ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ಪದಕ ಗೆದ್ದ ಸ್ವಪ್ನಿಲ್ ಕುಸಾಲೆ ಯಾರು? ಮಹಾರಾಷ್ಟ್ರದ ಶೂಟರ್‌ಗೆ ಧೋನಿಯೇ ಸ್ಫೂರ್ತಿ
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಪುರುಷರ 50 ಮೀಟರ್ ರೈಫಲ್ ಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆದ 29ರ ಹರೆಯದ ಸ್ವಪ್ನಿಲ್, ಈ ವಿಭಾಗದಲ್ಲಿ ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ. ಇವರ ಕುರಿತ ಮಾಹಿತಿ ಇಲ್ಲಿದೆ.
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಪುರುಷರ 50 ಮೀಟರ್ ರೈಫಲ್ ಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆದ 29ರ ಹರೆಯದ ಸ್ವಪ್ನಿಲ್, ಈ ವಿಭಾಗದಲ್ಲಿ ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ. ಇವರ ಕುರಿತ ಮಾಹಿತಿ ಇಲ್ಲಿದೆ.
(1 / 6)
ಫೈನಲ್‌ನಲ್ಲಿ ಎಲ್ಲಾ ಮೂರು ಭಂಗಿಗಳಲ್ಲಿ ಒಟ್ಟು 451.4 ಅಂಕಗಳೊಂದಿಗೆ ಸ್ವಪ್ನಿಲ್ ಮೂರನೇ ಸ್ಥಾನ ಪಡೆದರು. ಅದರಲ್ಲೂ ತಮ್ಮ ಮೊದಲ ಒಲಿಂಪಿಕ್ ಪ್ರದರ್ಶನದಲ್ಲಿಯೇ ಅವರು ಈ ಸಾಧನೆ ಮಾಡಿದ್ದು ವಿಶೇಷ.(REUTERS)
(2 / 6)
ಪದಕ ಗೆದ್ದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಸ್ವಪ್ನಿಲ್, "ಇದು 10 ವರ್ಷಗಳ ಕಠಿಣ ಪರಿಶ್ರಮವು ಫಲ. ಫೈನಲ್ ವೇಳೆ ನಾನು ಸ್ಕೋರ್‌ಬೋರ್ಡ್‌ನತ್ತ ನೋಡಲೇ ಇಲ್ಲ. ನಾನು ನನ್ನ ಶೂಟಿಂಗ್‌ನತ್ತ ಮಾತ್ರವೇ ಗಮನ ಹರಿಸಿದೆ. ನಾನು ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಾಯಿತು. ಖಂಡಿತವಾಗಿಯೂ ಮುಂದಿನ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ನೋಡುತ್ತೇನೆ ಎಂದು ಸ್ವಪ್ನಿಲ್ ಕಂಚಿನ ಪದಕ ಗೆದ್ದ ನಂತರ ಸುದ್ದಿಗಾರರಿಗೆ ತಿಳಿಸಿದರು.(AP)
(3 / 6)
ಸ್ವಪ್ನಿಲ್, ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಸಮೀಪದ ಕಂಬಲವಾಡಿ ಗ್ರಾಮದವರು. ಅವರ ತಂದೆ ಮತ್ತು ಸಹೋದರ ಜಿಲ್ಲಾ ಶಾಲೆಯಲ್ಲಿ ಶಿಕ್ಷಕರಾಗಿದ್ದರೆ, ತಾಯಿ ಕಂಬಳ್ವಾಡಿ ಗ್ರಾಮದ ಸರಪಂಚ್ ಆಗಿದ್ದಾರೆ.(EPA-EFE)
(4 / 6)
2012ರಿಂದ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿರುವ ಅವರು, ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಲು 12 ವರ್ಷಗಳ ಕಾಲ ಕಾಯಬೇಕಾಯಿತು. ಆದರೆ, ತಾವು ಅವಕಾಶ ಪಡೆದ ಮೊದಲ ಒಲಿಂಪಿಕ್ಸ್‌ನಲ್ಲೇ ಅವರು ಪದಕ ಗೆದ್ದ ಸಾಧನೆ ಮಾಡಿದ್ದಾರೆ.(HT_PRINT)
(5 / 6)
ಸ್ವಪ್ನಿಲ್‌ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಎಂಎಸ್ ಧೋನಿಯೇ ಸ್ಫೂರ್ತಿಯಂತೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಮಾಹಿಯಂತೆ ಸ್ವಪ್ನಿಲ್ ಕೂಡಾ ರೈಲ್ವೆ ಟಿಕೆಟ್ ಕಲೆಕ್ಟರ್ ಆಗಿದ್ದರು. ಇದೇ ವೇಳೆ ಏಕಾಗ್ರತೆ, ತಾಳ್ಮೆ ಹಾಗೂ ಶಾಂತಚಿತ್ತವು ಶೂಟರ್‌ಗೆ ಅಗತ್ಯವಾಗಿ ಇರಬೇಕು. ತಾಳ್ಮೆಗೆ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಬ್ರಾಂಡ್ ಅಂಬಾಸಿಡರ್. ಹೀಗಾಗಿ ಕುಸಾಲೆ ಅವರು ಧೋನಿಯಿಂದ ಸ್ಪೂರ್ತಿ ಪಡೆದಿರುವುದರಲ್ಲಿ ಅಚ್ಚರಿಯಿಲ್ಲ. ಕುಸಾಲೆ 2015 ರಿಂದ ಕೇಂದ್ರ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ.(PTI)
(6 / 6)
ಫೈನಲ್ ಪಂದ್ಯಕ್ಕ ಮುನ್ನ ಮಾತನಾಡಿದ್ದ ಸ್ವಪ್ನಿಲ್, "ಶೂಟಿಂಗ್ ಜಗತ್ತಿನಲ್ಲಿ ನಾನು ಯಾರನ್ನೂ ನಿರ್ದಿಷ್ಟವಾಗಿ ಅನುಸರಿಸುವುದಿಲ್ಲ. ಅದರ ಹೊರಗೆ, ನನಗೆ ಧೋನಿ ಎಂದರೆ ಅಪಾರ ಗೌರವ. ಅವರೊಬ್ಬ ಅಂಥಾ ವ್ಯಕ್ತಿ. ಮೈದಾನದಲ್ಲಿ ಮಾಹಿ ಇರುವಂತೆಯೇ ನನ್ನ ಕ್ರೀಡೆಯಲ್ಲಿ ನಾನು ಕೂಡಾ ಶಾಂತ ಮತ್ತು ತಾಳ್ಮೆಯಿಂದಿರಬೇಕು. ನಾನು ಅವರಂತೆಯೇ ಟಿಕೆಟ್ ಕಲೆಕ್ಟರ್ ಆಗಿರುವುದರಿಂದ ಅವರ ಕಥೆಗೂ ನನಗೂ ಸಂಬಂಧವಿದೆ" ಎಂದು ಕುಸಾಲೆ ಮಾತನಾಡಿದ್ದಾರೆ.(EPA-EFE)
ಇತರ ಗ್ಯಾಲರಿಗಳು