ಒಲಿಂಪಿಕ್ಸ್ ಉದ್ಘಾಟನೆ; ಗಾಜಾ ಮೇಲೆ ಇಸ್ರೇಲ್ ದಾಳಿಯ ಥೀಮ್ ಹೊಂದಿರುವ ಶರ್ಟ್ ಧರಿಸಿದ್ದ ಪ್ಯಾಲೆಸ್ತೀನ್ ಬಾಕ್ಸರ್
Wasim Abusal: ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಗಾಜಾ ಮೇಲೆ ಇಸ್ರೇಲ್ ದಾಳಿಯ ಥೀಮ್ ಹೊಂದಿರುವ ಶರ್ಟ್ ಅನ್ನು ಪ್ಯಾಲೆಸ್ತೀನ್ ಬಾಕ್ಸರ್ ವಾಸಿಮ್ ಅಬುಸಲ್ ಅವರು ಧರಿಸಿದ್ದಾರೆ.
(1 / 5)
ಪ್ಯಾಲೆಸ್ತೀನ್ ಬಾಕ್ಸರ್ ವಾಸಿಮ್ ಅಬುಸಲ್ ಪ್ಯಾರಿಸ್ ಒಲಿಂಪಿಕ್ಸ್-2024 ಉದ್ಘಾಟನಾ ಮೆರವಣಿಗೆಯಲ್ಲಿ ಗಾಜಾ ಮೇಲೆ ಇಸ್ರೇಲ್ ನಡೆಸಿದ್ದ ದಾಳಿಯ ಥೀಮ್ ಹೊಂದಿರುವ ಶರ್ಟ್ ಧರಿಸಿದ್ದರು. ಇದಾದ ಒಂದು ವಾರದ ನಂತರ ಈ ಶರ್ಟ್ ವೈರಲ್ ಆಗಿದ್ದು, ಚರ್ಚೆ ಹುಟ್ಟು ಹಾಕಿದೆ.
(AFP)(2 / 5)
ಜುಲೈ 26ರಂದು ನಡೆದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ದಿನದಂದು ಸೀನ್ ನದಿಯಲ್ಲಿ 85 ದೋಣಿಗಳಲ್ಲಿ 6 ಕಿಲೋಮೀಟರ್ ಪರೇಡ್ ಮಾಡಿದ 6,800 ಕ್ರೀಡಾಪಟುಗಳಲ್ಲಿ ಅಬುಸಲ್ ಕೂಡ ಒಬ್ಬರು. ಪ್ಯಾಲೇಸ್ತಿನ್ಗೆ ಬೆಂಬಲ ಸೂಚಿಸುವ ಶರ್ಟ್ ಇದಾಗಿದೆ.
(REUTERS)(3 / 5)
ವಾಸಿಮ್ ಅಬುಸಲ್ ಧರಿಸಿದ್ದ ಶರ್ಟ್ ಮುಂಭಾಗ ಸಾಕರ್ ಆಡುತ್ತಿರುವ ಮಕ್ಕಳ ಮೇಲೆ ಯುದ್ಧ ವಿಮಾನಗಳಿಂದ ಬಾಂಬ್‌ಗಳನ್ನು ಬೀಳಿಸುವುದನ್ನು ನೋಡಬಹುದು. ಆದರೆ, ಶರ್ಟ್ ಹಿಂಭಾಗದಲ್ಲಿ ತಲೆಮುಸುಕು ಹಾಕಿರುವ ಚಿತ್ರ, ಒಂದು ಕಾಲರ್‌ನಲ್ಲಿ ಆಲಿವ್ ಶಾಖೆ, ಮತ್ತು ಇನ್ನೊಂದರಲ್ಲಿ ಒಲಿಂಪಿಕ್ಸ್ ಐದು ರಿಂಗ್ಗಳಿವೆ.
(AP)(4 / 5)
ಈ ಶರ್ಟ್ ಧರಿಸಿದ್ದಕ್ಕೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ಯಾಲೆಸ್ತೀನ್‌ನ ಅಥ್ಲೀಟ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಗಡಿಯಾಚೆಗಿನ ದಾಳಿಯ ನಂತರ ಇಸ್ರೇಲ್ 39,000ಕ್ಕೂ ಹೆಚ್ಚು ಪ್ಯಾಲೆಸ್ತಿಯರನ್ನು ಕೊಂದಿತ್ತು.
(AP)ಇತರ ಗ್ಯಾಲರಿಗಳು