ಪ್ಯಾರಿಸ್ ಒಲಿಂಪಿಕ್ಸ್: ಇಂದು ರಾತ್ರಿ 9:30ಕ್ಕೆ ವಿನೇಶ್ ಫೋಗಾಟ್ ಬೆಳ್ಳಿ ಪದಕದ ತೀರ್ಪು ಪ್ರಕಟ
- Vinesh Phogat Disqualification: ಕೇವಲ 100 ಗ್ರಾಂ ತೂಕ ಜಾಸ್ತಿ ಇದ್ದ ಕಾರಣ ಒಲಿಂಪಿಕ್ಸ್ ಫೈನಲ್ನಿಂದ ಅನರ್ಹಗೊಂಡ ವಿನೇಶ್ ಫೋಗಟ್, ತನಗೆ ಜಂಟಿ ಬೆಳ್ಳಿ ಪದಕ ನೀಡಬೇಕೆಂದು ಸಲ್ಲಿಸಿದ್ದ ಮನವಿಯ ವಿಚಾರಣೆಯ ತೀರ್ಪು ಇಂದು (ಶನಿವಾರ) ಪ್ರಕಟಗೊಳ್ಳಲಿದೆ.

(1 / 5)
ಒಲಿಂಪಿಕ್ಸ್ ಫೈನಲ್ನಿಂದ ತನ್ನನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್ ಫೋಗಾಟ್ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿದ್ದ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯ (ಸಿಎಎಸ್) ಇಂದು (ಶನಿವಾರ) ರಾತ್ರಿ 9.30ಕ್ಕೆ ತೀರ್ಪು ಪ್ರಕಟಿಸಲಿದೆ.
(2 / 5)
ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ ಫೈನಲ್ ಸ್ಪರ್ಧೆಗೂ ಮುನ್ನ ನಿಗದಿಗಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದಾರೆ ಎಂದು ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು.
(3 / 5)
ಹೀಗಾಗಿ, ಕ್ರೀಡಾಕೂಟದ ವೇಳೆ ವಿವಾದ ಪರಿಹಾರಕ್ಕೆ ಸಂಬಂಧಿಸಿ ವಿಶೇಷವಾಗಿ ಸ್ಥಾಪಿಸಲಾದ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ಅನರ್ಹತೆ ಪ್ರಶ್ನಿಸಿ ವಿನೇಶ್ ಶುಕ್ರವಾರ (ಆಗಸ್ಟ್ 9) ಮೇಲ್ಮನವಿ ಸಲ್ಲಿಸಿದ್ದರು.
(4 / 5)
ನ್ಯಾಯಾಲಯದ ತಾತ್ಕಾಲಿಕ ವಿಭಾಗದ ಅಧ್ಯಕ್ಷರು, ತೀರ್ಪು ಪ್ರಕಟಿಸಲು ಸಮಯ ಮಿತಿಯನ್ನು ಇಂದು ಸಂಜೆ 6ಕ್ಕೆ (ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ) ವಿಸ್ತರಿಸಿದ್ದಾರೆ ಎಂದು ಸಿಎಎಸ್ ತಿಳಿಸಿದೆ. ಶುಕ್ರವಾರವೇ (ಆಗಸ್ಟ್ 9) ವಿಚಾರಣೆ ಮುಕ್ತಾಯಗೊಂಡಿದೆ.
ಇತರ ಗ್ಯಾಲರಿಗಳು