ಪರಾಗ್ವೆ ಈಜುಗಾರ್ತಿ ಒಲಿಂಪಿಕ್ಸ್​ನಿಂದ​ ಔಟ್; ಇಷ್ಟಕ್ಕೂ ಈ ಬ್ಯೂಟಿಯನ್ನು ಹೊರದಬ್ಬಿದ್ದೇಕೆ?-sports news paraguayan swimmer luana alonso kicked out of olympics village over inappropriate behaviour prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪರಾಗ್ವೆ ಈಜುಗಾರ್ತಿ ಒಲಿಂಪಿಕ್ಸ್​ನಿಂದ​ ಔಟ್; ಇಷ್ಟಕ್ಕೂ ಈ ಬ್ಯೂಟಿಯನ್ನು ಹೊರದಬ್ಬಿದ್ದೇಕೆ?

ಪರಾಗ್ವೆ ಈಜುಗಾರ್ತಿ ಒಲಿಂಪಿಕ್ಸ್​ನಿಂದ​ ಔಟ್; ಇಷ್ಟಕ್ಕೂ ಈ ಬ್ಯೂಟಿಯನ್ನು ಹೊರದಬ್ಬಿದ್ದೇಕೆ?

  • Paraguayan swimmer Luana Alonso: ಪರಾಗ್ವೆಯ ಈಜುಗಾರ್ತಿ ಲುವಾನಾ ಅಲೊನ್ಸೊ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಪಟುಗಳ ಗ್ರಾಮದಿಂದ ಹೊರ ಹಾಕಲಾಗಿದೆ ಎಂದು ವರದಿಯಾಗಿದೆ.

ಪರಾಗ್ವೆಯ ಈಜುಗಾರ್ತಿ ಲುವಾನಾ ಅಲೊನ್ಸೊ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಗ್ರಾಮದಿಂದ ಹೊರ ಹಾಕಲಾಗಿದೆ.
icon

(1 / 7)

ಪರಾಗ್ವೆಯ ಈಜುಗಾರ್ತಿ ಲುವಾನಾ ಅಲೊನ್ಸೊ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಗ್ರಾಮದಿಂದ ಹೊರ ಹಾಕಲಾಗಿದೆ.(All Photos from Luana Alonso)

ಗ್ಲಾಮರ್​ಗೆ ಹೆಸರುವಾಸಿಯಾದ 20 ವರ್ಷದ ಈಜುಗಾರ್ತಿ, ಜುಲೈ 27ರಂದು ನಡೆದ ಮಹಿಳೆಯರ 100 ಮೀಟರ್ ಬಟರ್​​ಫ್ಲೈ ಸ್ಪರ್ಧೆಯಲ್ಲಿ ಸೆಮಿಫೈನಲ್​ಗೆ ಪ್ರವೇಶಿಸಲು ವಿಫಲರಾದರು.
icon

(2 / 7)

ಆ ಬಳಿಕ ಕ್ರೀಡಾಗ್ರಾಮದಲ್ಲೇ ಉಳಿದಿದ್ದ ಲುವಾನಾ, ಅನೈತಿಕವಾಗಿ ವರ್ತಿಸಿದ್ದರು. ಹೇಳದೆ ಕೇಳದೆ ಕ್ರೀಡಾ ಗ್ರಾಮದಿಂದ ಹೊರಗೆ ಹೋಗಿದ್ದರು.
icon

(3 / 7)

ದಿ ಸನ್ ಪ್ರಕಾರ, ತನ್ನ ತಂಡದ ಸದಸ್ಯರನ್ನು ಬೆಂಬಲಿಸಲು ಕ್ರೀಡಾ ಗ್ರಾಮದಲ್ಲಿ ಉಳಿಯುವ ಬದಲಿಗೆ ಪ್ಯಾರಿಸ್​​​​​ನ ಡಿಸ್ನಿಲ್ಯಾಂಡ್ ನೋಡಲು ಪಲಾಯನ ಮಾಡಿದ್ದರು. ಹೀಗಾಗಿ ಒಲಿಂಪಿಕ್ಸ್​ ಆಯೋಜಕರು ಕ್ರೀಡಾಗ್ರಾಮ ತೊರೆಯುವಂತೆ ಆದೇಶಿಸಿದ್ದಾರೆ.
icon

(4 / 7)

ಪರಾಗ್ವೆ ಒಲಿಂಪಿಕ್ಸ್ ಸಮಿತಿಯೂ ಬೇಸರ ವ್ಯಕ್ತಪಡಿಸಿ ಆಕೆಯ ಉಪಸ್ಥಿತಿಯು ಪರಾಗ್ವೆ ತಂಡಕ್ಕೆ ಸೂಕ್ತವಲ್ಲದ ವಾತಾವರಣ ಸೃಷ್ಟಿಸುತ್ತದೆ ಎಂದು ಮುಖ್ಯಸ್ಥ ಲಾರಿಸ್ಸಾ ಸ್ಕೀರೆರ್ ಹೇಳಿದ್ದಾರೆ. 
icon

(5 / 7)

ಇನ್​ಸ್ಟಾಗ್ರಾಂನಲ್ಲಿ 5 ಲಕ್ಷ, 65 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಈ ಘಟನೆಯ ಬೆನ್ನಲ್ಲೇ ಆಕೆ ನಿವೃತ್ತಿ ಘೋಷಿಸಿದ್ದು, ಇನ್​ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಈಗ ಅಧಿಕೃತವಾಗಿದೆ! ನಾನು ಈಜಿನಿಂದ ನಿವೃತ್ತನಾಗುತ್ತಿದ್ದೇನೆ, ನಿಮ್ಮ ಬೆಂಬಲಕ್ಕೆ ತುಂಬಾ ಧನ್ಯವಾದಗಳು! ಕ್ಷಮಿಸಿ ಪರಾಗ್ವೆ, ನಾನು ನಿಮಗೆ ಧನ್ಯವಾದ ಹೇಳಬಲ್ಲೆ ಎಂದು ಹೇಳಿದ್ದಾರೆ.
icon

(6 / 7)

ನಿವೃತ್ತಿಯ ಪೋಸ್ಟ್​ ನಂತರ ನನಗೆ ಕನಸು ಕಾಣಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು, ನೀವು ನನಗೆ ಹೋರಾಡಲು, ಪ್ರಯತ್ನಿಸಲು, ಪರಿಶ್ರಮ, ತ್ಯಾಗ, ಶಿಸ್ತು ಮತ್ತು ಹೆಚ್ಚಿನದನ್ನು ಕಲಿಸಿದ್ದೀರಿ ಎಂದು ಬರೆದಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು