WWE: ಜಾನ್ ಸೆನಾ, ಟ್ರಿಪಲ್ ಎಚ್; ಡಬ್ಲ್ಯುಡಬ್ಲ್ಯುಇ ಕುಸ್ತಿ ಲೋಕದ ಶ್ರೀಮಂತ ರಸ್ಲರ್‌ಗಳಿವರು
- World Wrestling Entertainment: ವರ್ಲ್ಡ್ ರಸ್ಲಿಂಗ್ ಎಂಟರ್ಟೈನ್ಮೆಂಟ್ (WWE) ಜಾಗತಿಕವಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ಹಲವು ಸ್ಟಾರ್‌ಗಳು ಕೋಟ್ಯಾಂತರ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ಡಬ್ಲ್ಯುಡಬ್ಲ್ಯುಇಯಲ್ಲಿ ಜನಪ್ರಿಯರಾದ 5 ಶ್ರೀಮಂತ ರಸ್ಲರ್‌ಗಳು ಯಾರೆಂದು ನೋಡೋಣ.

(1 / 6)
ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (ಡಬ್ಲ್ಯುಡಬ್ಲ್ಯುಇ) ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ಟ್ರಿಪಲ್ ಎಚ್, ಜಾನ್ ಸೆನಾ, ರಾಂಡಿ ಓರ್ಟನ್ ಹೀಗೆ ಹಲವು ಸ್ಟಾರ್‌ಗಳು ಈ ಕುಸ್ತಿ ಸ್ಪರ್ಧೆಯಿಂದ ಹೆಸರು ಮಾತ್ರವಲ್ಲದೆ ಹಣವನ್ನು ಗಳಿಸಿದ್ದಾರೆ.
(2 / 6)
26,000 ಕೋಟಿ ನಿವ್ವಳ ಮೌಲ್ಯದೊಂದಿಗೆ ವಿನ್ಸ್ ಮೆಕ್ ಮಹೋನ್ ಡಬ್ಲ್ಯುಡಬ್ಲ್ಯುಇಯ ಅತ್ಯಂತ ಶ್ರೀಮಂತ ತಾರೆಯಾಗಿದ್ದಾರೆ. ಇವರು ಡಬ್ಲ್ಯುಡಬ್ಲ್ಯುಇಯ ಮಾಜಿ ಸಿಇಒ ಆಗಿದ್ದು, ಲೈಂಗಿಕ ಕಿರುಕುಳದ ಆರೋಪವನ್ನೂ ಎದುರಿಸುತ್ತಿದ್ದಾರೆ.
(3 / 6)
ಡ್ವೇನ್ ಜಾನ್ಸನ್ ನಂತರದ ಸ್ಥಾನದಲ್ಲಿ ದಿ ರಾಕ್ ಇದ್ದಾರೆ. ದಿ ರಾಕ್ ಅಮೆರಿಕದ ಸ್ಟಾರ್ ನಟ ಹಾಗೂ ವೃತ್ತಿಪರ ಕುಸ್ತಿಪಟು ಕೂಡಾ ಹೌದು. ಉದ್ಯಮಿಯೂ ಆಗಿರುವ ರಾಕ್ ಫಾಸ್ಟ್ ಅಂಡ್ ಫ್ಯೂರಿಯಸ್‌ನಂತಹ ಜನಪ್ರಿಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ದಿ ರಾಕ್ ನಿವ್ವಳ ಆಸ್ತಿ ಮೌಲ್ಯ 8,707 ಕೋಟಿ ರೂಪಾಯಿ.
(4 / 6)
ಟ್ರಿಪಲ್ ಎಚ್- ಪಾಲ್ ಲೆವೆಸ್ಕ್ಯೂ, ಇವರನ್ನು ಟ್ರಿಪಲ್ ಎಚ್ ಎಂದೇ ಕರೆಯಲಾಗುತ್ತದೆ. ಟ್ರಿಪಲ್ ಎಚ್ 2096 ಕೋಟಿ ರೂ ಮೌಲ್ಯದ ಒಡೆಯ ಎಂದು ಹೇಳಲಾಗುತ್ತದೆ. ಇವರು 2022ರಲ್ಲಿ ಕುಸ್ತಿಯಿಂದ ನಿವೃತ್ತರಾದರು.
(5 / 6)
ಸ್ಟೆಫನಿ ಮೆಕ್ ಮಹೋನ್ ಡಬ್ಲ್ಯುಡಬ್ಲ್ಯುಇ ಷೇರುಗಳಲ್ಲಿ 2.5 ಪ್ರತಿಶತವನ್ನು ಹೊಂದಿದ್ದಾರೆ, ಇವರು ಟ್ರಿಪಲ್ ಎಚ್ ಅವರ ಪತ್ನಿ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇತರ ಗ್ಯಾಲರಿಗಳು