Largest Kidney Stone: ವಿಶ್ವದ ಅತಿದೊಡ್ಡ ಕಿಡ್ನಿ ಸ್ಟೋನ್ ಹೊರತೆಗೆದು ಭಾರತದ ದಾಖಲೆ ಮುರಿದ ಶ್ರೀಲಂಕಾ ವೈದ್ಯರು
- World Largest Kidney Stone: ಶ್ರೀಲಂಕಾ ಸೇನಾಸ್ಪತ್ರೆಯ ವೈದ್ಯರ ತಂಡವೊಂದು ವಿಶ್ವದ ಅತಿದೊಡ್ಡ ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ತೆಗೆದುಹಾಕುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2004ರಲ್ಲಿ ಭಾರತೀಯ ವೈದ್ಯರು ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ.

(1 / 5)
ಕೊಲಂಬೊ ಆರ್ಮಿ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಯೋರ್ವನ ಮೂತ್ರಪಿಂಡದಲ್ಲಿ 13.372 ಸೆಂಟಿಮೀಟರ್ (5.264 ಇಂಚು) ಉದ್ದ ಮತ್ತು 801 ಗ್ರಾಂ ತೂಕದ ಕಲ್ಲು ಇತ್ತು. ವರದಿಗಳ ಪ್ರಕಾರ ಇದು ವಿಶ್ವದ ಅತಿದೊಡ್ಡ ಕಿಡ್ನಿ ಸ್ಟೋನ್ ಆಗಿದೆ.
(2 / 5)
ಜೂನ್ 1 ರಂದು ಶಸ್ತ್ರಚಿಕಿತ್ಸೆ ನಡೆಸಿದ ಕನ್ಸಲ್ಟೆಂಟ್ ಯುರಾಲಜಿಸ್ಟ್ ಲೆಫ್ಟಿನೆಂಟ್ ಕರ್ನಲ್ ಹಾಗೂ ಜೆನಿಟೊ ಯೂರಿನರಿ ಯೂನಿಟ್ನ ಮುಖ್ಯಸ್ಥ ಡಾ. ಕೆ. ಸುದರ್ಶನ್ ಅವರ ನೇತೃತ್ವದ ವೈದ್ಯಕೀಯ ತಂಡವು ಕಿಡ್ನಿ ಸ್ಟೋನ್ ಅನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
(3 / 5)
ಕೊಲಂಬೊ ಆರ್ಮಿ ಆಸ್ಪತ್ರೆಯ ವೈದ್ಯರು ಈ ಮೂಲಕ 2004ರಲ್ಲಿ ಭಾರತೀಯ ವೈದ್ಯರು ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ.
(4 / 5)
2004 ರಲ್ಲಿ ಭಾರತದಲ್ಲಿ ವ್ಯಕ್ತಿಯೊಬ್ಬರಲ್ಲಿ ಇದ್ದ 13 ಸೆಂಟಿಮೀಟರ್ ಉದ್ದದ ಮೂತ್ರಪಿಂಡದ ಕಲ್ಲನ್ನು ವೈದ್ಯರು ತೆಗೆದುಹಾಕಿದ್ದರು. ಇದು ಈವರೆಗೆ ವಿಶ್ವದ ಅತಿದೊಡ್ಡ ಕಿಡ್ನಿ ಸ್ಟೋನ್ ಆಗಿತ್ತು.
ಇತರ ಗ್ಯಾಲರಿಗಳು