Summer 2025: ಕೊಡಗು ಭಾಗದಲ್ಲಿ ಆಗಲೇ ಬಿಸಿಲು ಜೋರು, ನಿತ್ಯ ಹರಿದ್ವರ್ಣ ಕಾಡು ನಾಗರಹೊಳೆಯಲ್ಲಿ ವನ್ಯಜೀವಿಗಳ ಪರಿತಾಪ
- Summer 2025: ಫೆಬ್ರವರಿ ಎರಡನೇ ವಾರದಲ್ಲಿ ಕರ್ನಾಟಕದಲ್ಲಿ ಬಿಸಿಲು ಜೋರಾಗಿದೆ. ಕರ್ನಾಟಕದ ನಿತ್ಯ ಹರಿದ್ವರ್ಣ ಕಾಡು ನಾಗರಹೊಳೆಯಲ್ಲೂ ಬಿಸಿಲ ಬೇಗೆ ಕಂಡು ಬಂದಿದೆ. ಅದರ ಚಿತ್ರ ನೋಟ ಇಲ್ಲಿದೆ.
- Summer 2025: ಫೆಬ್ರವರಿ ಎರಡನೇ ವಾರದಲ್ಲಿ ಕರ್ನಾಟಕದಲ್ಲಿ ಬಿಸಿಲು ಜೋರಾಗಿದೆ. ಕರ್ನಾಟಕದ ನಿತ್ಯ ಹರಿದ್ವರ್ಣ ಕಾಡು ನಾಗರಹೊಳೆಯಲ್ಲೂ ಬಿಸಿಲ ಬೇಗೆ ಕಂಡು ಬಂದಿದೆ. ಅದರ ಚಿತ್ರ ನೋಟ ಇಲ್ಲಿದೆ.
(1 / 8)
ಕೊಡಗು ಹಾಗೂ ಮೈಸೂರು ಜಿಲ್ಲೆಯಲ್ಲಿ ಹಂಚಿಹೋಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಸಲಬೇಗೆ ಜೋರಾಗಿದೆ. ಜಿಂಕೆಗಳು ನೀರು ಹುಡುಕಿಕೊಂಡು ಹೋಗಿ ಕುಡಿದು ಬಿಸಿಲ ಬವಣೆ ನೀಗಿಸಿಕೊಳ್ಳುತ್ತಿವೆ.
(Aruna Nambiyar)(2 / 8)
ಬೇಸಿಗೆ ಕಾಲ ಶುರುವಾಗಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕಾಡಿನ ಬೆಂಕಿ ತಡೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೇಸಿಗೆ ಕಾಲದ ನೋಟ ಹೀಗಿದೆ.
(3 / 8)
ನಿತ್ಯ ಹರಿದ್ವರ್ಣ ಕಾಡು ಎಂದು ಹೆಸರಾಗಿರುವ ನಾಗರಹೊಳೆಯ ಹಲವು ಭಾಗದಲ್ಲಿ ಹಸಿರಿನ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದೆ.
(4 / 8)
ಈಗಾಗಲೇ ನಾಗರಹೊಳೆಯಲ್ಲಿ ಕಾಡಿನ ಬೆಂಕಿಗೆ ಮುನ್ನೆಚ್ಚರಿಕೆಯಾಗಿ ಫೈರ್‌ಲೈನ್‌ಗಳನ್ನು ಹಾಕಲಾಗಿದೆ. ಹಸಿರು ನಿಧಾನವಾಗಿ ಮಾಯವಾಗುತ್ತಿದೆ.
(5 / 8)
ಹಸಿರಿನ ಪ್ರಮಾಣ ಕಡಿಮೆಯಾಗಿ ಅಲ್ಲಲ್ಲಿ ಧೂಳಿನ ವಾತಾವರಣ. ಸೂರ್ಯನ ಪ್ರಭಾವದಿಂದ ನಾಗರಹೊಳೆಗೆ ಬರುವ ಪ್ರವಾಸಿಗರು ಸುಸ್ತಾಗುವ ಸನ್ನಿವೇಶವೂ ಇದೆ.
(6 / 8)
ನಾಗರಹೊಳೆಯಲ್ಲಿ ನಿತ್ಯ ಸಫಾರಿಯಿದೆ. ಬಿಸಿಲ ನಡುವೆಯೂ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರು ಪ್ರಾಣಿಗಳನ್ನು ನೋಡಲು ಸಫಾರಿ ಹೋಗುತ್ತಿದ್ದಾರೆ.
(Aruna Nambiyar)(7 / 8)
ನಾಗರಹೊಳೆಗೆ ಆಗಮಿಸುವ ವಿದೇಶಿ ಪ್ರವಾಸಿಗರಿಗೂ ಬಿಸಿಲ ಝಳ ತಟ್ಟಿದೆ. ಹಲವರು ನೆರಳಿನಲ್ಲಿ ಕುಳಿತು ಚರ್ಚೆಯಲ್ಲಿ ತೊಡಗಿದ್ದಾರೆ.
(Nataraj)ಇತರ ಗ್ಯಾಲರಿಗಳು