Surya Grahan 2025: ಶನಿವಾರ ಮಾರ್ಚ್ 29ರಂದು ಸಂಭವಿಸಿದ ಭಾಗಶಃ ಸೂರ್ಯಗ್ರಹಣದ ಅದ್ಭುತ ಚಿತ್ರಗಳು
ಮಾರ್ಚ್ 29ರ ಶನಿವಾರ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದೆ. ಮಧ್ಯಾಹ್ನ 2:20ಕ್ಕೆ ಆರಂಭವಾದ ಗ್ರಹಣ, ಸಂಜೆ 6:16ಕ್ಕೆ ಕೊನೆಯಾಗಿದೆ, ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸಿಲ್ಲ. ಹೀಗಾಗಿ ನಮ್ಮ ದೇಶದಲ್ಲಿ ಗ್ರಹಣದ ಆಚರಣೆ ಇರಲಿಲ್ಲ.
(1 / 10)
ನಾಂಟೆಸ್ನಲ್ಲಿ ಕಂಡುಬಂದ ಸೂರ್ಯಗ್ರಹಣದ ಮೋಡಿಮಾಡುವ ನೋಟ, ಈ ಚಿತ್ರದಲ್ಲಿ ಚಂದ್ರನಿಂದ ಭಾಗಶಃ ಮುಚ್ಚಲ್ಪಟ್ಟ ಸೂರ್ಯನ ವಿವಿಧ ಹಂತಗಳ ನೋಟವಿದೆ. ಇದು ಅಪರೂಪದ ದೃಶ್ಯವಾಗಿದೆ.
(AFP)(2 / 10)
ಅಟ್ಲಾಂಟಿಕ್ ಸಾಗರದ ಮೇಲೆ ಸೂರ್ಯ ಉದಯಿಸುತ್ತಿದ್ದಂತೆ, ಹ್ಯಾಲಿಫ್ಯಾಕ್ಸ್ ಒಂದು ಬೆರಗುಗೊಳಿಸುವ ದೃಶ್ಯಕ್ಕೆ ಸಾಕ್ಷಿಯಾಯಿತು. ಭಾಗಶಃ ಗ್ರಹಣಗೊಂಡ ಸೂರ್ಯನಿಂದಾಗಿ ಕೆಂಪು ಆಕಾಶ ಗೋಚರಿಸಿತು. ಉರಿಯುವ ಬಣ್ಣಗಳು ನೀರಿನ ಮೇಲ್ಮೈಯಲ್ಲಿ ಪ್ರತಿಫಲಿಸಿದವು.
(AP)(3 / 10)
ನುಕ್ ಮೇಲಿನ ಆರ್ಕ್ಟಿಕ್ ಆಕಾಶದಲ್ಲಿ, ಭಾರಿ ಮೋಡಗಳು ನಾಟಕೀಯ ಗ್ರಹಣಕ್ಕೆ ವೇದಿಕೆಯನ್ನು ಸಿದ್ಧಪಡಿಸಿದವು. ಭಾಗಶಃ ಮರೆಮಾಚಲ್ಪಟ್ಟ ಸೂರ್ಯನು ಇಲ್ಲಿ ಗೋಚರಿಸಿದ ಕ್ಷಣವಿದು. ಮೋಡ ಕವಿದ ಆಕಾಶದ ಮೂಲಕ, ಪ್ರಕೃತಿಯ ಆಕಾಶ ಪ್ರದರ್ಶನವು ಜನರಿಗೆ ಅಚ್ಚರಿ ಮೂಡಿಸಿತು.
(REUTERS)(4 / 10)
ಸೇಂಟ್ ಪೀಟರ್ಸ್ಬರ್ಗ್‌ನ ಐತಿಹಾಸಿಕ ಛಾವಣಿಗಳ ಮೇಲೆ, ಗ್ರಹಣದ ದೃಶ್ಯ ಹೀಗೆ ಗೋಚರಿಸಿತು. ಭಾಗಶಃ ಮುಚ್ಚಿದ ಸೂರ್ಯನು ಹಾದುಹೋಗುವ ಮೋಡಗಳ ಮೂಲಕ ಮಿನುಗಿದ ದೃಶ್ಯ ಮತ್ತು ನಗರದ ಮೇಲೆ ಬದಲಾಗುತ್ತಿರುವ ನೆರಳುಗಳನ್ನು ಕಂಡು ಜನರು ಪುಳಕಿತರಾದರು.
(AP)(5 / 10)
ಬರ್ಗೋಸ್ ಕೋಟೆಯ ಎತ್ತರದ ಪ್ರಾಚೀನ ಪ್ರದೇಶದಲ್ಲಿ ಗ್ರಹಣವನ್ನು ವೀಕ್ಷಿಸಲು ಪ್ರೇಕ್ಷಕರು ಒಟ್ಟುಗೂಡಿದ್ದರು. ಕೈಯಲ್ಲಿ ರಕ್ಷಣಾತ್ಮಕ ಕನ್ನಡಕಗಳೊಂದಿಗೆ, ಪ್ರಕೃತಿಯ ಅಪರೂಪದ ದೃಶ್ಯಗಳನ್ನು ವೀಕ್ಷಿಸಿ ಜನರು ಸಂಭ್ರಮಿಸಿದರು.
(AFP)(9 / 10)
ಭಾಗಶಃ ಗ್ರಹಣಗೊಂಡ ಸೂರ್ಯನು ಲಂಡನ್ ಆಕಾಶದ ಮೂಲಕ ಗೋಚರಿಸಿದ ಪರಿ ಇದು. ಇದು ಅಪರೂಪದ ಆಕಾಶ ಪ್ರದರ್ಶನವಾಗಿ ಕಂಡುಬಂದಿತು.
(AP)ಇತರ ಗ್ಯಾಲರಿಗಳು









