ರೆಪಚೇಜ್ಗೂ ಅರ್ಹತೆ ಪಡೆಯದ ರಿತಿಕಾ ಹೂಡ ಪದಕದ ಕನಸು ಭಗ್ನ; ಇಲ್ಲಿಗೆ ಮುಗಿಯಿತು ಭಾರತದ ಅಭಿಯಾನ
- Paris Olympics 2024 Wrestling: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಭಾರತದ ಕೊನೆಯ ಸ್ಪರ್ಧೆಯಲ್ಲೂ ಪದಕ ಗೆಲ್ಲಲು ವಿಫಲವಾಗಿದೆ.
- Paris Olympics 2024 Wrestling: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಭಾರತದ ಕೊನೆಯ ಸ್ಪರ್ಧೆಯಲ್ಲೂ ಪದಕ ಗೆಲ್ಲಲು ವಿಫಲವಾಗಿದೆ.
(1 / 5)
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪರ ಕೊನೆಯ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ರಿತಿಕಾ ಹೂಡಾ ಅವರು ಮಹಿಳಾ ಫ್ರೀಸ್ಟೈಲ್ ಕುಸ್ತಿ 76 ಕೆಜಿ ವಿಭಾಗದಲ್ಲಿ ಪದಕ ಗೆಲ್ಲಲು ವಿಫಲರಾದರು.
(2 / 5)
ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ರಿತಿಕಾ ಹಂಗೇರಿಯ ಬರ್ನಡೆಟ್ ನಾಗಿ ವಿರುದ್ಧ 12-2 ಅಂಕಗಳಿಂದ ಸೋಲಿಸಿ ಗೆದ್ದು ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟರು. ಆದರೆ, ಕ್ವಾರ್ಟರ್ ಫೈನಲ್ನಲ್ಲಿ ಕಿರ್ಗಿಸ್ತಾನದ ಐಪೆರಿ ಮೈಡೆಟ್ ಕಿಜಿ ಎದುರು ಪರಾಭವಗೊಂಡರು.
(3 / 5)
ಕ್ವಾರ್ಟರ್ ಫೈನಲ್ನಲ್ಲಿ ಐಪೆರಿ ಮೈಡೆಟ್ ಕಿಜಿ ವಿರುದ್ಧ ರಿತಿಕಾ 1-1 ರಲ್ಲಿ ಕೊನೆಗೊಳಿಸಿದರು. ಅಂಕ ಸಮಬಲ ಸಾಧಿಸಿದರೂ ಕೊನೆಯಲ್ಲಿ ಯಾರು ಅಂಕ ಗಳಿಸುತ್ತಾರೋ ಅವರೇ ಪಂದ್ಯದ ವಿಜೇತರಾಗುತ್ತಾರೆ. ಅದರಂತೆ, ಐಪೆರಿ ಗೆದ್ದು ಬೀಗಿದರು. ಒಂದು ವೇಳೆ ರಿತಿಕಾ ಅಂಕ ಮುನ್ನಡೆ ಸಾಧಿಸಿದ್ದರೆ, ಗೆಲುವು ತನ್ನದಾಗುತ್ತಿತ್ತು.
(4 / 5)
ಕ್ವಾರ್ಟರ್ ಫೈನಲ್ ಸೋತರೂ ರಿತಿಕಾ ರಿಪೆಚೇಜ್ಗೆ ಪ್ರವೇಶಿಸುವ ಅವಕಾಶ ಹೊಂದಿದ್ದರು. ಆಗ ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಲು ಅವಕಾಶ ಇತ್ತು. ಇದು ಸಾಧ್ಯವಾಗಬೇಕಿದ್ದರೆ ತನ್ನ ವಿರುದ್ಧ ಗೆದ್ದಿದ್ದ ಐಪೆರಿ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲಬೇಕಾಗಿತ್ತು. ಆದರೆ ಐಪೆರಿ ಸೋತ ಕಾರಣ ರಿತಿಕಾ ಮುಂದಿನ ಹಂತಕ್ಕೆ ಹೋಗುವ ಕನಸು ಭಗ್ನಗೊಂಡಿತು,
ಇತರ ಗ್ಯಾಲರಿಗಳು