ಪ್ಯಾರಿಸ್ ಒಲಿಂಪಿಕ್ಸ್: 1980ರ ನಂತರ ಹಾಕಿಯಲ್ಲಿ ಫೈನಲ್ಗೇರಲು ಭಾರತ ತವಕ; ಜರ್ಮನಿ ವಿರುದ್ಧ ಭಾರತದ್ದೇ ಮೇಲುಗೈ
- India vs Germany: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಹಾಕಿ ಎರಡನೇ ಸೆಮಿಫೈನಲ್ನಲ್ಲಿ ಭಾರತ ಮತ್ತು ಜರ್ಮನಿ ತಂಡಗಳು ಮುಖಾಮುಖಿಯಾಗಲಿವೆ. ಹಾಕಿ ಇತಿಹಾಸದಲ್ಲಿ ಉಭಯ ತಂಡಗಳ ಹೆಡ್ ಟು ಹೆಡ್ ರೆಕಾರ್ಡ್ ಹೇಗಿದೆ? ಇಲ್ಲಿದೆ ವಿವರ.
- India vs Germany: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಹಾಕಿ ಎರಡನೇ ಸೆಮಿಫೈನಲ್ನಲ್ಲಿ ಭಾರತ ಮತ್ತು ಜರ್ಮನಿ ತಂಡಗಳು ಮುಖಾಮುಖಿಯಾಗಲಿವೆ. ಹಾಕಿ ಇತಿಹಾಸದಲ್ಲಿ ಉಭಯ ತಂಡಗಳ ಹೆಡ್ ಟು ಹೆಡ್ ರೆಕಾರ್ಡ್ ಹೇಗಿದೆ? ಇಲ್ಲಿದೆ ವಿವರ.
(1 / 5)
ಕಳೆದ ಬಾರಿ ನಡೆದಿದ್ದ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತದ ಹಾಕಿ ತಂಡ ಈ ಬಾರಿ ಚಿನ್ನಕ್ಕೆ ಗುರಿ ಇಟ್ಟಿದೆ. ಭಾರತ 1980ರ ಮಾಸ್ಕೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕೊನೆಯ ಬಾರಿಗೆ ಚಿನ್ನದ ಪದಕ ಗೆದ್ದಿದ್ದ ಭಾರತ, ಅಂದಿನಿಂದ ಈವರೆಗೂ ಕಂಚು ಗೆದ್ದಿದ್ದೇ ದೊಡ್ಡ ಸಾಧನೆಯಾಗಿದೆ.(HT_PRINT)
(2 / 5)
ಭಾರತದ ಹಾಕಿ ತಂಡ ಸತತ 2ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ಶೂಟೌಟ್ನಲ್ಲಿ 4-1ರಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಿದ ಭಾರತ ಸೆಮೀಸ್ ಪ್ರವೇಶಿಸಿದೆ. ಇದೀಗ ಸೆಮೀಸ್ನಲ್ಲಿ ಜರ್ಮನಿ ತಂಡದೊಂದಿಗೆ ಸೆಣಸಾಟ ನಡೆಸಲಿದೆ. ಇಲ್ಲಿ ಭಾರತ ಗೆದ್ದರೆ 44 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದಂತಾಗುತ್ತದೆ. ಭಾರತ ಒಟ್ಟು 12 ಪದಕ ಜಯಿಸಿದೆ. 8 ಚಿನ್ನ, 1 ಬೆಳ್ಳಿ, 3 ಕಂಚು.(HT_PRINT)
(3 / 5)
ಉಭಯ ತಂಡಗಳ ಮುಖಾಮುಖಿ ನೋಡುವುದಾದರೆ, ಜರ್ಮನಿಯ ವಿರುದ್ಧ ಭಾರತವೇ ಗೆಲ್ಲುವ ಫೇವರಿಟ್ ಆಗಿದೆ. ಹಾಕಿ ಇತಿಹಾಸದಲ್ಲಿ ಜರ್ಮನಿ ವಿರುದ್ಧ ಭಾರತವೇ ಮೇಲುಗೈ ಸಾಧಿಸಿದೆ. ಒಟ್ಟು 18 ಬಾರಿ ಮುಖಾಮುಖಿ ಆಗಿದ್ದು, ಭಾರತ 8ರಲ್ಲಿ ಗೆಲುವು, ಜರ್ಮನಿ 6 ಗೆಲುವು ಸಾಧಿಸಿದೆ. ಉಳಿದ ನಾಲ್ಕು ಪಂದ್ಯಗಳು ಡ್ರಾಗೊಂಡಿವೆ.(Doordarshan Sports-X)
(4 / 5)
ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಹಾಕಿ ಕಂಚಿನ ಪದಕದ ಪಂದ್ಯದಲ್ಲೂ ಜರ್ಮನಿಯ ವಿರುದ್ಧ ಭಾರತವೇ ಜಯಿಸಿತ್ತು. ಅಂದು 5-4ರಲ್ಲಿ ಗೆದ್ದು ಕಂಚಿಗೆ ಮುತ್ತಿಕ್ಕಿತ್ತು. ಕಳೆದ ಆರು ಕೂಟಗಳಲ್ಲಿ ಭಾರತ ಐದರಲ್ಲಿ ಜಯಿಸಿದೆ. ಒಂದು ಪಂದ್ಯ ಜರ್ಮನಿ ಗೆದ್ದಿದೆ. (PTI)
(5 / 5)
ಅದಾಗ್ಯೂ, ಇತ್ತೀಚೆಗೆ ಮುಖಾಮುಖಿಯಾದ ಎಫ್ಐಎಚ್ ಲೀಗ್‌ನಲ್ಲಿ ಜರ್ಮನಿ ವಿರುದ್ಧ ಭಾರತ 3-2 ಅಂತರದಿಂದ ಸೋತಿತ್ತು. ಇದೀಗ ಆಗಸ್ಟ್ 6 ರಂದು ಭಾರತ ಮತ್ತು ಜರ್ಮನಿ ನಡುವಿನ ಸೆಮಿಫೈನಲ್ ಪಂದ್ಯ ರಾತ್ರಿ 10.30ಕ್ಕೆ ನಡೆಯಲಿದೆ. ಜಿಯೋ ಸಿನಿಮಾ ಅಪ್ಲಿಕೇಷನ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು, ಸ್ಪೋರ್ಟ್ಸ್ 18-1 ಮತ್ತು ಸ್ಪೋರ್ಟ್ಸ್ 18-2 ಚಾನೆಲ್ನಲ್ಲೂ ಪಂದ್ಯ ವೀಕ್ಷಿಸಬಹುದು.
ಇತರ ಗ್ಯಾಲರಿಗಳು