Kannada Serial: ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ; ಸ್ನೇಹದ ಕಡಲಲ್ಲಿ ಕೊಡೆ ಹಿಡಿದು ನಡೆದ ಕಾವ್ಯಾ ಮಹಾದೇವ್, ಚಂದು ಗೌಡ
- Snehada Kadalalli Kannada Serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸ್ನೇಹದ ಕಡಲಲ್ಲಿ ಎಂಬ ಹೊಸ ಧಾರಾವಾಹಿ ಶೀಘ್ರದಲ್ಲಿ ಆರಂಭವಾಗಲಿದೆ. ಈ ಸೀರಿಯಲ್‌ನ ನಾಯಕಿ ಮತ್ತು ನಾಯಕ ಪಾತ್ರದಲ್ಲಿ ಕಾವ್ಯಾ ಮಹಾದೇವ್, ಚಂದು ಗೌಡ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ "ಸ್ನೇಹ" ಪ್ರಮುಖ ವಿಷಯವಾಗಿದೆ.
- Snehada Kadalalli Kannada Serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸ್ನೇಹದ ಕಡಲಲ್ಲಿ ಎಂಬ ಹೊಸ ಧಾರಾವಾಹಿ ಶೀಘ್ರದಲ್ಲಿ ಆರಂಭವಾಗಲಿದೆ. ಈ ಸೀರಿಯಲ್‌ನ ನಾಯಕಿ ಮತ್ತು ನಾಯಕ ಪಾತ್ರದಲ್ಲಿ ಕಾವ್ಯಾ ಮಹಾದೇವ್, ಚಂದು ಗೌಡ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ "ಸ್ನೇಹ" ಪ್ರಮುಖ ವಿಷಯವಾಗಿದೆ.
(1 / 14)
Snehada Kadalalli Kannada Serial: ಸ್ಟಾರ್ ಸುವರ್ಣವು ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಲ್ಲಿ ಸ್ನೇಹದ ಕಡಲಲ್ಲಿ ಎಂಬ ಹೊಸ ಧಾರಾವಾಹಿಯ ಪ್ರೊಮೊ ಹಂಚಿಕೊಂಡಿದೆ. ಈ ಸೀರಿಯಲ್‌ನ ಕುರಿತು ಜನರಲ್ಲಿ ಕುತೂಹಲ ಮೂಡಿಸುವಲ್ಲಿ ಪ್ರೊಮೊ ಯಶಸ್ವಿಯಾಗಿದೆ. ಪೊಲೀಸ್ ಠಾಣೆ, ಮದುವೆ, ಮೊದಲ ರಾತ್ರಿ ಇತ್ಯಾದಿ ಅಂಶಗಳು ಈ ಪ್ರಮೊದಲ್ಲಿದೆ.
(2 / 14)
ನಮ್ಮನೆ ಯುವರಾಣಿ ಸೀರಿಯಲ್‌ನಲ್ಲಿ ನಟಿಸಿದ್ದ ಕಾವ್ಯಾ ಮಹಾದೇವ್ ಮತ್ತು ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತವಾಗಿರುವ ಚಂದು ಗೌಡ ಈ ಸೀರಿಯಲ್‌ನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರಿಬ್ಬರು ಪ್ರೇಮಿಗಳಲ್ಲ. ಸ್ನೇಹಿತರು.
(3 / 14)
ಈ ಸೀರಿಯಲ್‌ನ ಪ್ರೊಮೊ ಕುತೂಹಲಕಾರಿಯಾಗಿದೆ. ಒಬ್ಬಳು ಹುಡುಗಿ ಮಿಸ್ ಆಗಿದ್ದಾಳೆ ಎಂದು ವಯರ್‌ಲೆಸ್ ಫೋನ್‌ನಲ್ಲಿ ಧ್ವನಿ ಕೇಳಿಸುತ್ತದೆ. ಯಾವ ಗಾಡಿಯನ್ನೂ ಚೆಕ್‌ಮಾಡದೆ ಬಿಡಬೇಡಿ ಎಂಬ ಸೂಚನೆ ದೊರಕಿದೆ.
(4 / 14)
ಮದುವೆ ಉಡುಗೆಯಲ್ಲಿ ನಾಯಕಿ ಕತ್ತಲಲ್ಲಿ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದಾಳೆ. "ಏನಮ್ಮ, ಮದುವೆ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದೀಯಾ? ಹುಡುಗ ನಿನಗೆ ಇಷ್ಟ ಇಲ್ವಾ?" ಎಂದು ಪೊಲೀಸ್ ಕೇಳುತ್ತಾರೆ.
(5 / 14)
ಪೊಲೀಸ್ ಈ ಪ್ರಶ್ನೆ ಕೇಳಿದಾಗ ಮದುವೆ ದೃಶ್ಯ ಕಾಣಿಸುತ್ತದೆ. ಹಿನ್ನೆಲೆಯಲ್ಲಿ ನಾಯಕಿಯ ಧ್ವನಿ. "ನನ್ನ ಮದುವೆ ಒಂದು ಸುಂದರ ಕನಸ್ಸಾಗಿತ್ತು" ಎಂಬ ಸ್ವಗತ ಕೇಳಿಸುತ್ತದೆ. "
(7 / 14)
ಆಗ ಫಸ್ಟ್ ನೈಟ್ ಕೋಣೆಯ ದೃಶ್ಯ ಕಾಣಿಸುತ್ತದೆ. ಕನಸು ಕಂಗಲಲ್ಲಿ ನಾಯಕಿ ಕುಳಿತಿದ್ದಾಳೆ. ಅಲ್ಲಿ ನಾಯಕ ಮದುಮಗ ಕುಳಿತಿದ್ದಾನೆ. "ಪ್ರೀತಿ ಸಂತೋಷಗಳೇ ತುಂಬಿರುವ ಮನೆತನಕ್ಕೆ ಸೇರುವ ಕನಸು ಕಂಡಿದ್ದೆ" ಎಂಬ ಸ್ವಗತ ಇರುತ್ತದೆ.
(8 / 14)
ಪೊಲೀಸ್ ಠಾಣೆಯಲ್ಲಿ ಕಂಬಿಗಳ ಹಿಂದೆ ಯಾರೋ ಮಾತನಾಡುತ್ತಾರೆ. "ಫಸ್ಟ್ ನೈಟ್ ಮಾಡುವ ಸಮಯದಲ್ಲಿ ಈಯಮ್ಮ ಯಾಕೆ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದಾಳೆ" ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
(9 / 14)
ಫಸ್ಟ್ ನೈಟ್ ಕೋಣೆಯಲ್ಲಿ ಗಂಡ ವಿಲನ್ ಎನ್ನುವುದು ಅವಳ ಅರಿವಿಗೆ ಬರುತ್ತದೆ. "ಇಲ್ಲಿಗೆ ನನ್ನ ಗರ್ಲ್‌ಫ್ರೆಂಡ್ ಅನ್ನೂ ಇನ್‌ವೈಟ್ ಮಾಡಿದ್ದೀನಿ" ಎಂದು ಆಕೆಯನ್ನು ಅಲ್ಲಿಂದ ಹೊರದಬ್ಬುತ್ತಾನೆ. ಆ ಸಮಯದಲ್ಲಿ ಅಲ್ಲಿದ್ದ ಬಾಟಲಿಯಿಂದ ಆತನ ತಲೆ ಒಡೆದಿರುವ ಸೂಚನೆಯೂ ಇದೆ.
(10 / 14)
"ನನ್ನ ಮದುವೆ ಈ ರೀತಿ ಕೆಟ್ಟ ಕನಸು ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ" ಎಂದು ನಾಯಕಿಯ ಸ್ವಗತ ಇರುತ್ತದೆ. "ನಾನು ಒಂದು ಕಂಪ್ಲೇಟ್ ಕೊಡಬೇಕು" ಎಂದು ನಾಯಕಿ ಹೇಳುತ್ತಾಳೆ.
(11 / 14)
"ಮದುವೆ ಎಂದ ಮೇಲೆ ಸಾವಿರ ಇರುತ್ತದೆ. ಹೋಗಮ್ಮ ಮನೆಗೆ" ಎಂದು ಇನ್‌ಸ್ಪೆಕ್ಟರ್ ಹೇಳುತ್ತಾನೆ. ಈ ರೀತಿ ಸ್ಟೇಷನ್‌ಗೆ ಬಂದ ಹೆಣ್ಣು ಮಕ್ಕಳನ್ನು ಈ ರೀತಿ ಕಂಪ್ಲೆಟ್ ಪಡೆಯದೆ ಕಳುಹಿಸುವುದು ತಪ್ಪು. ಸೀರಿಯಲ್ ಅಲ್ವ. ಇಂತಹ ತಪ್ಪುಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ.
(12 / 14)
ಹೊರಗೆ ಜೋರು ಮಳೆ ಸುರಿಯುತ್ತಿದೆ. ಈ ಮಳೆಯಲ್ಲಿ ಒಂಟಿಯಾಗಿ ಒದ್ದೆಯಾಗಿ ಹೊರಹೋಗಬೇಕೆನ್ನುವಷ್ಟರಲ್ಲಿ ಹೀರೋ ಕೊಡೆ ಹಿಡಿಯುತ್ತಾನೆ. "ಯಾರಪ್ಪ ನೀನು ಅವಳ ಗಂಡನಾ?" ಎಂದು ಪೊಲೀಸ್ ಕೇಳುತ್ತಾರೆ.
(13 / 14)
"ಅಲ್ಲ ಅವಳ ವೆಲ್ ವಿಶರ್" ಎನ್ನುತ್ತಾನೆ. ಈ ಮೂಲಕ ಇದು ಪ್ರೇಮ ಕಥೆಯಲ್ಲ. ಸ್ನೇಹದ ಕಥೆ ಎಂಬ ಸೂಚನೆ ನೀಡಲಾಗುತ್ತದೆ.
ಇತರ ಗ್ಯಾಲರಿಗಳು