ವಿನೇಶ್ ಫೋಗಟ್ ಅನರ್ಹ, ಅಂತಿಮ್ ಪಂಘಲ್‌ಗೆ ಸೋಲು; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂದು ಭಾರತಕ್ಕೆ ಸಂಪೂರ್ಣ ನಿರಾಶೆ
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 7ರಂದು ಭಾರತಕ್ಕೆ ಭಾರಿ ನಿರಾಶೆಯಾಗಿದೆ. ಭಾರತಕ್ಕೆ ಚಿನ್ನದ ಪದಕ ನಿರೀಕ್ಷೆಯಿದ್ದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಯ್ತು. ಉಳಿದಂತೆ ಅಂತಿಮ್ ಪಂಘಲ್ ಕೂಡಾ ಸೋಲುವ ಮೂಲಕ ಪದಕದ ನಿರೀಕ್ಷೆ ಕಮರಿದೆ. ಇಂದು ರಾತ್ರಿ ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

(1 / 5)
ಮಹಿಳೆಯರ 100 ಮೀಟರ್ ಹರ್ಡಲ್ಸ್‌ನ ಹೀಟ್ಸ್‌ನಲ್ಲಿ ಜ್ಯೋತಿ ಯರ್ರಾಜಿ ಏಳನೇ ಸ್ಥಾನ ಪಡೆದರು. ಇದೇ ವೇಳೆ ಮಹಿಳಾ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅನ್ನು ರಾಣಿ 29ನೇ ಸ್ಥಾನ ಪಡೆದರು. ಪುರುಷರ ಹೈಜಂಪ್‌ನಲ್ಲಿ ಸರ್ವೇಶ್ ಕುಸಾರೆ 25ನೇ ಸ್ಥಾನ ಪಡೆದರು.(Reuters)
(2 / 5)
ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಅಂತಿಮ್ ಪಂಘಲ್ ನಿರಾಶೆ ಅನುಭವಿಸಿದರು. 16ನೇ ಸುತ್ತಿನ ಪಂದ್ಯದಲ್ಲಿ ಟರ್ಕಿಯ ಜೈನೆಪ್ ಯೆಟ್ಗಿಲ್ ಎದುರು ಸೋಲು ಕಂಡರು. ಇದರೊಂದಿಗೆ ಕುಸ್ತಿಯಲ್ಲಿ ವಿನೇಶ್ ಜೊತೆಗೆ ಪಂಗಲ್ ಅಭಿಯಾನವೂ ಅಂತ್ಯವಾಗಿದೆ.(AP)
(3 / 5)
ಮಹಿಳಾ ಟೇಬಲ್ ಟೆನಿಸ್ ತಂಡ ಸ್ಪರ್ಧೆಯ ಕ್ವಾರ್ಟರ್ ಫೈನಲ್‌ನಲ್ಲಿ ಭಾರತವು ಜರ್ಮನಿ ವಿರುದ್ಧ ಸೋತಿತು. ಶ್ರೀಜಾ ಅಕುಲಾ ಮತ್ತು ಅರ್ಚನಾ ಕಾಮತ್ ಮೊದಲ ಗೇಮ್‌ನಲ್ಲಿ 5-11, 11-8, 10-12, 6-11 ಸೆಟ್ ಗಳಿಂದ ಸೋತರು. ಒಟ್ಟಾರೆಯಾಗಿ ಭಾರತ 1-3 ಅಂತರದಲ್ಲಿ ಜರ್ಮನ್ ಎದುರು ಮುಗ್ಗರಿಸಿತು.(PTI)
(4 / 5)
ವಿನೇಶ್ ಫೋಗಟ್ ಅವರು ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಂಡರು. ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ತೂಕ ಇದ್ದ ಕಾರಣದಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಹೀಗಾಗಿ ಕುಸ್ತಿಯಲ್ಲಿ ಯಾವುದೇ ಪದಕವಿಲ್ಲದೆ ವಿನೇಶ್ ಹೊರಬಿದ್ದಿದ್ದಾರೆ.(PTI)
ಇತರ ಗ್ಯಾಲರಿಗಳು