ಪ್ಯಾರಿಸ್‌ ಒಲಿಂಪಿಕ್ಸ್: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ, ಮುಂದಿನ ಎದುರಾಳಿ ಬಲಿಷ್ಠ ಬೆಲ್ಜಿಯಂ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ಯಾರಿಸ್‌ ಒಲಿಂಪಿಕ್ಸ್: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ, ಮುಂದಿನ ಎದುರಾಳಿ ಬಲಿಷ್ಠ ಬೆಲ್ಜಿಯಂ

ಪ್ಯಾರಿಸ್‌ ಒಲಿಂಪಿಕ್ಸ್: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ, ಮುಂದಿನ ಎದುರಾಳಿ ಬಲಿಷ್ಠ ಬೆಲ್ಜಿಯಂ

  • ಭಾರತ ಪುರುಷರ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿದೆ. 'ಬಿ' ಗುಂಪಿನಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಬೆಲ್ಜಿಯಂ ಜಯ ಸಾಧಿಸುತ್ತಿದ್ದಂತೆಯೇ, ಭಾರತಕ್ಕೆ ಕ್ವಾರ್ಟರ್‌ ಫೈನಲ್‌ ಟಿಕೆಟ್‌ ಖಚಿತವಾಗಿದೆ. ಭಾರತದ ಜೊತೆಗೆ ಬೆಲ್ಜಿಯಂ ಕೂಡಾ ನಾಕೌಟ್ ಹಂತ ಪ್ರವೇಶಿಸಿದೆ.

ಭಾರತದ ಪುರುಷರ ಹಾಕಿ ತಂಡವು, ಮಂಗಳವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2-0 ಅಂತರದ ಗೆಲುವು ದಾಖಲಿಸಿತ್ತು. ಆಗ ಕ್ವಾರ್ಟರ್‌ ಫೈನಲ್‌ ಸ್ಥಾನ ಖಚಿತವಾಗಿರಲಿಲ್ಲ. ಆ ಬಳಿಕ ಬೆಲ್ಜಿಯಂ ಹಾಗೂ ಅರ್ಜೆಂಟೀನಾ ಗೆಲುವಿನೊಂದಿಗೆ ಭಾರತದ ಮುಂದಿನ ಹಂತ ಪ್ರವೇಶ ಖಚಿತವಾಗಿದೆ. 
icon

(1 / 5)

(PTI)

ಮಂಗಳವಾರದ ಮತ್ತೊಂದು ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅರ್ಜೆಂಟೀನಾ 2-0 ಗೋಲಿನಿಂದ ಜಯ ಸಾಧಿಸಿತು. ಆಗ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಸ್ಥಾನ ಖಚಿತವಾಗಿತ್ತು. 
icon

(2 / 5)

(AP)

ಬೆಲ್ಜಿಯಂ ತಂಡವು ಆಸ್ಟ್ರೇಲಿಯಾವನ್ನು 6-2 ಅಂತರದಿಂದ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಬೆಲ್ಜಿಯಂ ಫಲಿತಾಂಶದ ನಂತರ, ಭಾರತವು ಮೂರು ಪಂದ್ಯಗಳಲ್ಲಿ ಏಳು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬೆಲ್ಜಿಯಂ ಒಂಬತ್ತು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
icon

(3 / 5)

ನ್ಯೂಜಿಲೆಂಡ್ ವಿರುದ್ಧ ಭಾರತವು 3-2 ಗೋಲುಗಳ ಅಂತರದ ರೋಚಕ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ಅರ್ಜೆಂಟೀನಾ ವಿರುದ್ಧದ ಎರಡನೇ ಪಂದ್ಯ ಡ್ರಾಗೊಂಡರೆ, ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಗೆದ್ದಿತು.
icon

(4 / 5)

(REUTERS)

ಕ್ವಾರ್ಟರ್ ಫೈನಲ್ ಪ್ರವೇಶಿಸಿದ ವಿಶ್ವಾಸದಲ್ಲಿರುವ ಭಾರತ ತಂಡ, ಗುರುವಾರ ನಡೆಯಲಿರುವ 'ಬಿ' ಗುಂಪಿನ ತನ್ನ ಅಂತಿಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
icon

(5 / 5)

ಇತರ ಗ್ಯಾಲರಿಗಳು