Wild life in Summer: ನಾಗರಹೊಳೆ ಅರಣ್ಯದಲ್ಲೂ ಬಿಸಿಲ ಬೇಗೆ, ನೀರು- ನೆರಳು ಹುಡುಕಾಟದಲ್ಲಿ ವನ್ಯಜೀವಿಗಳು; ಹೀಗಿವೆ ಭಿನ್ನ ನೋಟ
- Wild life in Summer: ಈಗ ಎಲ್ಲೆಡೆ ಬಿರು ಬಿಸಿಲು. ಅದು ಕಾಡನ್ನೂ ಬಿಟ್ಟಿಲ್ಲ. ನಿತ್ಯ ಹರಿದ್ವರ್ಣ ಕಾಡು ಎನ್ನಿಸಿರುವ ನಾಗರಹೊಳೆಯಲ್ಲೂ ಬಿಸಿಲು ಜೋರಿದೆ. ಈ ವೇಳೆ ವನ್ಯಜೀವಿಗಳ ಬಿಸಿಲ ದಿನಗಳ ಬದುಕವನ್ನು ಮೈಸೂರಿನ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಸೆರೆ ಹಿಡಿದಿದ್ದಾರೆ.
- Wild life in Summer: ಈಗ ಎಲ್ಲೆಡೆ ಬಿರು ಬಿಸಿಲು. ಅದು ಕಾಡನ್ನೂ ಬಿಟ್ಟಿಲ್ಲ. ನಿತ್ಯ ಹರಿದ್ವರ್ಣ ಕಾಡು ಎನ್ನಿಸಿರುವ ನಾಗರಹೊಳೆಯಲ್ಲೂ ಬಿಸಿಲು ಜೋರಿದೆ. ಈ ವೇಳೆ ವನ್ಯಜೀವಿಗಳ ಬಿಸಿಲ ದಿನಗಳ ಬದುಕವನ್ನು ಮೈಸೂರಿನ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಸೆರೆ ಹಿಡಿದಿದ್ದಾರೆ.
(1 / 10)
ಅಬ್ಬಬ್ಬಾ ಏನು ಬಿಸಿಲು ಎನ್ನುತ್ತಿದ್ದಾನೆ ಹುಲಿರಾಯ. ನೀರು ಸಿಕ್ಕರೆ ಅಷ್ಟೇ ಸಾಕು ಎಂದು ಹುಡುಕಿಕೊಂಡು ಬಂದು ದೇಹದ ಕಾವು ತಣಿಸಿಕೊಳ್ಳುತ್ತಿರುವ ಹುಲಿ.
(2 / 10)
ನೀರಿನಲ್ಲಿ ಕೆಲಹೊತ್ತು ಮಲಗಿ ಬಿಸಿಲ ಶಾಖದಿಂದ ತಪ್ಪಿಸಿಕೊಳ್ಳುವ ಪ್ರಯತ್ನಿಸಿದ ಹುಲಿ ರಾಯನಿಗೆ ಆ ಕೆರೆಯೇ ದಾಹ ತೀರಿಸುವ ಜಲದಾಣ.
(3 / 10)
ನಾಗರಹೊಳೆಯಲ್ಲಿ ಅಲ್ಲಲ್ಲೇ ಕೆರೆಗಳಲ್ಲಿ ನೀರು ಇದೆ. ಕೆಲವು ಕಡೆ ಅರಣ್ಯ ಇಲಾಖೆಯವರೆ ಟ್ಯಾಂಕರ್ ಮೂಲಕ ನೀರು ಹರಿಸುತ್ತಲೂ ಇದ್ದಾರೆ. ಇಂತಲ್ಲಿಗೆ ಹುಲಿ ಬಂದು ಕೆಲ ಹೊತ್ತು ಕಳೆದು ಹೋಗುತ್ತಿದೆ.
(5 / 10)
ನಾಗರಹೊಳೆಯಲ್ಲಿ ಬಹಳಷ್ಟು ಕಡೆ ಮರಗಳು ಒಣಗಿ ವಸಂತ ಮಾಸದ ಆಗಮನದಂತೆ ಚಿಗುರು ಇನ್ನಷ್ಟೆ ಶುರುವಾಗುತ್ತಿದೆ. ಬಿಸಿಲ ನಡುವೆಯೆ ತಾಯಿ ಹಾಗೂ ಮರಿ ಆನೆಗಳ ಸಮಾಗಮವೂ ಆಯಿತು.
(6 / 10)
ನಾಗರಹೊಳೆಯ ಹಲವು ಭಾಗದಲ್ಲಿ ಬಿಸಿಲಿನಿಂದ ಹಸಿರು ಕಡಿಮೆಯಾಗಿದೆ. ಹುಲ್ಲೇ ಪ್ರಮುಖ ಆಹಾರ ಆಗಿರುವ ಆನೆಗಳು ಹುಡುಕಿಕೊಂಡು ಹೋಗುತ್ತವೆ. ಒಂಟಿ ಸಲಗನ ಹೆಜ್ಜೆ ಇದೆ ದಿಕ್ಕಿನಲ್ಲಿ ಇತ್ತು.
(7 / 10)
ಜೀವ ಭಯದ ನಡುವೆಯೇ ಜಿಂಕೆ ಜೋಡಿ ನಾಗರಹೊಳೆಯ ವ್ಯಾಪ್ತಿಯ ಕೆರೆಯೊಂದರಲ್ಲಿ ನೀರು ಕುಡಿಯುತ್ತಿವೆ. ಕೆಲ ದಿನಗಳ ಹಿಂದೆ ಹೀಗೆ ನೀರು ಕುಡಿಯಲು ಬಂದ ಜಿಂಕೆಯನ್ನು ಹುಲಿ ಬೇಟೆ ಕೂಡ ಅಡಿತ್ತು.
(8 / 10)
ಕಾಡಿನಲ್ಲಿ ಜಿಂಕೆಗಳ ಸ್ನೇಹಿತರಾಗಿರುವ ನೀಲಗಿರಿ ಲಂಗೂರ್‌ಗಳು ಮರದಿಂದ ಮರಕ್ಕೆ ಹಾರುತ್ತಲೇ ದಿನ ದೂಡುತ್ತವೆ. ಬೇಸಿಗೆಯಲ್ಲಿ ಲಂಗೂರ್ ಜಂಪಿಂಗ್ ನೋಟ ಹೀಗಿತ್ತು.
(9 / 10)
ಮತ್ತೊಂದು ನೀಲಗಿರಿ ಲಂಗೂರ್ ಕಂಕುಳಲ್ಲಿ ಪುಟ್ಟ ಮರಿಯನ್ನು ಇಟ್ಟುಕೊಂಡೇ ಮರದಿಂದ ಮರಕ್ಕೆ ಹಾರುವ ಯತ್ನದಲ್ಲಿದೆ. ಬಿಸಿಲ ನಡುವೆಯೂ ಅವುಗಳ ಬದುಕು ಕಾಡಲ್ಲಿ ಸಾಗಿದೆ.
ಇತರ ಗ್ಯಾಲರಿಗಳು