ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ 2024ರಲ್ಲಿ ಟೀಮ್ ಇಂಡಿಯಾಗೆ ಸಿಕ್ಕ ಪ್ರತಿಭಾವಂತ ಆಟಗಾರರಿವರು; ಒಂದೇ ಪಂದ್ಯದಿಂದ ಮಿಂಚಿದ 7 ಸ್ಟಾರ್‌ಗಳು

ಐಪಿಎಲ್ 2024ರಲ್ಲಿ ಟೀಮ್ ಇಂಡಿಯಾಗೆ ಸಿಕ್ಕ ಪ್ರತಿಭಾವಂತ ಆಟಗಾರರಿವರು; ಒಂದೇ ಪಂದ್ಯದಿಂದ ಮಿಂಚಿದ 7 ಸ್ಟಾರ್‌ಗಳು

  • ಐಪಿಎಲ್ 2024ರ ಆವೃತ್ತಿಯಲ್ಲಿ ಇದುವರೆಗೆ 17 ಪಂದ್ಯಗಳು ನಡೆದಿವೆ. ಈವರೆಗೆ ಅನೇಕ ಯುವ ಆಟಗಾರರು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ಛಾಪು ಮೂಡಿಸಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಯಾರಿಗೂ ತಿಳಿಯದಿದ್ದ ಆಟಗಾರರು ಕೂಡಾ ಈಗ ಸೂಪರ್ ಸ್ಟಾರ್‌ಗಳಾಗಿದ್ದಾರೆ. ಅಂಥಾ 7 ಆಟಗಾರರ ಬಗ್ಗೆ ನೋಡೋಣ.

ಐಪಿಎಲ್ ಪಂದ್ಯಾವಳಿಯು ಪ್ರತಿಭಾವಂತ ಆಟಗಾರರನ್ನು ಹುಟ್ಟುಹಾಕುವ ಕಾರ್ಖಾನೆಯಿದ್ದಂತೆ. ಪ್ರತಿ ಆವೃತ್ತಿಯಲ್ಲೂ ಹೊಸ ಹೊಸ ಆಟಗಾರರು ಗುರುತಿಸಿಕೊಳ್ಳುತ್ತಾರೆ. ಈ ಬಾರಿಯ ಲೀಗ್ ನಂತರ ಟಿ20 ವಿಶ್ವಕಪ್ ಕೂಡಾ ನಡೆಯಲಿದ್ದು, ಹಲವು ಆಟಗಾರರು ಭಾರತ ತಂಡಕ್ಕೆ ಾಯ್ಕೆಯಾಗುವ ಕನಸು ಕಾಣುತ್ತಿದ್ದಾರೆ.
icon

(1 / 8)

ಐಪಿಎಲ್ ಪಂದ್ಯಾವಳಿಯು ಪ್ರತಿಭಾವಂತ ಆಟಗಾರರನ್ನು ಹುಟ್ಟುಹಾಕುವ ಕಾರ್ಖಾನೆಯಿದ್ದಂತೆ. ಪ್ರತಿ ಆವೃತ್ತಿಯಲ್ಲೂ ಹೊಸ ಹೊಸ ಆಟಗಾರರು ಗುರುತಿಸಿಕೊಳ್ಳುತ್ತಾರೆ. ಈ ಬಾರಿಯ ಲೀಗ್ ನಂತರ ಟಿ20 ವಿಶ್ವಕಪ್ ಕೂಡಾ ನಡೆಯಲಿದ್ದು, ಹಲವು ಆಟಗಾರರು ಭಾರತ ತಂಡಕ್ಕೆ ಾಯ್ಕೆಯಾಗುವ ಕನಸು ಕಾಣುತ್ತಿದ್ದಾರೆ.(ipl 20)

ನಮನ್ ಧೀರ್: ಐಪಿಎಲ್ ಸೀಸನ್ ಆರಂಭವಾಗುವ ಮೊದಲು ನಮನ್ ಧೀರ್ ಕುರಿತು ಬಹುತೇಕರಿಗೆ ತಿಳಿದಿರಲಿಲ್ಲ. ಮುಂಬೈ ಇಂಡಿಯನ್ಸ್ ತಂಡವು ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ನಮನ್‌ಗೆ ಮೂರನೇ ಕ್ರಮಾಂಕದಲ್ಲಿ ಅವಕಾಶ ನೀಡಿತು. ರಾಜಸ್ಥಾನ ವಿರುದ್ಧ ವಿಫಲರಾದರೂ, ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಹೊಡೆತಗಳಿಂದ ಆಕರ್ಷಿಸಿದರು. ಲೀಗ್‌ನಲ್ಲಿ ಅವರು 200ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
icon

(2 / 8)

ನಮನ್ ಧೀರ್: ಐಪಿಎಲ್ ಸೀಸನ್ ಆರಂಭವಾಗುವ ಮೊದಲು ನಮನ್ ಧೀರ್ ಕುರಿತು ಬಹುತೇಕರಿಗೆ ತಿಳಿದಿರಲಿಲ್ಲ. ಮುಂಬೈ ಇಂಡಿಯನ್ಸ್ ತಂಡವು ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ನಮನ್‌ಗೆ ಮೂರನೇ ಕ್ರಮಾಂಕದಲ್ಲಿ ಅವಕಾಶ ನೀಡಿತು. ರಾಜಸ್ಥಾನ ವಿರುದ್ಧ ವಿಫಲರಾದರೂ, ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಹೊಡೆತಗಳಿಂದ ಆಕರ್ಷಿಸಿದರು. ಲೀಗ್‌ನಲ್ಲಿ ಅವರು 200ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.(ipl 20)

ಮಹಿಪಾಲ್ ಲೊಮ್ರರ್: ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಲೋಮ್ರರ್‌, ಈ ಬಾರಿ ಆರ್‌ಸಿಬಿ ಪರ ಸ್ಫೋಟಕ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ಋತುವಿನಲ್ಲಿ ಆರ್‌ಸಿಬಿ ತಂಡವು ಏಕೈಕ ಪಂದ್ಯವನ್ನು ಗೆದ್ದಿದೆ. ಆ ಪಂದ್ಯದಲ್ಲಿ, ಲೊಮ್ರರ್ 8 ಎಸೆತಗಳಲ್ಲಿ 17 ರನ್ ಗಳಿಸಿ ಫಿನಿಶರ್ ಪಾತ್ರವನ್ನು ವಹಿಸಿದರು. ಲಕ್ನೋ ವಿರುದ್ಧ ಕೂಡಾ ಕೇವಲ 13 ಎಸೆತಗಳಲ್ಲಿ 33 ರನ್ ಗಳಿಸಿ ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡಿದ್ದರು.
icon

(3 / 8)

ಮಹಿಪಾಲ್ ಲೊಮ್ರರ್: ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಲೋಮ್ರರ್‌, ಈ ಬಾರಿ ಆರ್‌ಸಿಬಿ ಪರ ಸ್ಫೋಟಕ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ಋತುವಿನಲ್ಲಿ ಆರ್‌ಸಿಬಿ ತಂಡವು ಏಕೈಕ ಪಂದ್ಯವನ್ನು ಗೆದ್ದಿದೆ. ಆ ಪಂದ್ಯದಲ್ಲಿ, ಲೊಮ್ರರ್ 8 ಎಸೆತಗಳಲ್ಲಿ 17 ರನ್ ಗಳಿಸಿ ಫಿನಿಶರ್ ಪಾತ್ರವನ್ನು ವಹಿಸಿದರು. ಲಕ್ನೋ ವಿರುದ್ಧ ಕೂಡಾ ಕೇವಲ 13 ಎಸೆತಗಳಲ್ಲಿ 33 ರನ್ ಗಳಿಸಿ ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡಿದ್ದರು.(ipl 20)

ಕೋಲ್ಕತಾ ನೈಟ್ ರೈಡರ್ಸ್ ಪರ ಆಂಗ್ಕ್ರಿಶ್ ರಘುವಂಶಿ  ಕೇವಲ ಒಂದು ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಮೊದಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ್ದಾರೆ. ಮೈದಾನದ ಪ್ರತಿ ಮೂಲೆ ಮೂಲೆಗೂ ಚೆಂಡನ್ನು ಕಳುಹಿಸಿದ್ದಾರೆ. ಅದರಲ್ಲೂ ಅವರ ರಿವರ್ಸ್ ಸ್ಕೂಪ್ ಹೆಚ್ಚು ಚರ್ಚೆಯ ವಿಷಯವಾಗಿದೆ. 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಘುವಂಶಿ ಕೇವಲ ಒಂದು ಪಂದ್ಯದಲ್ಲೇ ಸ್ಟಾರ್ ಆಗಿದ್ದಾರೆ.
icon

(4 / 8)

ಕೋಲ್ಕತಾ ನೈಟ್ ರೈಡರ್ಸ್ ಪರ ಆಂಗ್ಕ್ರಿಶ್ ರಘುವಂಶಿ  ಕೇವಲ ಒಂದು ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಮೊದಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ್ದಾರೆ. ಮೈದಾನದ ಪ್ರತಿ ಮೂಲೆ ಮೂಲೆಗೂ ಚೆಂಡನ್ನು ಕಳುಹಿಸಿದ್ದಾರೆ. ಅದರಲ್ಲೂ ಅವರ ರಿವರ್ಸ್ ಸ್ಕೂಪ್ ಹೆಚ್ಚು ಚರ್ಚೆಯ ವಿಷಯವಾಗಿದೆ. 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಘುವಂಶಿ ಕೇವಲ ಒಂದು ಪಂದ್ಯದಲ್ಲೇ ಸ್ಟಾರ್ ಆಗಿದ್ದಾರೆ.(ipl 20)

ಮಯಾಂಕ್ ಯಾದವ್: ಲಕ್ನೋ ವೇಗಿ ಈವರೆಗೆ ಎರಡು ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. 155 ಕಿ.ಮೀಗೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಿ ಗಮನ ಸೆಳೆದಿದ್ದಾರೆ. 150ರ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರ ಆರು ವಿಕೆಟ್‌ ಕೂಡಾ ಕಬಳಿಸಿದ್ದಾರೆ. ಕೇವಲ ಎರಡು ಪಂದ್ಯಗಳನ್ನಾಡಿದ ಬೆನ್ನಲ್ಲೇ, ಅವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
icon

(5 / 8)

ಮಯಾಂಕ್ ಯಾದವ್: ಲಕ್ನೋ ವೇಗಿ ಈವರೆಗೆ ಎರಡು ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. 155 ಕಿ.ಮೀಗೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಿ ಗಮನ ಸೆಳೆದಿದ್ದಾರೆ. 150ರ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರ ಆರು ವಿಕೆಟ್‌ ಕೂಡಾ ಕಬಳಿಸಿದ್ದಾರೆ. ಕೇವಲ ಎರಡು ಪಂದ್ಯಗಳನ್ನಾಡಿದ ಬೆನ್ನಲ್ಲೇ, ಅವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.(ipl20)

ಹರ್ಷಿತ್ ರಾಣಾ: ಇವರ ಅಮೋಘ ಬೌಲಿಂಗ್‌ನಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ಕೊನೆಯ ತಂಡವನ್ನು ಡಿಫೆಂಡ್ ಮಾಡಿದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಫಾಫ್ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ ವಿಕೆಟ್‌ ಪಡೆದರು, ನಿಧಾನಗತಿಯ ಎಸೆತಗಳಿಂದಲೇ ಬ್ಯಾಟರ್‌ಗಳನ್ನು ಕಾಡಿ ವಿಕೆಟ್‌ ಪಡೆಯುವ ಸಾಮರ್ಥಯ ಹೊಂದಿದ್ದಾರೆ.
icon

(6 / 8)

ಹರ್ಷಿತ್ ರಾಣಾ: ಇವರ ಅಮೋಘ ಬೌಲಿಂಗ್‌ನಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ಕೊನೆಯ ತಂಡವನ್ನು ಡಿಫೆಂಡ್ ಮಾಡಿದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಫಾಫ್ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ ವಿಕೆಟ್‌ ಪಡೆದರು, ನಿಧಾನಗತಿಯ ಎಸೆತಗಳಿಂದಲೇ ಬ್ಯಾಟರ್‌ಗಳನ್ನು ಕಾಡಿ ವಿಕೆಟ್‌ ಪಡೆಯುವ ಸಾಮರ್ಥಯ ಹೊಂದಿದ್ದಾರೆ.(AP)

ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಗೆಲುವಿನ ಹೀರೊ ಆಗಿ ಮಿಂಚಿದವರು ಶಶಾಂಕ್‌ ಸಿಂಗ್. ಕೇವಲ 29 ಎಸೆತ ಎದುರಿಸಿದ ಅವರು, 6 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 61 ರನ್‌ ಗಳಿಸಿದರು. ಇದು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
icon

(7 / 8)

ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಗೆಲುವಿನ ಹೀರೊ ಆಗಿ ಮಿಂಚಿದವರು ಶಶಾಂಕ್‌ ಸಿಂಗ್. ಕೇವಲ 29 ಎಸೆತ ಎದುರಿಸಿದ ಅವರು, 6 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 61 ರನ್‌ ಗಳಿಸಿದರು. ಇದು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.(AFP)

ಟೈಟಾನ್ಸ್‌ ವಿರುದ್ಧ  ಪಂಜಾಬ್‌ ಗೆಲುವಿಗಾಗಿ ಪಣ ತೊಟ್ಟವರಲ್ಲಿ ಅಶುತೋಷ್ ಶರ್ಮಾ ಕೂಡಾ ಪ್ರಮುಖ ಆಟಗಾರ. ಶಶಾಂ‌ಕ್‌ ಸಿಂಗ್‌ ಜೊತೆಗೂಡಿ ಉತ್ತಮ ಇನ್ನಿಂಗ್ಸ್‌ ಆಡಿದರು. ಇಂಪ್ಯಾಕ್ಟ್ ಆಟಗಾರನಾಗಿ ಮೈದಾನಕ್ಕಿಳಿದು, 17 ಎಸೆತಗಳಲ್ಲಿ 31 ರನ್ ಸಿಡಿಸಿದರು. ಇದರಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಸೇರಿತ್ತು. ಯುವರಾಜ್‌ ಸಿಂಗ್‌ ದಾಖಲೆ ಮುರಿದಿದ್ದ ಈ ಆಟಗಾರ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
icon

(8 / 8)

ಟೈಟಾನ್ಸ್‌ ವಿರುದ್ಧ  ಪಂಜಾಬ್‌ ಗೆಲುವಿಗಾಗಿ ಪಣ ತೊಟ್ಟವರಲ್ಲಿ ಅಶುತೋಷ್ ಶರ್ಮಾ ಕೂಡಾ ಪ್ರಮುಖ ಆಟಗಾರ. ಶಶಾಂ‌ಕ್‌ ಸಿಂಗ್‌ ಜೊತೆಗೂಡಿ ಉತ್ತಮ ಇನ್ನಿಂಗ್ಸ್‌ ಆಡಿದರು. ಇಂಪ್ಯಾಕ್ಟ್ ಆಟಗಾರನಾಗಿ ಮೈದಾನಕ್ಕಿಳಿದು, 17 ಎಸೆತಗಳಲ್ಲಿ 31 ರನ್ ಸಿಡಿಸಿದರು. ಇದರಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಸೇರಿತ್ತು. ಯುವರಾಜ್‌ ಸಿಂಗ್‌ ದಾಖಲೆ ಮುರಿದಿದ್ದ ಈ ಆಟಗಾರ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.(PTI )


IPL_Entry_Point

ಇತರ ಗ್ಯಾಲರಿಗಳು