ಹಾಲು-ತುಪ್ಪವೇ ಶಕ್ತಿ, ಆರ್ಥಿಕ ಸಂಕಷ್ಟದಲ್ಲೂ ಫಿಟ್‌ನೆಸ್‌ಗೆ ಆದ್ಯತೆ; ಪಾಕಿಸ್ತಾನ ಚಿನ್ನದ ಹುಡುಗ ಅರ್ಷದ್ ನದೀಮ್ ಡಯೆಟ್ ಸೀಕ್ರೆಟ್
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ದಾಖಲೆಯ 92.97 ಮೀಟರ್ ಎಸೆತದೊಂದಿಗೆ ಐತಿಹಾಸಿಕ ಚಿನ್ನದ ಪದಕ ಗೆದ್ದರು. ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಇದು ಮೊದಲ ವೈಯಕ್ತಿಕ ಚಿನ್ನವಾಗಿದೆ. ಒಲಿಂಪಿಕ್ ದಾಖಲೆ ನಿರ್ಮಿಸಿದ ಅರ್ಷದ್ ನದೀಮ್, ಪಾಕಿಸ್ತಾನದ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ದಾಖಲೆಯ 92.97 ಮೀಟರ್ ಎಸೆತದೊಂದಿಗೆ ಐತಿಹಾಸಿಕ ಚಿನ್ನದ ಪದಕ ಗೆದ್ದರು. ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಇದು ಮೊದಲ ವೈಯಕ್ತಿಕ ಚಿನ್ನವಾಗಿದೆ. ಒಲಿಂಪಿಕ್ ದಾಖಲೆ ನಿರ್ಮಿಸಿದ ಅರ್ಷದ್ ನದೀಮ್, ಪಾಕಿಸ್ತಾನದ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
(1 / 6)
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿದ್ದ ಭಾರತದ ನೀರಜ್ ಚೋಪ್ರಾ ಅವರನ್ನು ಅರ್ಷದ್ ಮಣಿಸಿದ್ದಾರೆ. ನೀರಜ್ ಅವರ ಅತ್ಯುತ್ತಮ ಪ್ರಯತ್ನವೆಂದರೆ 89.45 ಮೀಟರ್. ಇದರೊಂದಿಗೆ ನೀರಜ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ನೀರಜ್ ಅವರನ್ನು ಹಿಂದಿಕ್ಕುವ ಮೂಲಕ ಅರ್ಷದ್ ಅದ್ವಿತೀಯ ಸಾಧನೆ ಮಾಡಿದ್ದಾರೆ.(AFP)
(2 / 6)
ಪಾಕಿಸ್ತಾನವು ಒಲಿಂಪಿಕ್ಸ್‌ನಲ್ಲಿ ಈವರೆಗೆ ಕೇವಲ ಮೂರು ವೈಯಕ್ತಿಕ ಪದಕ ಮಾತ್ರ ಗೆದ್ದಿದೆ. 1960ರಲ್ಲಿ ಕುಸ್ತಿಪಟು ಮುಹಮ್ಮದ್ ಬಶೀರ್ ಕಂಚು ಗೆದ್ದಿದ್ದರು. 1988ರ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಬಾಕ್ಸರ್ ಹುಸೇನ್ ಷಾ ಕಂಚು ಗೆದ್ದಿದ್ದರು. ಈಗ ನದೀಮ್ ಮೊದಲ ಚಿನ್ನ ಸಾಧನೆ ಮಾಡಿದ್ದಾರೆ.(PTI)
(3 / 6)
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅರ್ಷದ್ ಪ್ರಯಾಣ ಸುಲಭವಾಗಿರಲಿಲ್ಲ. ಬಡ ಹಳ್ಳಿ ಕುಟುಂಬದಲ್ಲಿ ಬೆಳೆದ ಅರ್ಷದ್, ಆರಂಭದಲ್ಲಿ ಕ್ರಿಕೆಟ್‌ನತ್ತ ಆಸಕ್ತಿ ಹೊಂದಿದ್ದರು. ಜಾವೆಲಿನ್ ಎಸೆತದಂತೆಯೇ ಅದೇ ಕೌಶಲ್ಯದ ಅಗತ್ಯವಿರುವ ಟೆಂಟ್ ಪೆಗ್ಗಿಂಗ್ ಎಂಬ ಆಟದಲ್ಲಿ ಹಳ್ಳಿಯ ಜನರು ಸ್ಪರ್ಧಿಸುವುದನ್ನು ಅರ್ಷದ್ ವೀಕ್ಷಿಸುತ್ತಿದ್ದರು.(AFP)
(4 / 6)
ಜಾವೆಲಿನ್ ಕ್ರೀಡೆಯತ್ತ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಕ್ಕೂ ಮುನ್ನವೇ, ಅರ್ಷದ್ ತಮ್ಮ ಫಿಟ್‌ನೆಸ್‌ನತ್ತ ಹೆಚ್ಚು ಗಮನ ಹರಿಸುತ್ತಿದ್ದರು. ಆರಂಭದಲ್ಲಿ ಟೇಪ್-ಬಾಲ್ ಕ್ರಿಕೆಟ್ ಆಡುತ್ತಿದ್ದ ಅರ್ಷದ್, ಆರ್ಥಿಕ ಸಂಕಷ್ಟದ ಸಮಯದಲ್ಲೂ ಫಿಟ್‌ನೆಸ್ ವಿಷಯದಲ್ಲಿ ರಾಜಿಯಾಗುತ್ತಿರಲಿಲ್ಲ. ಹಾಲು ಮತ್ತು ತುಪ್ಪ ಸೇವನೆಯೊಂದಿಗೆ ಪೌಷ್ಠಿಕಾಂಶಗಳಿರುವ ಆಹಾರವನ್ನೇ ಸೇವಿಸುತ್ತಿದ್ದರು.(AP)
(5 / 6)
ಗಾಯಗೊಂದ ಸಂದರ್ಭಗಳಲ್ಲೂ, ತಮ್ಮ ಕ್ರೀಡೆಯ ಬಗ್ಗೆ ಸಮರ್ಪಣಾ ಭಾವದಿಂದ ಕೆಲಸ ಮಾಡಿದರು. ಮೈದಾನಕ್ಕಿಳಿದು ಆಡಲು ಸಾಧ್ಯವಾಗದಿದ್ದಾಗ, ಜಾವೆಲಿನ್ ಆಟದ ತಂತ್ರಗಳನ್ನು ಮನೆಯಲ್ಲೇ ಕುಳಿದು ಅಧ್ಯಯನ ಮಾಡುತ್ತಿದ್ದರು.(AP)
ಇತರ ಗ್ಯಾಲರಿಗಳು