: ಮೋಡಗಳ ಮೇಲೆ ಹಾರುತ್ತಿರುವ ಸರ್ಫರ್, ಪ್ಯಾರಿಸ್‌ನ ಕಾಂಕಾರ್ಡ್ ಒಬೆಲಿಸ್ಕ್ ಮೇಲೆ ಸವಾರಿ ಮಾಡುತ್ತಿರುವ ಬಿಎಂಎಕ್ಸ್ ಚಾಂಪಿಯನ್. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ದೃಶ್ಯಗಳಿವು.
(1 / 11)
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಮಹಿಳೆಯರ ಫ್ಲೋರ್ ವ್ಯಾಯಾಮ ಈವೆಂಟ್ ಪದಕ ಪ್ರದಾನ ಸಮಾರಂಭದಲ್ಲಿ, ಅಮೆರಿಕದ ಸಿಮೋನ್ ಬೈಲ್ಸ್ (ಬೆಳ್ಳಿ), ಬ್ರೆಜಿಲ್‌ನ ರೆಬೆಕಾ ಆಂಡ್ರೇಡ್ (ಚಿನ್ನ) ಮತ್ತು ಯುಎಸ್‌ನ ಜೋರ್ಡಾನ್ ಚಿಲಿಸ್ (ಕಂಚು) ಫೋಟೋಗೆ ಪೋಸ್ ನೀಡಿದ ಪರಿ ಇದು. ಎಎಫ್‌ಪಿ ಛಾಯಾಗ್ರಾಹಕ ಗೇಬ್ರಿಯಲ್ ಬೌಯ್ಸ್ ಇದನ್ನು "ಸೂಪರ್ ಕ್ಲಾಸಿ ಸನ್ನೆ" ಎಂದು ಬಣ್ಣಿಸಿದ್ದಾರೆ. ದೇಶ ಬೇರೆಯಾದರೂ ಆಟಗಾರರ ನಡುವಿನ ಸಹೋದರತ್ವದ ಸಂಕೇತ ಜನರ ಮನ ಗೆದ್ದಿದೆ. ಪದಕ ಪ್ರದಾನ ಸಮಾರಂಭಕ್ಕೂ ಮೊದಲೇ ಅಮೆರಿಕನ್ನರು ಪರಸ್ಪರ ಮಾತನಾಡುವುದನ್ನು ಗಮನಿಸಿದ್ದ ಫೋಟೋಗ್ರಾಫರ್, ಅದನ್ನು ಕಾದು ಕ್ಲಿಕ್ಕಿಸಿದ್ದಾರೆ.
(2 / 11)
ಬಿಎಂಎಕ್ಸ್ ಚಾಂಪಿಯನ್ ಜೋಸ್ ಟೊರೆಸ್ ಗಿಲ್, ಪ್ಲೇಸ್ ಡಿ ಲಾ ಕಾಂಕಾರ್ಡ್ ನ ಒಬೆಲಿಸ್ಕ್ ಬದಿಯಲ್ಲಿ ಸೈಕಲ್ ತುಳಿಯುತ್ತಿರುವಂತೆ ಕಾಣುವ ಈ ಚಿತ್ರವು, ಪ್ಯಾರಿಸ್ ಗೇಮ್ಸ್‌ನ ಆಕರ್ಷಕ ಚಿತ್ರ. ಅರ್ಜೆಂಟೀನಾದ ಆಟಗಾರ ಚಿನ್ನ ಗೆಲ್ಲುವ ಎರಡು ದಿನಗಳ ಮುಂಚೆ ತರಬೇತಿಯ ಸಮಯದಲ್ಲಿ ಫೋಟೊಗ್ರಾಫರ್ ಜೆಫ್ ಪಚೌಡ್ ಈ ಸಾಧನೆ ಮಾಡಿದ್ದಾರೆ. ಕೇವಲ ಒಂದು ಕ್ಲಿಕ್‌ನಲ್ಲಿ ಈ ಫೋಟೋ ಬಂದಿಲ್ಲ. ಬದಲಿಗೆ ಫೋಟೋ ಬರ್ಸ್ಟ್ (ಏಕಕಾಲಕ್ಕೆ ಹಲವು ಕ್ಲಿಕ್) ಮೂಲಕ ಈ ಚಿತ್ರ ಕೂಡಾ ಬಂದಿದೆ.
(3 / 11)
ಪ್ಯಾರಿಸ್ ಕ್ರೀಡಾಕೂಟದಲ್ಲಿ ಅಚ್ಚರಿಯ ರೀತಿಯಲ್ಲಿ ಜಾಗತಿಕ ಗಮನ ಸೆಳೆದ ಚಿತ್ರವಿದು. ಬ್ರೆಜಿಲ್‌ನ ಸರ್ಫರ್ ಗೇಬ್ರಿಯಲ್ ಮೆಡಿನಾ, ಸಮುದ್ರದ ಅಲೆಗಳ ಮೇಲೆ ಸಾಗುವಾಗ ಆಕಾಶದೆತ್ತರಕ್ಕೆ ಹಾರಿದ್ದಾರೆ. ಅವರ ಹಿಂದೆಯೇ ಲಂಬವಾಗಿ ಅವರ ಸರ್ಫ್ ಬೋರ್ಡ್ ಕೂಡಾ ಕಾಣಿಸಿದೆ. ಈ ಚಿತ್ರ ಕ್ಲಿಕ್ಕಿಸಿದವರು ಜೆರೋಮ್ ಬ್ರೌಲೆಟ್.
(4 / 11)
ಆಗಸ್ಟ್ 4ರಂದು ನೊವಾಕ್ ಜೊಕೊವಿಕ್ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರನ್ನು ಸೋಲಿಸುವ ಮೂಲಕ ಮೊದಲ ಒಲಿಂಪಿಕ್ ಚಿನ್ನ ಗೆದ್ದರು. ಛಾಯಾಗ್ರಾಹಕ ಪ್ಯಾಟ್ರೀಷಿಯಾ ಡಿ ಮೆಲೊ ಮೊರೇರಾ ಅವರು ಪ್ರಶಸ್ತಿಗಳ "ಗೋಲ್ಡನ್ ಸ್ಲಾಮ್" ಎಂದು ಕರೆಯಲ್ಪಡುವ ಕ್ಷಣವನ್ನು ಸೆರೆಹಿಡಿದ ಬಗೆ ಇದು.
(5 / 11)
ಜಿಮ್ನಾಸ್ಟಿಕ್ಸ್ ಸ್ಟಾರ್ ಬೈಲ್ಸ್, ಆಗಸ್ಟ್ 5ರಂದು ಬೀಮ್ಸ್‌ನಲ್ಲಿ ವಿಫಲರಾದ ಬಗೆ ಇದು. ಹೀಗಾಗಿ ಅವರು ಐದನೇ ಸ್ಥಾನ ಪಡೆದರು. ಈ ಕ್ಷಣದಲ್ಲಿ ಲೊಯಿಕ್ ವೆನೆನ್ಸ್ ಅವರು ಕ್ಲಿಕ್ ಮಾಡಿದ ಆಕರ್ಷಕ ಚಿತ್ರವಿದು. ಕಪ್ಪು ಹಿನ್ನೆಲೆಯಲ್ಲಿ ಬೆಳಕಿನ ಫಲಕ ಮತ್ತು ಲೋಗೊಗಳಿಲ್ಲದಂತೆ ಈ ಕ್ಲಿಕ್ ಮಾಡಿದ್ದಾರೆ. ಛಾಯಾಗ್ರಾಹಕ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುವ ಸಲುವಾಗಿ ಜಿಮ್ನಾಸ್ಟಿಕ್ ಆರಂಭಕ್ಕಿಂತ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ಬಂದಿದ್ದರಂತೆ.
(6 / 11)
ಕೌಲಿ ವಾಸ್ಟ್ ಸರ್ಫಿಂಗ್ ಚಿನ್ನದ ಪದಕ ಗೆದ್ದ ಫ್ರಾನ್ಸ್‌ನ ಮೊದಲ ಸರ್ಫರ್ ಆಗಿ ಹೊರಹೊಮ್ಮಿದರು. ನೀರಿನೊಳಗಿನ ಸರ್ಫಿಂಗ್ ಫೋಟೊಗ್ರಫಿಗೆ ಮಾನ್ಯತೆ ಪಡೆದಿದ್ದ ಏಕೈಕ ಏಜೆನ್ಸಿ ಛಾಯಾಗ್ರಾಹಕ ಬೆನ್ ಥೌರ್ಡ್, ಈ ಫೋಟೊ ಸೆರೆಹಿಡಿದಿದ್ದಾರೆ.
(7 / 11)
ಸೀನ್ ನದಿಯ ಕಳಪೆ ನೀರಿನ ಗುಣಮಟ್ಟದಿಂದಾಗಿ ಹಲವಾರು ತರಬೇತಿ ಅವಧಿಗಳನ್ನು ರದ್ದುಗೊಳಿಸಲಾಗಿತ್ತು. ತಿಂಗಳುಗಳ ಸಿದ್ಧತೆಗಳ ಹೊರತಾಗಿಯೂ ಸೀನ್ ನದಿಯಲ್ಲಿ ಈವೆಂಟ್ ನಡೆಸುವುದು ಕೊನೆಯ ಕ್ಷಣದವರೆಗೂ ಅನಿಶ್ಚಿತವಾಗಿತ್ತು. ಅಂತಿಮವಾಗಿ, ಮಹಿಳಾ ಟ್ರಯಥ್ಲಾನ್ ಜುಲೈ 31ರಂದು ನಡೆಯಿತು. ಅಲೆಕ್ಸಾಂಡರ್ III ಸೇತುವೆಯ ಕೆಳಭಾಗದಲ್ಲಿ ಫೋಟೊಗ್ರಾಫರ್ ಮಾರ್ಟಿನ್ ಬ್ಯೂರೋ ತನ್ನ ಕ್ಯಾಮೆರಾಗೆ ವಾಟರ್ ಪ್ರೂಫ್ ಕೇಸ್ ಬಳಸಿ ಮೊದಲ ಒಲಿಂಪಿಕ್ ಡೈವ್ ಸೆರೆಹಿಡಿದಿದ್ದು ಹೀಗೆ.
(8 / 11)
ಸ್ವೀಡನ್ ಅರ್ಮಾಂಡ್ ಡುಪ್ಲಾಂಟಿಸ್, ಪೋಲ್ ವಾಲ್ಟ್‌ನಲ್ಲಿ ತಮ್ಮ ವಿಶ್ವದಾಖಲೆಯನ್ನು 6.25 ಮೀ.ಗೆ ವಿಸ್ತರಿಸುವ ಮೂಲಕ ಮತ್ತೊಂದು ದಾಖಲೆ ಬರೆದರು. ವಿಶ್ವದಾಖಲೆಯ ಫೋಟೊವನ್ನು ಕ್ಲಿಕ್ಕಿಸಿದವರು ಛಾಯಾಗ್ರಾಹಕ ಬೆನ್ ಸ್ಟಾನ್ಸಾಲ್.
(9 / 11)
ಫ್ರೆಂಚ್ ಜೂಡೋ ಆಟಗಾರರು ಜಪಾನ್ ವಿರುದ್ಧ ಮಿಶ್ರ ತಂಡ ಪ್ರಶಸ್ತಿ ಗೆದ್ದು ಸಂಭ್ರಮಿಸುತ್ತಿದ್ದಾಗ, ಜ್ಯಾಕ್ ಗುಯೆಜ್ ಈ ಚಿತ್ರವನ್ನು ಸೆರೆಹಿಡಿದರು. ಸಂಭ್ರಮದಲ್ಲಿದ್ದ ಗುಂಪಿನ ಕೆಳಗೆ ಜಾರಿ ಈ ಕ್ಲಿಕ್ ಮಾಡಿದ್ದಾರೆ. 2021ರ ಟೋಕಿಯೊ ಕ್ರೀಡಾಕೂಟದಲ್ಲಿ ಅವರು ಅದೇ ರೀತಿ ಮಾಡಲು ಆಶಿಸಿದ್ದರು. ಆಗ ಇದು ಸಾಧ್ಯವಾಗಿರಲಿಲ್ಲ.
(10 / 11)
ನಾಲ್ಕು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದಿರುವ ಫ್ರೆಂಚ್ ಈಜುಗಾರ ಲಿಯಾನ್ ಮಾರ್ಚಂಡ್, ಈ ಕ್ರೀಡಾಕೂಟದಲ್ಲಿ ಅತ್ಯಧಿಕ ಪದಕ ಗೆದ್ದ ಸೆನ್ಸೇಷನ್. ಜುಲೈ 30ರಂದು ನಡೆದ 200 ಮೀಟರ್ ಬಟರ್‌ಫ್ಲೈನ ಸೆಮಿಫೈನಲ್‌ನಲ್ಲಿ, ಫೋಟೊಗ್ರಾಫರ್ ಓಲಿ ಸ್ಕಾರ್ಫ್ ನೀರೊಳಗಿನ ಶಾಟ್ ಸೆರೆಹಿಡಿದರು. ಎಎಫ್ಪಿ ಛಾಯಾಗ್ರಾಹಕ ಫ್ರಾಂಕೋಯಿಸ್-ಕ್ಸೇವಿಯರ್ ಮಾರಿಟ್ ಹಲವಾರು ವರ್ಷಗಳಿಂದ ರೊಬೊಟಿಕ್ ಕ್ಯಾಮೆರಾದೊಂದಿಗೆ ಇಂಥಾ ಚಿತ್ರ ಕ್ಲಿಕ್ ಮಾಡಿದ್ದಾರೆ.
(11 / 11)
ಇದು ನಿಜಕ್ಕೂ ಅಭೂತಪೂರ್ವ ಚಿತ್ರ. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳ ನಡುವಣ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲ. ಈ ನಡುವೆ ಟೇಬಲ್ ಟೆನಿಸ್ ಪದಕ ವಿಜೇತರು ವೇದಿಕೆಯ ಮೇಲೆ ಒಟ್ಟಿಗೆ ಸೆಲ್ಫಿ ತೆಗೆದುಕೊಂಡು ಅಚ್ಚರಿ ಮೂಡಿಸಿದರು. ಈ ಎರಡು ದೇಶಗಳು 1953ರಿಂದ ತಾಂತ್ರಿಕವಾಗಿ ಯುದ್ಧದಲ್ಲಿವೆ, ಪ್ರಸ್ತುತ ಉದ್ವಿಗ್ನತೆ ಹೆಚ್ಚಾಗಿದೆ. ಅದರ ನಡುವೆಯೂ, ಕ್ರೀಡೆ ಎಲ್ಲದಕ್ಕಿಂತ ಮೇಲು ಎಂಬುದನ್ನು ಅಥ್ಲೀಟ್‌ಗಳು ಸಾಬೀತುಪಡಿಸಿದ್ದಾರೆ. ಗಡಿಯಾಚೆಗಿನ ಭ್ರಾತೃತ್ವದ ಅಪರೂಪದ ಸಂಕೇತ ಇದಾಗಿದೆ. ಎಎಫ್ಪಿಯ ದಕ್ಷಿಣ ಕೊರಿಯಾದ ಛಾಯಾಗ್ರಾಹಕ ಜಂಗ್ ಯೊನ್-ಜೆ ಈ ಕ್ಲಿಕ್ ಮಾಡಿದ್ದಾರೆ.
ಇತರ ಗ್ಯಾಲರಿಗಳು