ಪಿಆರ್​​ ಶ್ರೀಜೇಶ್ 2ನೇ ಇನ್ನಿಂಗ್ಸ್ ಆರಂಭ; ವಿದಾಯ ಘೋಷಿಸಿದ ‘ಗೋಡೆ’ಗೆ ಹೊಸ ಜವಾಬ್ದಾರಿ ನೀಡಿದ ಹಾಕಿ ಇಂಡಿಯಾ-sports news pr sreejesh becomes indian mens hockey team head coach right after retirement following paris olympics glory ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಿಆರ್​​ ಶ್ರೀಜೇಶ್ 2ನೇ ಇನ್ನಿಂಗ್ಸ್ ಆರಂಭ; ವಿದಾಯ ಘೋಷಿಸಿದ ‘ಗೋಡೆ’ಗೆ ಹೊಸ ಜವಾಬ್ದಾರಿ ನೀಡಿದ ಹಾಕಿ ಇಂಡಿಯಾ

ಪಿಆರ್​​ ಶ್ರೀಜೇಶ್ 2ನೇ ಇನ್ನಿಂಗ್ಸ್ ಆರಂಭ; ವಿದಾಯ ಘೋಷಿಸಿದ ‘ಗೋಡೆ’ಗೆ ಹೊಸ ಜವಾಬ್ದಾರಿ ನೀಡಿದ ಹಾಕಿ ಇಂಡಿಯಾ

  • PR Sheejesh: ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿರುವ ಭಾರತದ ಗೋಲ್ ಕೀಪರ್ ಪಿಆರ್​ ಶ್ರೀಜೇಶ್ ಅವರಿಗೆ ಹಾಕಿ ಇಂಡಿಯಾ ಹೊಸ ಜವಾಬ್ದಾರಿ ನೀಡಿದೆ. 

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಗೆದ್ದ ನಂತರ ವಿದಾಯ ಘೋಷಿಸಿದ ಭಾರತ ಹಾಕಿ ತಂಡದ ಗೋಲ್​ ಕೀಪರ್​ ಪಿಆರ್​​ ಶ್ರೀಜೇಶ್ (36)​ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.
icon

(1 / 6)

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಗೆದ್ದ ನಂತರ ವಿದಾಯ ಘೋಷಿಸಿದ ಭಾರತ ಹಾಕಿ ತಂಡದ ಗೋಲ್​ ಕೀಪರ್​ ಪಿಆರ್​​ ಶ್ರೀಜೇಶ್ (36)​ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.(PTI)

ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಇದೇ ಕೊನೆಯ ಅಂತಾರಾಷ್ಟ್ರೀಯ ಹಾಕಿ ಟೂರ್ನಿ ಎಂದಿದ್ದರು. ಇದೀಗ ಸ್ಮರಣೀಯ ಕಂಚಿನ ಪದಕದೊಂದಿಗೆ ಶ್ರೀಜೇಶ್ ಆಟ ಮುಗಿಸಿದ್ದಾರೆ.
icon

(2 / 6)

ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಇದೇ ಕೊನೆಯ ಅಂತಾರಾಷ್ಟ್ರೀಯ ಹಾಕಿ ಟೂರ್ನಿ ಎಂದಿದ್ದರು. ಇದೀಗ ಸ್ಮರಣೀಯ ಕಂಚಿನ ಪದಕದೊಂದಿಗೆ ಶ್ರೀಜೇಶ್ ಆಟ ಮುಗಿಸಿದ್ದಾರೆ.(PTI)

ಕಂಚಿನ ಪದಕದ ಪಂದ್ಯದಲ್ಲಿ ಭಾರತವು ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿತ್ತು. ಇದರೊಂದಿಗೆ ಶ್ರೀಜೇಶ್​ಗೆ ಹಾಕಿ ತಂಡ ಭಾವನಾತ್ಮಕ ಬೀಳ್ಕೊಡುಗೆ ನೀಡಿದೆ.
icon

(3 / 6)

ಕಂಚಿನ ಪದಕದ ಪಂದ್ಯದಲ್ಲಿ ಭಾರತವು ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿತ್ತು. ಇದರೊಂದಿಗೆ ಶ್ರೀಜೇಶ್​ಗೆ ಹಾಕಿ ತಂಡ ಭಾವನಾತ್ಮಕ ಬೀಳ್ಕೊಡುಗೆ ನೀಡಿದೆ.(PTI)

ಇದೀಗ ಶ್ರೀಜೇಶ್​​ಗೆ ಹಾಕಿ ಇಂಡಿಯಾ ಪ್ರಮುಖ ಹುದ್ದೆಯೊಂದನ್ನು ನೀಡಿದೆ. ಜೂನಿಯರ್​ ಪುರುಷರ ಹಾಕಿ ತಂಡಕ್ಕೆ ಮುಖ್ಯಕೋಚ್​ ಆಗಿ ಅವರನ್ನು ನೇಮಿಸಲಾಗಿದೆ. ಭಾರತದ ಜೂನಿಯರ್​ (21) ಹಾಕಿ ತಂಡದ ಕೋಚ್​ ಆಗಿ ಆರಂಭಿಸಲಿದ್ದಾರೆ.
icon

(4 / 6)

ಇದೀಗ ಶ್ರೀಜೇಶ್​​ಗೆ ಹಾಕಿ ಇಂಡಿಯಾ ಪ್ರಮುಖ ಹುದ್ದೆಯೊಂದನ್ನು ನೀಡಿದೆ. ಜೂನಿಯರ್​ ಪುರುಷರ ಹಾಕಿ ತಂಡಕ್ಕೆ ಮುಖ್ಯಕೋಚ್​ ಆಗಿ ಅವರನ್ನು ನೇಮಿಸಲಾಗಿದೆ. ಭಾರತದ ಜೂನಿಯರ್​ (21) ಹಾಕಿ ತಂಡದ ಕೋಚ್​ ಆಗಿ ಆರಂಭಿಸಲಿದ್ದಾರೆ.(PTI)

ಶ್ರೀಜೇಶ್ ಒಟ್ಟು 4 ಒಲಿಂಪಿಕ್ಸ್​ ಆಡಿದ್ದು, ಈ ಪೈಕಿ 2​ ಪದಕ ಗೆದ್ದಿದ್ದಾರೆ. 18 ವರ್ಷಗಳ ವೃತ್ತಿಜೀವನವನ್ನು ಕೊನೆಗೊಳಿಸಿರುವ ಶ್ರೀಜೇಶ್​, 2006 ರಲ್ಲಿ ಹಾಕಿಗೆ ಪದಾರ್ಪಣೆ ಮಾಡಿದ್ದರು.
icon

(5 / 6)

ಶ್ರೀಜೇಶ್ ಒಟ್ಟು 4 ಒಲಿಂಪಿಕ್ಸ್​ ಆಡಿದ್ದು, ಈ ಪೈಕಿ 2​ ಪದಕ ಗೆದ್ದಿದ್ದಾರೆ. 18 ವರ್ಷಗಳ ವೃತ್ತಿಜೀವನವನ್ನು ಕೊನೆಗೊಳಿಸಿರುವ ಶ್ರೀಜೇಶ್​, 2006 ರಲ್ಲಿ ಹಾಕಿಗೆ ಪದಾರ್ಪಣೆ ಮಾಡಿದ್ದರು.(PTI)

2025ರಲ್ಲಿ ಭಾರತದ ಆತಿಥ್ಯದಲ್ಲೇ ಜೂನಿಯರ್​ ಹಾಕಿ ವಿಶ್ವಕಪ್​ ನಡೆಯಲಿದ್ದು, ಅದಕ್ಕೆ ಶ್ರೀಜೇಶ್ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಲಿದೆ.
icon

(6 / 6)

2025ರಲ್ಲಿ ಭಾರತದ ಆತಿಥ್ಯದಲ್ಲೇ ಜೂನಿಯರ್​ ಹಾಕಿ ವಿಶ್ವಕಪ್​ ನಡೆಯಲಿದ್ದು, ಅದಕ್ಕೆ ಶ್ರೀಜೇಶ್ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಲಿದೆ.


ಇತರ ಗ್ಯಾಲರಿಗಳು