ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 6ನೇ ಪದಕ; ಕುಸ್ತಿಯಲ್ಲಿ ಐತಿಹಾಸಿಕ ಕಂಚು ಗೆದ್ದ ಅಮನ್ ಸೆಹ್ರಾವತ್
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಆರನೇ ಪದಕ ಗೆದ್ದಿದೆ. ಪುರುಷರ 57 ಕೆಜಿ ವಿಭಾಗದ ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಭಾರತದ ಮೊದಲನೇ ಪದಕವಾಗಿದೆ. ವಿನೇಶ್ ಫೋಗಟ್ ಅನರ್ಹಗೊಂಡ ಬಳಿಕ, ಕುಸ್ತಿಯಲ್ಲಿ ಅಮನ್ ಪದಕದ ಕೊರತೆಯನ್ನು ನೀಗಿಸಿದ್ದಾರೆ.

(1 / 5)
ಪುರುಷರ 57 ಕೆಜಿ ವಿಭಾಗದ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಕಂಚಿನ ಪದಕ ಗದ್ದಿದ್ದಾರೆ. ಪೋರ್ಟೊ ರಿಕೊದ ಡೇರಿಯನ್ ಟೊಯಿ ಕ್ರೂಜ್ ವಿರುದ್ಧ 21ರ ಹರೆಯದ ಯುವಕ ಅಮನ್ ರೋಚಕ ಜಯ ಸಾಧಿಸಿದ್ದಾರೆ.(HT_PRINT)
(2 / 5)
ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಮನ್ ಜಪಾನ್‌ನ ಅಗ್ರ ಶ್ರೇಯಾಂಕದ ಕುಸ್ತಿಪಟು ರೇ ಹಿಗುಚಿ ವಿರುದ್ಧ ಸೋಲು ಕಂಡಿದ್ದರು. ಹೀಗಾಗಿ ಇಂದು ಕಂಚಿನ ಪದಕ ಪಂದ್ಯದಲ್ಲಿ ಆಡಿದ್ದಾರೆ.(HT_PRINT)
(3 / 5)
ಹರಿಯಾಣದ 21 ವರ್ಷದ ಕುಸ್ತಿಪಟು ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ಪದಕ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪದಕವನ್ನು ದೇಶಕ್ಕೆ ಅರ್ಪಿಸುವುದಾಗಿ ಪಂದ್ಯದ ಬಳಿಕ ಅಮನ್ ತಿಳಿಸಿದ್ದಾರೆ.
(4 / 5)
2008ರ ಒಲಿಂಪಿಕ್ಸ್‌ನಿಂದಲೂ ಭಾರತೀಯ ಕುಸ್ತಿಪಟುಗಳು ಪದಕವಿಲ್ಲದೇ ದೇಶಕ್ಕೆ ಮರಳಿಲ್ಲ. ಈ ಬಾರಿ ಕುಸ್ತಿ ಪದಕದ ಕೊರತೆಯಾಗುವ ಭೀತಿಯಿತ್ತು. ಆದರೆ, ಅಮನ್ ಅದಕ್ಕೆ ಅವಕಾಶ ನೀಡಿಲ್ಲ.(AP)
ಇತರ ಗ್ಯಾಲರಿಗಳು