ಕ್ಯಾಚ್ಗಳಲ್ಲೇ ವಿಶ್ವದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್; ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದವರಿವರು!
- Steve Smith: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 5 ಕ್ಯಾಚ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಟಾಪ್ 5 ಆಟಗಾರರ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ ಸ್ಥಾನ ಪಡೆದಿದ್ದಾರೆ.
- Steve Smith: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 5 ಕ್ಯಾಚ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಟಾಪ್ 5 ಆಟಗಾರರ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ ಸ್ಥಾನ ಪಡೆದಿದ್ದಾರೆ.
(1 / 10)
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಸರಣಿಯನ್ನು ಆಸೀಸ್ ಕ್ಲೀನ್ ಸ್ವೀಪ್ ಸಾಧಿಸಿ 14 ವರ್ಷಗಳ ನಂತರ ಲಂಕಾ ನೆಲದಲ್ಲಿ ಸಿರೀಸ್ ಗೆದ್ದು ದಾಖಲೆ ಬರೆದಿದೆ. ಈ ದಾಖಲೆಯ ಸರಣಿಗೆ ಕಾಂಗರೂ ಪಡೆಯನ್ನು ಮುನ್ನಡೆಸಿದ್ದು ಸ್ಟೀವ್ ಸ್ಮಿತ್.
(AFP)(2 / 10)
ಎರಡನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ್ದ ಸ್ಟೀವ್ ಸ್ಮಿತ್, ಇದೀಗ ಕ್ಯಾಚ್ಗಳಲ್ಲೂ ಮತ್ತೊಂದು ಸಾಧನೆ ಮಾಡಿದ್ದಾರೆ. ಈ ವಿಶ್ವದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾದ ಮೊದಲ ಆಟಗಾರ. ಅದುವೇ ಟೆಸ್ಟ್ ಕ್ರಿಕೆಟ್ನಲ್ಲಿ ಕ್ಯಾಚ್‌ಗಳ ದಾಖಲೆ.
(AFP)(3 / 10)
ಈ ಪಂದ್ಯದಲ್ಲಿ ಐದು ಕ್ಯಾಚ್‌ಗಳನ್ನು ಪಡೆದ ಸ್ಟೀವ್ ಸ್ಮಿತ್ ಅವರು ತಮ್ಮ ದೇಶದ ರಿಕಿ ಪಾಂಟಿಂಗ್ ಜೊತೆಗೆ ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್, ದಾಖಲೆಯನ್ನೂ ಸರಿಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದವರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.
(AFP)(4 / 10)
ಪ್ರಸ್ತುತ ಸ್ಟೀವ್ ಸ್ಮಿತ್ 116 ಟೆಸ್ಟ್ಗಳ 221 ಇನ್ನಿಂಗ್ಸ್‌ಗಳಲ್ಲಿ 200 ಕ್ಯಾಚ್‌ಗಳನ್ನು ಪೂರೈಸಿದ್ದಾರೆ. ಪಂದ್ಯದಲ್ಲಿ 5 ಕ್ಯಾಚ್ ಪಡೆದ ಹಿನ್ನೆಲೆ 196 ಕ್ಯಾಚ್ ಹಿಡಿದಿದ್ದ ದಿಗ್ಗಜ ರಿಕಿ ಪಾಂಟಿಂಗ್ರನ್ನು ಹಿಂದಿಕ್ಕಿದ್ದಾರೆ. ಜಾಕ್ ಕಾಲೀಸ್ ಕೂಡ 200 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಅವರು ಐದನೇ ಸ್ಥಾನದಲ್ಲಿದ್ದಾರೆ.
(AFP)(5 / 10)
ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ ಕಾಲಿಸ್ ಅತಿ ಹೆಚ್ಚು ಕ್ಯಾಚ್ ಪಡೆದವರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 166 ಟೆಸ್ಟ್‌ಗಳಲ್ಲಿ 200 ಕ್ಯಾಚ್ ಹಿಡಿದಿದ್ದಾರೆ. ಅವರು 313 ಇನ್ನಿಂಗ್ಸ್‌ಗಳಲ್ಲಿ ಕ್ಯಾಚ್‌ಗಳ ದ್ವಿಶತಕ ಗಳಿಸಿದ್ದಾರೆ.
(X)(6 / 10)
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಫೀಲ್ಡರ್ ಎಂಬ ದಾಖಲೆ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ಅವರು 164 ಟೆಸ್ಟ್‌ಗಳಲ್ಲಿ ಒಟ್ಟು 210 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ದ್ರಾವಿಡ್ 277 ಇನ್ನಿಂಗ್ಸ್‌ಗಳಲ್ಲಿ 200 ಕ್ಯಾಚ್‌ಗಳನ್ನು ಪೂರ್ಣಗೊಳಿಸಿದ್ದರು.
(X)(7 / 10)
ಟೆಸ್ಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದವರ ಪಟ್ಟಿಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಇದುವರೆಗೆ 152 ಟೆಸ್ಟ್ ಪಂದ್ಯಗಳಲ್ಲಿ 207 ಕ್ಯಾಚ್ ಹಿಡಿದಿದ್ದಾರೆ. 276 ಇನ್ನಿಂಗ್ಸ್‌ಗಳಲ್ಲಿ 200 ಕ್ಯಾಚ್‌ಗಳ ಗಡಿ ತಲುಪಿದ್ದರು.
(REUTERS)(8 / 10)
ಮಹೇಲಾ ಜಯವರ್ಧನೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ 149 ಟೆಸ್ಟ್‌ಗಳಲ್ಲಿ 205 ಕ್ಯಾಚ್ ಹಿಡಿದಿದ್ದಾರೆ. ಅವರು 266 ಇನ್ನಿಂಗ್ಸ್‌ಗಳಲ್ಲಿ 200 ಕ್ಯಾಚ್‌ಗಳನ್ನು ಪೂರ್ಣಗೊಳಿಸಿದ್ದರು.
(ICC)(9 / 10)
ರಿಕಿ ಪಾಂಟಿಂಗ್ 168 ಟೆಸ್ಟ್‌ಗಳಲ್ಲಿ 196 ಕ್ಯಾಚ್ ಪಡೆದು 6ನೇ ಸ್ಥಾನದಲ್ಲಿದ್ದಾರೆ. ಆಸೀಸ್ನ ಮಾರ್ಕ್ ವಾ 181 ಕ್ಯಾಚ್ಗಳೊಂದಿಗೆ 7ನೇ ಸ್ಥಾನದಲ್ಲಿದ್ದಾರೆ.
ಇತರ ಗ್ಯಾಲರಿಗಳು