ಮಲೇಷ್ಯಾ ಓಪನ್:‌ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಲೇಷ್ಯಾ ಓಪನ್:‌ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ

ಮಲೇಷ್ಯಾ ಓಪನ್:‌ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ

  • ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶನಿವಾರ (ಜನವರಿ 11) ನಡೆದ ಮಲೇಷ್ಯಾ ಓಪನ್‌‌ ಪುರುಷರ ಡಬಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿದ ಜೋಡಿ, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.

ವಿಶ್ವದ 9ನೇ ಶ್ರೇಯಾಂಕದ ಸ್ಟಾರ್ ಜೋಡಿಯು, ಏಳನೇ ಶ್ರೇಯಾಂಕದ ಜೋಡಿಯಾದ ದಕ್ಷಿಣ ಕೊರಿಯಾದ ಕಿಮ್ ವಾನ್ ಹೋ ಮತ್ತು ಸಿಯೊ ಸೆಯುಂಗ್ ಜೇ ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸೋತರು.
icon

(1 / 8)

(AFP)

ಆರಂಭದಿಂದಲೇ ಹಿನ್ನಡೆಯಲ್ಲಿದ್ದ‌ ಭಾರತದ ಜೋಡಿಯು, ಕೊನೆಗೆ 10-21, 15-21ರ ನೇರ ಸೆಟ್‌ಗಳಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದರು.
icon

(2 / 8)

ಆರಂಭಿಕ ಪಂದ್ಯದಲ್ಲಿ 6-11 ಅಂತರದಿಂದ ಹಿನ್ನಡೆಯಲ್ಲಿದ್ದ ಭಾರತೀಯ ಜೋಡಿ, ನಿಧಾನವಾಗಿ ಲಯ ಕಂಡುಕೊಂಡರು. ಕೊರಿಯನ್‌ ಜೋಡಿ ಕೂಡಾ ಪ್ರತಿಕ್ರಿಯೆ ನೀಡಿ, ಕೇವಲ 19 ನಿಮಿಷಗಳಲ್ಲಿ ಮೊದಲ ಸೆಟ್‌ ಅನ್ನು 21-10 ಅಂತರದಿಂದ ಗೆದ್ದರು.
icon

(3 / 8)

ಏಳನೇ ಶ್ರೇಯಾಂಕದ ಭಾರತೀಯ ಜೋಡಿ ಎರಡನೇ ಪಂದ್ಯದಲ್ಲಿ ಚೇತರಿಸಿಕೊಂಡರು. ಒಂದು ಹಂತದಲ್ಲಿ 11-8ರಿಂದ ಮುನ್ನಡೆ ಸಾಧಿಸಿದರು. ಆದರೆ ಅಂತಿಮವಾಗಿ 15-21 ಅಂತರದಿಂದ ಸೋತು ಪಂದ್ಯ ಕಳೆದುಕೊಂಡರು.
icon

(4 / 8)

(HT_PRINT)

ಶುಕ್ರವಾರ ನಡೆದ ಕ್ವಾರ್ಟರ್​​ ಫೈನಲ್‌ ಪಂದ್ಯದಲ್ಲಿ ಮಲೇಷ್ಯಾದ ಜೋಡಿಯಾದ ಯೂ ಸಿನ್ ಒಂಗ್ ಹಾಗೂ ಈ ಯಿ ಟಿಯೊ (Yew Sin Ong - Ee Yi Teo) ವಿರುದ್ಧ 26-24, 21-15ರಿಂದ ಭರ್ಜರಿ ಗೆಲುವು ದಾಖಲಿಸಿದ್ದ ಜೋಡಿಯು ಸೆಮಿಫೈನಲ್ ಪ್ರವೇಶಿಸಿದ್ದರು.
icon

(5 / 8)

(AP)

ಇದು ವರ್ಷದ ಮೊದಲ ಸೂಪರ್ 1000 ಈವೆಂಟ್ ಆಗಿದ್ದು, ಸಾತ್ವಿಕ್ ಮತ್ತು ಚಿರಾಗ್ ಭಾರತಕ್ಕೆ ಪ್ರಶಸ್ತಿ ಭರವಸೆ ಉಳಿಸಿದ್ದ ಕೊನೆಯ ಆಟಗಾರರಾಗಿದ್ದರು. ಮುಂದೆ ಬ್ಯಾಡ್ಮಿಂಟನ್‌ ಪ್ರಿಯರ ಗಮನವು ಇಂಡಿಯಾ ಓಪನ್ ಸೂಪರ್ 750 ಕಡೆಗೆ ಹರಿಯಲಿದೆ. (File)
icon

(6 / 8)

ಭಾರತದ ಈ ಜೋಡಿಯು ಮುಂದೆ ಜನವರಿ 14ರಂದು ಪ್ರಾರಂಭವಾಗುವ ಇಂಡಿಯಾ ಓಪನ್‌ನಲ್ಲಿ ಸ್ಪರ್ಧಿಸಲಿದೆ. ಇಬ್ಬರೂ 32ನೇ ಸುತ್ತಿನಲ್ಲಿ ಮಲೇಷ್ಯಾದ ವೀ ಚೊಂಗ್ ಮ್ಯಾನ್ ಮತ್ತು ಕೈ ವುನ್ ಟೀ ಅವರನ್ನು ಎದುರಿಸಲಿದ್ದಾರೆ.
icon

(7 / 8)

(PTI)

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಎಚ್‌ಟಿ ಕನ್ನಡ ಸುದ್ದಿತಾಣಕ್ಕೆ ಭೇಟಿ ನೀಡಿ
icon

(8 / 8)

ಇತರ ಗ್ಯಾಲರಿಗಳು