8 ಓವರ್​​​ಗಳಲ್ಲಿ ಹ್ಯಾಟ್ರಿಕ್ ಜೊತೆಗೆ 8 ವಿಕೆಟ್; ಏಕದಿನ ಕ್ರಿಕೆಟ್​ನಲ್ಲಿ ಮುರಿಯಲು ಅಸಾಧ್ಯವಾದ ವಿಶ್ವದಾಖಲೆ ಇದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  8 ಓವರ್​​​ಗಳಲ್ಲಿ ಹ್ಯಾಟ್ರಿಕ್ ಜೊತೆಗೆ 8 ವಿಕೆಟ್; ಏಕದಿನ ಕ್ರಿಕೆಟ್​ನಲ್ಲಿ ಮುರಿಯಲು ಅಸಾಧ್ಯವಾದ ವಿಶ್ವದಾಖಲೆ ಇದು

8 ಓವರ್​​​ಗಳಲ್ಲಿ ಹ್ಯಾಟ್ರಿಕ್ ಜೊತೆಗೆ 8 ವಿಕೆಟ್; ಏಕದಿನ ಕ್ರಿಕೆಟ್​ನಲ್ಲಿ ಮುರಿಯಲು ಅಸಾಧ್ಯವಾದ ವಿಶ್ವದಾಖಲೆ ಇದು

  • ಶ್ರೀಲಂಕಾದ ದಿಗ್ಗಜ ವೇಗಿ ಚಾಮಿಂದಾ ವಾಸ್ ಅವರು ಏಕದಿನ ಕ್ರಿಕೆಟ್​ನಲ್ಲಿ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆದರೆ ಅದನ್ನು ಮುರಿಯುವುದು ಅಸಾಧ್ಯ ಎಂದೇ ಹೇಳಬಹುದು.

ಕ್ರಿಕೆಟ್ ಜಗತ್ತಿನಲ್ಲಿ ಹಲವು ವಿಶ್ವದಾಖಲೆಗಳು ನಿರ್ಮಾಣವಾಗಿವೆ. ಅವುಗಳು ಬ್ರೇಕ್ ಕೂಡ ಆಗುತ್ತಿದೆ. ಆದರೆ, ಕೆಲವೊಂದಿಷ್ಟು ರೆಕಾರ್ಡ್​​ಗಳು ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾಗಿಯೂ ಉಳಿಯುತ್ತವೆ. ಈ ಪೈಕಿ ಅವುಗಳಲ್ಲಿ ಒಂದು ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ.
icon

(1 / 9)

ಹೌದು, ಈ ಚರಿತ್ರೆ ಸೃಷ್ಟಿಸಿರುವುದು ಶ್ರೀಲಂಕಾದ ದಿಗ್ಗಜ ವೇಗಿ ಚಾಮಿಂದಾ ವಾಸ್. ಈತನೊಬ್ಬನೇ ಏಕಾಂಗಿಯಾಗಿ ಇಡೀ ತಂಡಕ್ಕೆ ಮಾರಕ ಹೊಡೆತ ನೀಡಿದ್ದರು. ಏಕದಿನ ಇತಿಹಾಸದಲ್ಲಿ ಅಪಾಯಕಾರಿ ವೇಗಿ ಎಂದು ಪ್ರಸಿದ್ಧಿ ಪಡೆದಿರುವ ಈತ, ಒಂದೇ ಏಕದಿನ ಪಂದ್ಯದಲ್ಲಿ ಇಷ್ಟೊಂದು ವಿಕೆಟ್ ಪಡೆದಿರುವುದು ಒಂದು ಪವಾಡವೇ ಸರಿ.
icon

(2 / 9)

ಈ ದಾಖಲೆಯು 2001ರಲ್ಲಿ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ದಾಖಲಾಗಿತ್ತು. ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವಿನ ಈ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಾಣವಾಯಿತು. ಇಡೀ ತಂಡವನ್ನು 38 ರನ್​ಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಕ್ರೂರ ಮೃಗದಂತೆ ಮೇಲೆರಗಿ ಬೌಲಿಂಗ್​ನಲ್ಲಿ ಇತಿಹಾಸ ಸೃಷ್ಟಿಸಿದ್ದರು.
icon

(3 / 9)

ಪಂದ್ಯದಲ್ಲಿ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ನಡೆಸಿತು. ವೇಗಿ ಚಾಮಿಂದಾ ವಾಸ್ ಮೊದಲ ಎಸೆತದಲೇ ಬ್ಯಾಟ್ಸ್‌ಮನ್‌ನನ್ನು ಪೆವಿಲಿಯನ್‌ಗೆ ಕಳುಹಿಸಿದರು. ಅಲ್ಲಿಂದ ಆರಂಭವಾದ ವಿಕೆಟ್ ಬೇಟೆ 38 ರನ್​​ಗಳೊಳಗೆ ನಿರ್ನಾಮ ಮಾಡಿತು. ಅಷ್ಟರಮಟ್ಟಿಗೆ ಮಾರಕ ಬೌಲಿಂಗ್ ಮಾಡಿದ್ದರು.
icon

(4 / 9)

ಮೊದಲ ಓವರ್ ನಂತರ, ವಾಸ್ 5ನೇ ಓವರ್‌ನಲ್ಲಿ ಬ್ಯಾಟ್ಸ್‌ಮನ್‌ನನ್ನು ಪೆವಿಲಿಯನ್‌ಗೆ ಕಳುಹಿಸಿದರು. ಈ ಓವರ್‌ನಲ್ಲಿ ಇಬ್ಬರು ಬ್ಯಾಟರ್​ಗಳನ್ನು ಔಟ್ ಮಾಡಿದರು. 11ನೇ ಓವರ್ ಎಸೆಯಲು ಬಂದ ವಾಸ್, ಮೂರನೇ, ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದು ಹ್ಯಾಟ್ರಿಕ್ ವಿಕೆಟ್ ಆಗಿತ್ತು.
icon

(5 / 9)

ಹ್ಯಾಟ್ರಿಕ್ ಪಡೆದ ನಂತರ ಅವರ ಖಾತೆಯಲ್ಲಿ 6 ವಿಕೆಟ್‌ಗಳಿದ್ದವು. ಇದು ಒಂದು ದಾಖಲೆ. ಆದರೆ ವಾಸ್ ಆರ್ಭಟ ಅಲ್ಲಿಗೆ ನಿಲ್ಲಲಿಲ್ಲ. ನಂತರವೂ ಎರಡು ವಿಕೆಟ್ ಪಡೆದರು. ಅವರು ಹಾಕಿ 8 ಓವರ್​ಗಳಲ್ಲಿ 3 ಮೇಡನ್ ಕೂಡ ಹಾಕಿದ್ರು. 19 ರನ್ ಬಿಟ್ಟುಕೊಟ್ಟು 8 ವಿಕೆಟ್ ಕಿತ್ತಿದ್ದರು. ಇದು ಏಕದಿನ ಕ್ರಿಕೆಟ್​​ನಲ್ಲಿ ಬೌಲರ್​ವೊಬ್ಬರ ವೈಯಕ್ತಿಕ ಬೆಸ್ಟ್​ ಬೌಲಿಂಗ್​ ಆಗಿದೆ.
icon

(6 / 9)

ಏಕದಿನ ಕ್ರಿಕೆಟ್​ನಲ್ಲಿ ಇನ್ನಿಂಗ್ಸ್​ವೊಂದರಲ್ಲಿ ವೈಯಕ್ತಿವಾಗಿ 7 ವಿಕೆಟ್ ಕಿತ್ತಿರುವ ಬೌಲರ್​ಗಳು 15 ಮಂದಿ ಇದ್ದಾರೆ. ಆದರೆ ಯಾರೂ ವೈಯಕ್ತಿಕವಾಗಿ 8 ವಿಕೆಟ್ ಕಿತ್ತಿರುವ ಇತಿಹಾಸ ಇಲ್ಲ. ದಾಖಲೆಗಳು ಇರುವುದೇ ಮುರಿಯಲು. ಆದರೆ ಚಾಮಿಂದಾ ವಾಸ್ ದಾಖಲೆ ಯಾರು ಮುರಿಯುತ್ತಾರೆ ಎನ್ನುವುದನ್ನು ಕಾದುನೋಡೋಣ.
icon

(7 / 9)

ಈ ಪಂದ್ಯದಲ್ಲಿ ಶ್ರೀಲಂಕಾ ತಂಡ 9 ವಿಕೆಟ್‌ಗಳಿಂದ ಜಯಗಳಿಸಿತು. ಶ್ರೀಲಂಕಾ 274 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಜಿಂಬಾಬ್ವೆಯ 10 ಬ್ಯಾಟ್ಸ್‌ಮನ್‌ಗಳು ಸಹ ಎರಡಂಕಿ ರನ್ ದಾಟಲು ವಿಫಲರಾದರು. ಈ ದಾಖಲೆಯನ್ನು ಯಾವುದೇ ಬೌಲರ್ ಮುರಿಯುವುದು ಅಸಾಧ್ಯ.
icon

(8 / 9)

ಚಾಮಿಂದಾ ವಾಸ್ ತಮ್ಮ ವೃತ್ತಿಜೀವನದಲ್ಲಿ 322 ಏಕದಿನ, 111 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 400 ಮತ್ತು 355 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20ಯಲ್ಲಿ ಕೇವಲ 6 ಪಂದ್ಯಗಳನ್ನು ಆಡಿದ್ದು, ಅವರ ಹೆಸರಿನಲ್ಲಿ ಕೇವಲ 6 ವಿಕೆಟ್‌ ಪಡೆದಿದ್ದಾರೆ.
icon

(9 / 9)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು