ಕಂಚು ಗೆದ್ದ ಭಾರತ ಹಾಕಿ ತಂಡದ ಭರ್ಜರಿ ಸಂಭ್ರಮಾಚರಣೆ; ಶ್ರೀಜೇಶ್ ಎತ್ತಿ ಹಿಡಿದು ಮೆರವಣಿಗೆ ನಡೆಸಿದ ಆಟಗಾರರು -Photos
- ಭಾರತೀಯ ಪುರುಷರ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದಿದೆ. ಕಳೆದ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದ ಭಾರತ, ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಕಂಚಿನ ಪದಕ ಗೆದ್ದಿದೆ. ಐತಿಹಾಸಿಕ ವಿಜಯದ ಬೆನ್ನಲ್ಲೇ ಹರ್ಮನ್‌ಪ್ರೀತ್ ಸಿಂಗ್ ಬಳಗವು ಮೈದಾನದಲ್ಲಿ ಭರ್ಜರಿ ಸಂಭ್ರಮಾಚರಣೆ ಮಾಡಿದೆ.

(1 / 10)
ಸ್ಪೇನ್ ವಿರುದ್ಧ ಕಂಚಿನ ಪದಕವನ್ನು ಗೆದ್ದ ನಂತರ ಭಾರತ ತಂಡದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಗೆಲುವನ್ನು ಭಾವುಕವಾಗಿ ಸಂಭ್ರಮಿಸಿದರು. ಶ್ರೀಜೇಶ್ ಅವರಿಗೆ ಭಾರತದ ಪರ ಇದು ಕೊನೆಯ ಪಂದ್ಯ.(PTI)
(2 / 10)
ಸ್ಪೇನ್ ವಿರುದ್ಧ 2-1 ಗೋಲುಗಳ ಅಂತರದ ಜಯ ಸಾಧಿಸಿದ ಭಾರತ ಪುರುಷರ ಹಾಕಿ ತಂಡವು, ಗೆಲುವನ್ನು ಶ್ರೀಜೇಶ್ ಅವರಿಗೆ ಅರ್ಪಿಸಿದೆ.(PTI)
(3 / 10)
1972ರ ನಂತರ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಬಾರಿ ಭಾರತ ತಂಡ ಪದಕಗಳನ್ನು ಗೆದ್ದ ಸಾಧನೆ ಮಾಡಿದೆ.(PTI)
(4 / 10)
ಕಂಚಿನ ಪದಕವನ್ನು ಭಾರತ ಗೆದ್ದ ನಂತರ ಭಾರತದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಸಹ ಆಟಗಾರರೊಂದಿಗೆ ಸಂಭ್ರಮಿಸಿದ್ದು ಹೀಗೆ.(PTI)
(6 / 10)
ವಿದಾಯ ಪಂದ್ಯದಲ್ಲಿ ಆಡಿದ ಗೋಲ್ ಕೀಪರ್ ಶ್ರೀಜೇಶ್ ಅವರನ್ನು ಹೊತ್ತು ಮೈದಾನದುದ್ದಕ್ಕೂ ಸಹ ಆಟಗಾರರು ಮೆರವಣಿಗೆ ನಡೆಸಿದರು.(AFP)
(7 / 10)
ಭಾರತಕ್ಕೆ ಒಲಿಂಪಿಕ್ಸ್ ಹಾಕಿ ಇತಿಹಾಸದಲ್ಲಿ ಇದು 13ನೇ ಪದಕ. ಇದರಲ್ಲಿ 8 ಚಿನ್ನದ ಪದಕಗಳಿವೆ. ಹಾಕಿಯಲ್ಲಿ ಅತ್ಯಂತ ಯಶಸ್ವಿ ತಂಡ ಎಂಬ ಹಿರಿಮೆ ಭಾರತದ್ದು.(REUTERS)
(8 / 10)
ತಂಡದ ಸಹ ಆಟಗಾರರೊಂದಿಗೆ ಶ್ರೀಜೇಶ್ ಅವರ ಸಂಭ್ರಮಾಚರಣೆ. ಪಂದ್ಯಾವಳಿಯುದ್ದಕ್ಕೂ ಗೋಲ್ ಬಾಕ್ಸ್ ಬಳಿ ಗೋಡೆಯಂತೆ ನಿಂತವರು ಇವರೇ. ದಿ ಗ್ರೇಟ್ ವಾಲ್.(PTI)
(9 / 10)
ಪಂದ್ಯವನ್ನು ನೋಡಲು ಮೈದಾನದಲ್ಲಿ ನೂರಾರು ಅಭಿಮಾನಿಗಳು ಸೇರಿದ್ದರು. ಅವರಿಗೆ ಆಟಗಾರರು ವಂದನೆ ಸಲ್ಲಿಸಿದರು.(REUTERS)
ಇತರ ಗ್ಯಾಲರಿಗಳು