ಏಕದಿನ ವಿಶ್ವಕಪ್ಗೂ ಮುನ್ನ ನಿರೀಕ್ಷೆ ಹೆಚ್ಚಿಸಿ ಅಟ್ಟರ್ಫ್ಲಾಪ್ ಆದ ಸ್ಟಾರ್ ಆಟಗಾರರು ಇವರೇ!
- ICC ODI World Cup 2023: ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಟ್ಟರ್ ಫ್ಲಾಪ್ ಪ್ರದರ್ಶನ ನೀಡಿದ ಸ್ಟಾರ್ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
- ICC ODI World Cup 2023: ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಟ್ಟರ್ ಫ್ಲಾಪ್ ಪ್ರದರ್ಶನ ನೀಡಿದ ಸ್ಟಾರ್ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
(1 / 16)
ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸ್ಟಾರ್ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ಅವರೆಲ್ಲರೂ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಅಟ್ಟರ್ ಫ್ಲಾಪ್ ಆದ ಸ್ಟಾರ್ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
(2 / 16)
Shreyas Iyer: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ವೈಫಲ್ಯ ಅನುಭವಿಸಿದ್ದಾರೆ. 33.50ರ ಬ್ಯಾಟಿಂಗ್ ಸರಾಸರಿಯಲ್ಲಿ 134 ರನ್ ಮಾತ್ರ ಗಳಿಸಿದ್ದಾರೆ. ಒಂದು ಬಾರಿ ಮಾತ್ರ 50ರ ಗಡಿ ದಾಟಿದ್ದಾರೆ.
(3 / 16)
Joe Root: ಇಂಗ್ಲೆಂಡ್ ತಂಡದ ಮತ್ತೊಬ್ಬ ಆಟಗಾರ ಜೋ ರೂಟ್, ಕೂಡ ವೈಫಲ್ಯ ಅನುಭವಿಸಿದ್ದಾರೆ. 6 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 175 ರನ್ ಸಿಡಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 29.16.
(4 / 16)
Ben Stokes: ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್, ಗಾಯದಿಂದ ಮೊದಲ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಸದ್ಯ ಅವರು ಆಡಿರುವ 3 ಪಂದ್ಯಗಳಲ್ಲಿ ಕೇವಲ 48 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ ಕೇವಲ 16.00.
(5 / 16)
Steve Smith: ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಆಸ್ತಿ ಎಂದೇ ಕರೆಸಿಕೊಳ್ಳುವ ಸ್ಟೀವ್ ಸ್ಮಿತ್, ವಿಶ್ವಕಪ್ನಲ್ಲಿ ನಿರಾಸೆ ಮೂಡಿಸಿದ್ದಾರೆ. ಆಡಿದ ಆರು ಪಂದ್ಯಗಳಲ್ಲಿ 26.83ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 161 ರನ್ ಗಳಿಸಿದ್ದಾರೆ. 71 ರನ್ ಗರಿಷ್ಠ ಸ್ಕೋರ್.
(6 / 16)
Mohammed Siraj: ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್, ವಿಕೆಟ್ ಪಡೆಯಲು ಪರದಾಟ ನಡೆಸುತ್ತಿದ್ದಾರೆ. 6 ಪಂದ್ಯಗಳಲ್ಲಿ 6 ವಿಕೆಟ್ ಮಾತ್ರ ಪಡೆದಿದ್ದಾರೆ.
(7 / 16)
Tom Latham: ಕೇನ್ ವಿಲಿಯಮ್ಸನ್ ಅಲಭ್ಯತೆಯಲ್ಲಿ ನಾಯಕತ್ವ ವಹಿಸಿಕೊಂಡಿರುವ ಟಾಮ್ ಲಾಥಮ್, 6 ಪಂದ್ಯಗಳಲ್ಲಿ 147 ರನ್ ಮಾತ್ರ ಸಿಡಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 36.75.
(8 / 16)
Rashid Khan: ಅಫ್ಘಾನಿಸ್ತಾನ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್, ಕೂಡ ನಿರಾಸೆ ಮೂಡಿಸಿದ್ದಾರೆ. 6 ಪಂದ್ಯಗಳಲ್ಲಿ ಕೇವಲ 7 ವಿಕೆಟ್ ಉರುಳಿಸಿದ್ದಾರೆ.
(9 / 16)
Shakib Al Hasan: ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ವಿಶ್ವಕಪ್ನಲ್ಲಿ ಫ್ಲಾಪ್ ಶೋ ನೀಡಿದ್ದಾರೆ. 5 ಪಂದ್ಯಗಳನ್ನಾಡಿ ಕೇವಲ 61 ರನ್ ಗಳಿಸಿದ್ದಾರೆ. ಮತ್ತೊಂದೆಡೆ ಬೌಲಿಂಗ್ನಲ್ಲೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. 7 ವಿಕೆಟ್ ಮಾತ್ರ ಪಡೆದಿದ್ದಾರೆ.
(10 / 16)
Babar Azam: ಪಾಕಿಸ್ತಾನ ತಂಡದ ನಾಯಕ, ಏಕದಿನ ಕ್ರಿಕೆಟ್ನ ನಂಬರ್ 1 ಬ್ಯಾಟರ್ ಬಾಬರ್ ಅಜಮ್ ಸಹ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 6 ಪಂದ್ಯಗಳಲ್ಲಿ 207 ರನ್ ಗಳಿಸಿರುವ ಬಾಬರ್ ಬ್ಯಾಟಿಂಗ್ ಸರಾಸರಿ 34.50. ಮೂರು ಅರ್ಧಶತಕ ಸಿಡಿಸಿದ್ದಾರೆ. ಆದರೆ ಅವರು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿಲ್ಲ.
(11 / 16)
Marnus Labuschagne: ಆಸ್ಟ್ರೇಲಿಯಾದ ಮತ್ತೊಬ್ಬ ಸ್ಟಾರ್ ಆಟಗಾರ ಮಾರ್ನಸ್ ಲಬುಶೇನ್ 6 ಪಂದ್ಯಗಳಲ್ಲಿ 201 ರನ್ ಮಾತ್ರ ಸಿಡಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 33.50.
(12 / 16)
Dawid Malan and Jonny Bairstow: ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರಾದ ಡೇವಿಡ್ ಮಲಾನ್, 236 ರನ್ ಸಿಡಿಸಿದ್ದಾರೆ. ಅದರಲ್ಲಿ ಒಂದು ಶತಕ ಸೇರಿದೆ. ಮತ್ತೊಬ್ಬ ಓಪನರ್ ಜಾನಿ ಬೈರ್ಸ್ಟೋ 6 ಪಂದ್ಯಗಳಲ್ಲಿ 141 ರನ್ ಸಿಡಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 23.50.
(13 / 16)
Jos Buttler: ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತೀವ್ರ ವೈಫಲ್ಯ ಅನುಭವಿಸಿದ್ದಾರೆ. 6 ಪಂದ್ಯಗಳಲ್ಲಿ ಕೇವಲ 105 ರನ್ ಗಳಿಸಿದ್ದಾರೆ.
(14 / 16)
Shubman Gill: ವರ್ಷದುದ್ದಕ್ಕೂ ಏಕದಿನದಲ್ಲಿ ರನ್ ಶಿಖರ ಕಟ್ಟಿದ ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಶುಭ್ಮನ್ ಗಿಲ್, ವಿಶ್ವಕಪ್ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಡೆಂಗ್ಯೂ ಕಾರಣ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಗಿಲ್, ಆ ಬಳಿಕ ಕಣಕ್ಕಿಳಿದು 1 ಅರ್ಧಶತಕ ಮಾತ್ರ ಸಿಡಿಸಿದ್ದಾರೆ. 4 ಪಂದ್ಯಗಳಲ್ಲಿ 104 ರನ್ ಸಿಡಿಸಿದ್ದಾರೆ.
(15 / 16)
Mark Wood: ಇಂಗ್ಲೆಂಡ್ ತಂಡದ ಬ್ಯಾಟರ್ಗಳ ಜೊತೆಗೆ ಸ್ಟಾರ್ ಬ್ಯಾಟರ್ ಮಾರ್ಕ್ ವುಡ್ ಕೂಡ ಅಟ್ಟರ್ ಫ್ಲಾಪ್ ಪ್ರದರ್ಶನ ನೀಡಿದ್ದಾರೆ. 6 ಪಂದ್ಯಗಳಲ್ಲಿ ಕೇವಲ 4 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ.
ಇತರ ಗ್ಯಾಲರಿಗಳು