ಕನ್ನಡ ಸುದ್ದಿ  /  Photo Gallery  /  Strong Earthquake In Turkey Indian Air Force Plane Carrying Relief Material To Turkey

Turkey earthquake: ಟರ್ಕಿಯಲ್ಲಿ ಪ್ರಬಲ ಭೂಕಂಪನ; ಪರಿಹಾರ ಸಾಮಗ್ರಿ ಹೊತ್ತು ಟರ್ಕಿಯತ್ತ ಹೊರಟ ಭಾರತೀಯ ವಾಯುಸೇನಾ ವಿಮಾನ

NDRF Team reach Turkey and Syria for help: ಟರ್ಕಿಯಲ್ಲಿ 24 ಗಂಟೆಗಳಲ್ಲಿ ಮೂರು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಬರೋಬ್ಬರಿ 4 ಸಾವಿರ ನಾಗರಿಕರು ಸಾವನ್ನಪ್ಪಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಅಪಾರ ಸಂಖ್ಯೆಯ ನಾಗರಿಕರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಟರ್ಕಿ ಮತ್ತು ಸಿರಿಯಾಗೆ ನೆರವಿನ ಹಸ್ತಚಾಚಿದೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವು-ನೋವು ಸಂಭವಿಸಿದೆ. ಈ ದುರಂತದಲ್ಲಿ ಇಲ್ಲಿಯವರೆಗೆ 4000 ಸಾವಿರಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದರೆ, 16 ಸಾವಿರಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. 
icon

(1 / 5)

ಪ್ರಬಲ ಭೂಕಂಪದಿಂದಾಗಿ ಹಲವು ಗಗನಚುಂಬಿ ಕಟ್ಟಡಗಳು ಕುಸಿದು ಬಿದ್ದಿವೆ. ಹಲವು ಮನೆಗಳಿಗೆ ಹಾನಿಯಾಗಿದೆ. ನೂರಾರು ಮಂದಿ ನಾಗರಿಕರು ಅವಶೇಷಗಳಡಿ ಸಿಲುಕಿದ್ದಾರೆ. ಪ್ರಪಂಚದಾದ್ಯಂತದ ಅನೇಕ ರಾಷ್ಟ್ರಗಳು ಟರ್ಕಿಗೆ ಸಹಾಯ ಮಾಡಲು ಧಾವಿಸುತ್ತಿವೆ. 
icon

(2 / 5)

ಭಾರತೀಯ ವಾಯುಪಡೆಯ C-17 ವಿಶೇಷ ವಿಮಾನವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, ಎನ್ ಡಿಆರ್ ಎಫ್ ತಂಡಗಳೊಂದಿಗೆ ಟರ್ಕಿಗೆ ಹೊರಟಿದೆ. ಈ ತಂಡ ಟರ್ಕಿ ಮತ್ತು ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ.
icon

(3 / 5)

ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ಎನ್‌ಡಿಆರ್‌ಎಫ್ ತಂಡಗಳು, ಶೋಧ ಮತ್ತು ರಕ್ಷಣಾ ತಂಡಗಳು ಮತ್ತು ಪರಿಹಾರ ತಂಡಗಳೊಂದಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ಸರ್ಕಾರ ಸೋಮವಾರ ನಿರ್ಧರಿಸಿತ್ತು. ಕೈಲಾದಷ್ಟು ಸಹಾಯ ಮಾಡಲು ಬದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿಯವರ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರು ನೆರವು ಕಳುಹಿಸುವ ಸಂಬಂಧ ತುರ್ತು ಸಭೆಯನ್ನೂ ಆಯೋಜಿಸಿದೆ. 
icon

(4 / 5)

ಈ ಸಂಬಂಧ ಪ್ರಧಾನಿ ಕಾರ್ಯಾಲಯವೂ ಟ್ವೀಟ್ ಮಾಡಿದೆ. ಟರ್ಕಿಯಲ್ಲಿ ಭೂಕಂಪದಿಂದ ಉಂಟಾದ ಮಾನವ ಮತ್ತು ಆರ್ಥಿಕ ನಷ್ಟದಿಂದ ನಾನು ದುಃಖಿತನಾಗಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿ ಮತ್ತು ಗಾಯಗೊಂಡ ನಾಗರಿಕರು ಶೀಘ್ರ ಗುಣಮುಖರಾಗಲು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು