ಒತ್ತಡ ನಿಭಾಯಿಸೋದು ಹೇಗೆ? ಮಾನಸಿಕ ಆರೋಗ್ಯಕ್ಕೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್‌ ಟಿಪ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒತ್ತಡ ನಿಭಾಯಿಸೋದು ಹೇಗೆ? ಮಾನಸಿಕ ಆರೋಗ್ಯಕ್ಕೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್‌ ಟಿಪ್ಸ್

ಒತ್ತಡ ನಿಭಾಯಿಸೋದು ಹೇಗೆ? ಮಾನಸಿಕ ಆರೋಗ್ಯಕ್ಕೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್‌ ಟಿಪ್ಸ್

  • ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಚೆಸ್‌ ಗ್ರಾಂಡ್‌ಮಾಸ್ಟರ್‌ ಡಿ ಗುಕೇಶ್‌, ನೂತನ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. ಚೀನಾದ ಡಿಂಗ್‌ ಲಿರೆನ್‌ ಎದುರಿಸುತ್ತಿರುವ ಭಾರತದ 18ರ ಹರೆಯದ ಚೆಸ್‌ ಆಟಗಾರ, ಚೆಸ್‌ ಚಾಂಪಿಯನ್‌ಶಿಪ್‌ ಗೆದ್ದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲು ಸಜ್ಜಾಗಿದ್ದಾರೆ. ಅಂತಿಮ 2 ಸುತ್ತುಗಳು ಮುಗಿದ ಬಳಿಕ ಫಲಿತಾಂಶ ಬರಬೇಕಿದೆ.

ವಿಶ್ವ ಚೆಸ್‌ ಚಾಂಪಿಯನ್‌ಶಿಪ್ ಆರಂಭಿಕ ಸುತ್ತಿನ ಪಂದ್ಯದಲ್ಲಿ ಗುಕೇಶ್‌ ವಿರುದ್ಧ ಡಿಂಗ್ ಲಿರೆನ್ ಗೆದ್ದರೆ, ಮೂರನೇ ಗೇಮ್‌ನಲ್ಲಿ ಗುಕೇಶ್‌ ಜಯಶಾಲಿಯಾಗಿದ್ದರು. ಉಳಿದ ಸುತ್ತು ಡ್ರಾಗೊಂಡವು. ಆ ಬಳಿಕ 11ನೇ ಸುತ್ತಿನಲ್ಲಿ ಮತ್ತೆ ಗುಕೇಶ್‌ ಗೆದ್ದರೆ, 12ನೇ ಸುತ್ತಿನಲ್ಲಿ ಗೆಲುವು ಲಿರೆನ್‌ ಅವರದ್ದಾಯ್ತು. ಮುಂದೆ ಅಂತಿಮ ಎರಡು ಸುತ್ತುಗಳು ನಡೆಯಲಿದೆ.
icon

(1 / 7)

(HT_PRINT)

18ರ ಹರೆಯದ ಚೆಸ್‌ ಆಟಗಾರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಬಲ ಆಟಗಾರರನ್ನು ಎದುರಿಸುತ್ತಿದ್ದಾರೆ. ಆದರೂ, ತಾಳ್ಮೆಯಿಂದ ಆಡಿ ಗೆಲುವು ಸಾಧಿಸುತ್ತಿದ್ದಾರೆ. ಹಾಗಿದ್ದರೆ, ಮಾನಸಿಕ ಆರೋಗ್ಯ ಹಾಗೂ ಒತ್ತಡ ನಿವಾರಣೆಗೆ ಗುಕೇಶ್‌ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನೋಡೋಣ.
icon

(2 / 7)

(PTI)

ಬಾಲ್ಯದಲ್ಲಿ ನನಗೆ ಬೇಗ ಕೋಪ ಬರುತ್ತಿತ್ತು. ಆದರೆ ಚೆಸ್‌ ಜೊತೆಗೆ ಮಾನಸಿಕ ಆರೋಗ್ಯದತ್ತ ಗಮನ ಕೊಡುತ್ತಾ ಅದರಿಂದ ಹೊರಬಂದೆ ಎಂದು ಗುಕೇಶ್‌ ಹೇಳುತ್ತಾರೆ.
icon

(3 / 7)

ಈಗೀಗ ನಿರಂತರವಾಗಿ ಯೋಗ, ಧ್ಯಾನ ಮಾಡುತ್ತೇನೆ. ನನ್ನ ಭಾವನೆಗಳನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದೇನೆ. ಆಟ ನನ್ನ ಒತ್ತಡ ನಿವಾರಣೆಗೂ ನೆರವಾಗಿದೆ ಎಂದು ಗುಕೇಶ್‌ ಹೇಳುತ್ತಾರೆ.
icon

(4 / 7)

ಕೆಲವೊಮ್ಮೆ ನಾನು ನನಗಿಷ್ಟದ ಹಾಡುಗಳನ್ನು ಕೇಳುತ್ತೇನೆ. ಭಾರತೀಯ ಸಂಗೀತ ನನಗಿಷ್ಟ.‌ ಹಿಂದಿ ಜೊತೆಗೆ ಇಂಗ್ಲೀಷ್ ಹಾಡು ಕೂಡಾ ಕೇಳುತ್ತೇನೆ ಎಂದು ಗುಕೇಶ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
icon

(5 / 7)

ಪಂದ್ಯದ ಸೋಲುಗಳು ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ಹೀಗಾಗಿ ಫಲಿತಾಂಶ ಏನೇ ಆದರೂ ನಾನು ನನ್ನ ಮುಂದಿನ ಗೇಮ್‌ ಬಗ್ಗೆ ಯೋಚಿಸುತ್ತೇನೆ. ಹೀಗಾಗಿ ಸೋಲು ನನ್ನನ್ನು ಹೆಚ್ಚು ಕಾಡುವುದಿಲ್ಲ ಎನ್ನುತ್ತಾರೆ ಗ್ರಾಂಡ್‌ ಮಾಸ್ಟರ್.
icon

(6 / 7)

ನಾನು ನನ್ನ ಗೆಲುವುಗಳನ್ನು ಕೂಡಾ ಅತಿಯಾಗಿ ಸಂಭ್ರಮಿಸುವುದಿಲ್ಲ. ಹೀಗಾಗಿ ಸೋಲು ಕೂಡಾ ನನ್ನ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಮನಶಾಸ್ತ್ರಜ್ಞರು, ನನ್ನ ಕೋಚ್‌ ಹಾಗೂ ಸ್ನೇಹಿತರೊಂದಿಗೆ ಮಾನಸಿಕ ಆರೋಗ್ಯದ ಬಗ್ಗೆ ಚರ್ಚಿಸುತ್ತೇನೆ. ಇದು ನನಗೆ ನೆರವಾಗಿದೆ ಎಂದು ಖುದ್ದು ಗುಕೇಶ್‌ ಹೇಳಿಕೊಂಡಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು