100 ಗ್ರಾಂ ತೂಕ ಇಳಿಸಲು ರಾತ್ರಿಯೆಲ್ಲಾ ರನ್ನಿಂಗ್, ಸ್ಕಿಪಿಂಗ್ ಮಾಡಿದ್ರೂ ಆಗಲಿಲ್ಲ; ವಿನೇಶ್ ಅನರ್ಹ ಕಾರಣ ಚಿನ್ನ ಯಾರಿಗೆ?
- Vinesh Phogat: ವಿನೇಶ್ ಫೋಗಾಟ್ ಅವರು 100 ಗ್ರಾ ತೂಕ ಏನೆಲ್ಲಾ ಮಾಡಿದ್ರು? ಅಲ್ಲದೆ, ಚಿನ್ನದ ಪದಕ ಯಾರಿಗೆ ಸಿಗುತ್ತದೆ ಎಂಬುದರ ವಿವರ ಇಲ್ಲಿದೆ.
- Vinesh Phogat: ವಿನೇಶ್ ಫೋಗಾಟ್ ಅವರು 100 ಗ್ರಾ ತೂಕ ಏನೆಲ್ಲಾ ಮಾಡಿದ್ರು? ಅಲ್ಲದೆ, ಚಿನ್ನದ ಪದಕ ಯಾರಿಗೆ ಸಿಗುತ್ತದೆ ಎಂಬುದರ ವಿವರ ಇಲ್ಲಿದೆ.
(1 / 6)
ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅಧಿಕ ತೂಕದ ಕಾರಣ ಮಹಿಳೆಯರ ಫ್ರೀ ಸ್ಟೈಲ್ 50 ಕೆಜಿ ಕುಸ್ತಿ ಸ್ಪರ್ಧೆಯ ಚಿನ್ನದ ಪದಕದ ಪಂದ್ಯಕ್ಕೂ ಅನರ್ಹಗೊಂಡಿದ್ದು, ಅವರ ಕನಸು ಭಗ್ನಗೊಳಿಸಿದೆ.(HT_PRINT)
(2 / 6)
ವಿನೇಶ್ ಫೋಗಟ್ ಅವರು ತಮ್ಮ ವಿಭಾಗದ 50ಕೆಜಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಅನರ್ಹಗೊಳಿಸಲಾಗಿದೆ. ಇದರೊಂದಿಗೆ ಭಾರತಕ್ಕೆ ಚಿನ್ನದ ಕನಸೊಂದು ನುಚ್ಚು ನೂರು ಮಾಡಿದೆ.(PTI)
(3 / 6)
ಆದರೆ, ಆ 100 ಗ್ರಾಂ ತೂಕ ಇಳಿಸಲು ವಿನೇಶ್ ಅವರು ರಾತ್ರಿಯೆಲ್ಲಾ ಪ್ರಯತ್ನಿಸಿದ್ದರು. 2 ಕಿ.ಮೀ ಓಡಿದ್ದರು. ರಾತ್ರಿ ಜಾಗಿಂಗ್ ಮಾಡಿದ್ದರು. ಸ್ಕಿಪಿಂಗ್ ಮತ್ತು ಸೈಕ್ಲಿಂಗ್ ಕೂಡ ಮಾಡಿದ್ದರು. ಆದರೆ ಸಾಧ್ಯವಾಗಿಲ್ಲ.(PTI)
(4 / 6)
ಇಡೀ ರಾತ್ರಿಯಲ್ಲಿ ಸಾಕಷ್ಟು ಪ್ರಯತ್ನ ಪಟ್ಟರೂ 100 ಗ್ರಾಂ ಇಳಿಸಲು ಸಾಧ್ಯವಾಗಲಿಲ್ಲ. ಆದರೆ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ನಲ್ಲಿ ತೂಕವನ್ನು ಯಶಸ್ವಿಯಾಗಿ ಕಾಯ್ದುಕೊಂಡಿದ್ದರು.(PTI)
(5 / 6)
ವಿನೇಶ್ ಅನರ್ಹಗೊಂಡ ಬೆನ್ನಲ್ಲೇ ಫೈನಲ್ನ ಮತ್ತೊಬ್ಬ ಸ್ಪರ್ಧಿ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಅವರನ್ನು ಚಿನ್ನದ ವಿಜೇತರೆಂದು ಘೋಷಿಸಲಾಗುತ್ತದೆ. ಆದರೆ, ಬೆಳ್ಳಿ ಪದಕಕ್ಕೆ ಯಾರೂ ಅರ್ಹರಾಗಿರುವುದಿಲ್ಲ.(PTI)
ಇತರ ಗ್ಯಾಲರಿಗಳು