ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮತ್ತೊಂದು ನಿರಾಸೆ; 16ನೇ ಸುತ್ತಿನಲ್ಲೇ ಹೊರಬಿದ್ದ ಶ್ರೀಜಾ ಅಕುಲಾ
- Sreeja Akula: ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನಿಸ್ ವಿಭಾಗದಲ್ಲಿ ಶ್ರೀಜಾ ಅಕುಲಾ ಅವರು 16ನೇ ಸುತ್ತಿನಲ್ಲಿ ವಿಶ್ವದ ನಂಬರ್ ಆಟಗಾರ್ತಿ ಚೀನಾದ ಸನ್ ಯಿಂಗ್ಶಾ ವಿರುದ್ಧ 0-4 ಅಂತರದಿಂದ ಸೋತು ಹೊರಬಿದ್ದಿದ್ದಾರೆ.
- Sreeja Akula: ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನಿಸ್ ವಿಭಾಗದಲ್ಲಿ ಶ್ರೀಜಾ ಅಕುಲಾ ಅವರು 16ನೇ ಸುತ್ತಿನಲ್ಲಿ ವಿಶ್ವದ ನಂಬರ್ ಆಟಗಾರ್ತಿ ಚೀನಾದ ಸನ್ ಯಿಂಗ್ಶಾ ವಿರುದ್ಧ 0-4 ಅಂತರದಿಂದ ಸೋತು ಹೊರಬಿದ್ದಿದ್ದಾರೆ.
(1 / 5)
ಪ್ಯಾರಿಸ್ ಒಲಿಂಪಿಕ್ಸ್ನ ಸಿಂಗಲ್ಸ್ ಟೇಬಲ್ ಟೆನಿಸ್ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಮಣಿಕಾ ಬಾತ್ರಾ ನಂತರ ಶ್ರೀಜಾ ಅಕುಲಾ ಕೂಡ 16ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಅವರು ನಂಬರ್ 1 ವಿಶ್ವ ಶ್ರೇಯಾಂಕದ ಚೀನಾದ ಸನ್ ಯಿಂಗ್ಶಾ ವಿರುದ್ಧ 0-4 (10-12, 10-12, 8-11, 3-11) ಸೆಟ್ಗಳಲ್ಲಿ ಸೋತು ಹೊರಬಿದ್ದರು. ಆದರೆ ಈ ಪಂದ್ಯ ಗೆದ್ದಿದ್ದರೆ ಒಲಿಂಪಿಕ್ಸ್ನಲ್ಲಿ ಭಾರತೀಯ ಮಹಿಳಾ ಟೇಬಲ್ ಟೆನಿಸ್ ಇತಿಹಾಸವೇ ಬದಲಾಗುತ್ತಿತ್ತು.
(2 / 5)
ಜುಲೈ 31ರಂದು ಜನ್ಮದಿನ ಆಚರಿಸಿಕೊಂಡ ಮರು ದಿನ ಅಂದರೆ ಆಗಸ್ಟ್ 1ರಂದು ಶ್ರೀಜಾ ತನ್ನ ಒಲಿಂಪಿಕ್ಸ್ ಅಭಿಯಾನ ಕೊನೆಗೊಳಿಸಿದರು. ತನ್ನ ಜನ್ಮದಿನದಂದು ಸಿಂಗಾಪುರದ ಜಿಯಾನ್ ಜೆಂಗ್ ಅವರನ್ನು 4-2 ಅಂತರದಿಂದ ಸೋಲಿಸಿ ಅಂತಿಮ 16ಕ್ಕೆ ತಲುಪಿದರು. ಮಣಿಕಾ ಬಾತ್ರಾ ನಂತರ ಒಲಿಂಪಿಕ್ಸ್ನಲ್ಲಿ 16ನೇ ಸುತ್ತಿಗೆ ಪ್ರವೇಶಿಸಿದ 2ನೇ ಭಾರತೀಯ ಟೇಬಲ್ ಟೆನಿಸ್ ತಾರೆ ಎಂಬ ಹೆಗ್ಗಳಿಕೆಗೆ ಶ್ರೀಜಾ ಪಾತ್ರರಾಗಿದ್ದಾರೆ. ಆದರೆ, ಮುಂದಿನ ಹಂತಕ್ಕೆ ಹೋಗುವ ಶ್ರೀಜಾ ಕನಸು ಕ್ವಾರ್ಟರ್ ಫೈನಲ್ನಲ್ಲೇ ಭಗ್ನಗೊಂಡಿತು.
(3 / 5)
ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಸೋತರೂ ವಿಶ್ವದ ನಂಬರ್ 1 ತಾರೆಯ ವಿರುದ್ಧ ಶ್ರೀಜಾ ನೀಡಿದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಭಾರತದ 26 ವರ್ಷದ ಯುವತಿಯ ಹೋರಾಟ ನಿಜವಾಗಿಯೂ ಅದ್ಭುತವಾಗಿತ್ತು. ಒಂದು ಹಂತದಲ್ಲಿ ಶ್ರೀಜಾ, ಸನ್ ಯಿಂಗ್ಶಾ ವಿರುದ್ಧ 10-6ರ ಮುನ್ನಡೆ ಸಾಧಿಸಿದ್ದರು. ನಂತರ ಇದ್ದಕ್ಕಿದ್ದಂತೆ ಲಯ ಕಳೆದುಕೊಂಡರು. ಅಲ್ಲಿಂದ ಹೋರಾಟ ಮುಂದುವರೆಸಿದರೂ ಒಂದು ಸೆಟ್ನಲ್ಲೂ ಗೆಲುವು ಅಸಾಧ್ಯವಾಯಿತು. ಸತತ ನಾಲ್ಕು ಸೆಟ್ಗಳಲ್ಲೂ ಸೋತರು.
(4 / 5)
ಅಟ್ಯಾಕಿಂಗ್ ಮತ್ತು ಆಕ್ರಮಣಕಾರಿ ಆಟವಾಡಿದರೂ ಎದುರಾಳಿಗೆ ಸವಾಲು ಎಸೆಯಲು ವಿಫಲರಾದರು. ಮೊದಲ ಎರಡು ಸೆಟ್ಗಳಲ್ಲಿ ಪ್ರಬಲ ಪೈಪೋಟಿ ನೀಡಿದರೂ ಸೋತರು. ಆದರೆ ಮೂರನೇ ಸೆಟ್ನಲ್ಲಿ ಕಂಬ್ಯಾಕ್ ಮಾಡುವ ನಿರೀಕ್ಷೆ ಇತ್ತು. ಆದರೆ ಮೂರರ ಜೊತೆಗೆ ನಾಲ್ಕನೇ ಸೆಟ್ನಲ್ಲಿ ಸುಲಭವಾಗಿ ಶರಣಾದರು.
ಇತರ ಗ್ಯಾಲರಿಗಳು