Mahakumbh Stampede: ಕುಂಭಮೇಳ ಕಾಲ್ತುಳಿತ ಇದೇ ಮೊದಲಲ್ಲ, 1954ರಿಂದ 2025ರವರೆಗಿನ ಅನಾಹುತಗಳ ಚಿತ್ರಣ ಇಲ್ಲಿದೆ
ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆ ಎಂದು ಪರಿಗಣಿಸಲಾದ ಕುಂಭ ಮೇಳವು ಈ ಹಿಂದೆಯೂ ಹಲವಾರು ಕಾಲ್ತುಳಿತಗಳಿಗೆ ಸಾಕ್ಷಿಯಾಗಿತ್ತು. 1954ರಿಂದ ಇಲ್ಲಿಯ ತನಕ ಯಾವಾಗ ಎಷ್ಟು ಮಂದಿ ಕಾಲ್ತುಳಿತಕ್ಕೆ ಸಾವನ್ನಪ್ಪಿದ್ದರು ಎಂಬುದರ ವಿವರ ಇಂತಿದೆ.
(1 / 12)
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಭಾರೀ ದುರಂತ ಸಂಭವಿಸಿದೆ. ಮೌನಿ ಅಮಾವಾಸ್ಯೆ ಹಿನ್ನೆಲೆ ಪವಿತ್ರ ಸ್ನಾನಕ್ಕಾಗಿ ಸೇರಿದ ಲಕ್ಷಾಂತರ ಭಕ್ತ ಆಗಮಿಸಿದ ಹಿನ್ನೆಲೆ ಕಾಲ್ತುಳಿತ ಸಂಭವಿಸಿ 15 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
(2 / 12)
ತಡೆಗೋಡೆ ಕುಸಿದ ನಂತರ ಸೃಷ್ಟಿಯಾದ ಗೊಂದಲದಲ್ಲಿ ಹಲವರು ಗಾಯಗೊಂಡರು. ಇದರಿಂದಾಗಿ ನೂಕು ನುಗ್ಗಲು ಉಂಟಾಯಿತು. ಇದರಿಂದಾಗಿ ಅನೇಕರು ಸಿಕ್ಕಿಹಾಕಿಕೊಂಡು ಕಾಲ್ತುಳಿತಕ್ಕೊಳಗಾದರು. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.
(3 / 12)
ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆ ಎಂದು ಪರಿಗಣಿಸಲಾದ ಕುಂಭ ಮೇಳವು ಈ ಹಿಂದೆಯೂ ಹಲವಾರು ಕಾಲ್ತುಳಿತಗಳಿಗೆ ಸಾಕ್ಷಿಯಾಗಿತ್ತು. 1954ರಿಂದ ಇಲ್ಲಿಯ ತನಕ ಯಾವಾಗ ಎಷ್ಟು ಮಂದಿ ಕಾಲ್ತುಳಿತಕ್ಕೆ ಸಾವನ್ನಪ್ಪಿದ್ದರು ಎಂಬುದರ ವಿವರ ಇಂತಿದೆ.
(4 / 12)
1954: ಸ್ವಾತಂತ್ರ್ಯಾನಂತರ 1954ರಲ್ಲಿ ನಡೆದ ಮೊದಲ ಕುಂಭ ಮೇಳವು ಘಣ ಘೋರ ದುರಂತಕ್ಕೆ ಸಾಕ್ಷಿಯಾಗಿತ್ತು. 1954ರರ ಫೆಬ್ರವರಿ 3 ರಂದು, ಮೌನಿ ಅಮವಾಸ್ಯೆಯ ಶುಭ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಅಲಹಾಬಾದ್ (ಈಗ ಪ್ರಯಾಗ್ರಾಜ್) ನಲ್ಲಿ ನಡೆದ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರು. ಆಗ ಕಾಲ್ತುಳಿತ ಸಂಭವಿಸಿ ಸುಮಾರು 800 ಸಾವನ್ನಪ್ಪಿದ್ದರು. ಕೆಲವರು ತುಳಿತದಿಂದ ಸಾವನ್ನಪ್ಪಿದರೆ, ಕೆಲವರು ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಆನೆಯೊಂದು ನಿಯಂತ್ರಣ ತಪ್ಪಿದಾಗ ಸಂಗಮದಲ್ಲಿ ಅವ್ಯವಸ್ಥೆ ಉಂಟಾಗಲು ಕಾರಣವಾಗಿತ್ತು.
(AFP)(5 / 12)
1986: ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಕನಿಷ್ಠ 200 ಜನರು ಸಾವನ್ನಪ್ಪಿದ ದುರಂತ ಕಾಲ್ತುಳಿತ ಸಂಭವಿಸಿತ್ತು. ಆಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ವೀರ್ ಬಹದ್ದೂರ್ ಸಿಂಗ್ ಅವರು ವಿವಿಧ ರಾಜ್ಯಗಳ ಹಲವಾರು ಮುಖ್ಯಮಂತ್ರಿಗಳು ಮತ್ತು ಸಂಸತ್ ಸದಸ್ಯರೊಂದಿಗೆ ಹರಿದ್ವಾರಕ್ಕೆ ಬಂದಾಗ ಈ ಘಟನೆ ಸಂಭವಿಸಿತ್ತು.
(Getty Images)(6 / 12)
ಅಂದು ಭದ್ರತಾ ಸಿಬ್ಬಂದಿ ಸಾಮಾನ್ಯ ಜನರನ್ನು ನದಿ ದಂಡೆಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ ಹಿನ್ನೆಲೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ನಿಯಂತ್ರಿಲು ಕಷ್ಟಕರವಾಗಿತ್ತು. ಇದು ಮಾರಕ ಕಾಲ್ತುಳಿತಕ್ಕೆ ಕಾರಣವಾಗಿತ್ತು.
(7 / 12)
2003ರಲ್ಲಿ ಮಹಾರಾಷ್ಟ್ರದ ನಾಶಿಕ್‌ನಲ್ಲಿ ಕುಂಭಮೇಳದ ಸಮಯದಲ್ಲಿ ಪವಿತ್ರ ಸ್ನಾನಕ್ಕಾಗಿ ಸಾವಿರಾರು ಯಾತ್ರಿಕರು ಗೋದಾವರಿ ನದಿಯಲ್ಲಿ ಸೇರಿದ್ದಾಗ ಸಂಭವಿಸಿದ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
(AFP)(8 / 12)
2010 (ಹರಿದ್ವಾರ): ರಾಯಲ್ ಸ್ನಾನದ ಸಮಯದಲ್ಲಿ ಸಾಧುಗಳು ಮತ್ತು ಭಕ್ತರ ನಡುವಿನ ಘರ್ಷಣೆ ನಡೆದಿತ್ತು. ಈ ವೇಳೆ ಭೀತಿಗೆ ಒಳಗಾಗಿದ್ದ ಭಕ್ತರು, ದಿಕ್ಕಾಪಾಲಾಗಿ ಓಡಿದ್ದರು. ಇದು ಕಾಲ್ತುಳಿತಕ್ಕೆ ಕಾರಣವಾಯಿತು. ಏಳು ಮಂದಿ ಸತ್ತರೆ, 15 ಮಂದಿ ಗಾಯಗೊಂಡಿದ್ದರು. (ಈ ಚಿತ್ರ ಸದ್ಯದ ಚಿತ್ರ)
(9 / 12)
ಫೆಬ್ರವರಿ 10, 2013ರಂದು ಕುಂಭಮೇಳದ ಸಮಯದಲ್ಲಿ ಅಲಹಾಬಾದ್ ರೈಲು ನಿಲ್ದಾಣದಲ್ಲಿ ಪಾದಚಾರಿ ಸೇತುವೆ ಕುಸಿದು ಬಿದ್ದ ನಂತರ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 42 ಜನರು ಸಾವನ್ನಪ್ಪಿದರು. 45 ಜನರು ಗಾಯಗೊಂಡಿದ್ದರು.
(10 / 12)
ಇದೀಗ 2025ರಲ್ಲಿ ಬುಧವಾರ ಬೆಳಗಿನ ಜಾವ 2 ಗಂಟೆ 30 ನಿಮಿಷದ ಸುಮಾರಿಗೆ ಈ ಘಟನೆ ಸಂಭವಿಸಿತು. ಮಹಾ ಕುಂಭ ಮೇಳದ 12 ಕಿಮೀ ಉದ್ದದ ನದಿ ದಂಡೆಯ ಉದ್ದಕ್ಕೂ ಸೃಷ್ಟಿಯಾದ ಸಂಗಮ ಮತ್ತು ಇತರ ಎಲ್ಲಾ ಘಾಟ್‌ಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. 12 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭವು ಜನವರಿ 13 ರಂದು ಶುರುವಾಯಿತು. ಫೆಬ್ರವರಿ 26 ರವರೆಗೆ ನಡೆಯಲಿದೆ.
(11 / 12)
ಸಂಗಮದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾದ ನಂತರ ಸಾವನ್ನಪ್ಪಿರುವವರು ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿರುವುದು. ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರೆದಿದೆ.
ಇತರ ಗ್ಯಾಲರಿಗಳು