Hailstorm Hits Delhi: ದೆಹಲಿ-ಎನ್‌ಸಿಆರ್‌ನಲ್ಲಿ ಆಲಿಕಲ್ಲುಗಳ ಸುರಿಮಳೆ.. ಫೋಟೋಸ್ ನೋಡಿ
ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಶನಿವಾರ ಲಘು ಮಳೆ ಜೊತೆಗೆ ಆಲಿಕಲ್ಲುಗಳು ಬಿದ್ದಿದ್ದು, ನಗರದಲ್ಲಿ 25.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ದೆಹಲಿಯಲ್ಲಿ ಈ ಋತುವಿನಲ್ಲಿ ದಾಖಲಾಗಬೇಕಿದ್ದ ತಾಪಮಾನಕ್ಕಿಂತ ದುಪ್ಪಟ್ಟು ಕಡಿಮೆ ತಾಪಮಾನ ದಾಖಲಾದಂತಾಗಿದೆ.
(1 / 7)
ಶನಿವಾರದಂದು ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಲಘು ಮಳೆ ಜೊತೆಗೆ ಆಲಿಕಲ್ಲುಗಳು ಬಿದ್ದಿದ್ದು, ಸುಡು ಬಿಸಿಲ ವಾತಾರವರಣಕ್ಕೆ ಸ್ವಲ್ಪ ಬ್ರೇಕ್ ಸಿಕ್ಕಿದೆ. (HT Photo/Sunil Ghosh)
(2 / 7)
ಮಾರ್ಚ್ 20-21 ರವರೆಗೆ ದೆಹಲಿ ಸೇರಿದಂತೆ ವಾಯುವ್ಯ ಭಾರತದಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ಮಾರ್ಚ್ 20 ರಂದು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ. (HT Photo/Sunil Ghosh)
(3 / 7)
ನಗರದಲ್ಲಿ ಶನಿವಾರ 25.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ದೆಹಲಿಯಲ್ಲಿ ಈ ಋತುವಿನಲ್ಲಿ ದಾಖಲಾಗಬೇಕಿದ್ದ ತಾಪಮಾನಕ್ಕಿಂತ ದುಪ್ಪಟ್ಟು ಕಡಿಮೆ ತಾಪಮಾನ ದಾಖಲಾದಂತಾಗಿದೆ. (HT Photo/Vipin Kumar)
(5 / 7)
ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ ಸುರಿದ ಮಳೆಗೆ ಕೆಲವೆಡೆ ರಸ್ತೆಗಳು ಜಲಾವೃತವಾಗಿದ್ದವು. ಟಿಕ್ರಿ ಗಡಿ, ಕರೋಲ್ ಬಾಗ್‌ನ ಬಗ್ಗಾ ಲಿಂಕ್ ವೃತ್ತ ಮತ್ತು ಲೋನಿ ರೋಡ್ ವೃತ್ತದ ಬಳಿ ರಸ್ತೆಗಳು ಜಲಾವೃತವಾಗಿರುವ ಕುರಿತು ದೆಹಲಿ ಟ್ರಾಫಿಕ್ ಪೊಲೀಸರಿಗೆ ಮೂರು ಕರೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ANI)
(6 / 7)
ಅಯಾ ನಗರವು ಗರಿಷ್ಠ 8.4 ಮಿಮೀ ಮಳೆಯನ್ನು ದಾಖಲಿಸಿದೆ, ನಂತರ ಪಾಲಮ್ 3.3 ಮಿಮೀ ಮತ್ತು ಲೋಧಿ ರಸ್ತೆಯಲ್ಲಿ 3 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.(ANI)
(7 / 7)
ಶನಿವಾರ ಸಂಜೆ 6 ಗಂಟೆಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 'ಮಧ್ಯಮ' ಹಂತ ( 170)ದಲ್ಲಿ ದಾಖಲಾಗಿದೆ.(PTI)
ಇತರ ಗ್ಯಾಲರಿಗಳು