Electricity Bill Saving: ಏಸಿ ಬಳಸಿ ಕೂಲಾಗಿರಿ; ಏರ್ ಕಂಡೀಷನರ್ ಬಳಸಿಯೂ ವಿದ್ಯುತ್ ಉಳಿಸುವುದು ಹೇಗೆ; ಇಲ್ಲಿದೆ ಟಿಪ್ಸ್
- ಬೇಸಿಗೆ ಕಾಲವಾದ ಕಾರಣ ಏಸಿ (ಏರ್ ಕಂಡಿಷನರ್) ಬಳಕೆ ಮಾಡುವವರ ಸಂಖ್ಯೆ ಹೆಚ್ಚು. ಏಸಿ ಮಾರಾಟವೂ ಜೋರಾಗಿದೆ. ಏಸಿ ಬಳಕೆಯಿಂದ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ಹಾಗಂತ ಬಳಸದೇ ಇರಲು ಸಾಧ್ಯವಿಲ್ಲ. ಹೆಚ್ಚು ವಿದ್ಯುತ್ ಬಿಲ್ ಬರದಂತೆ ನೋಡಿಕೊಂಡು ಏಸಿ ಬಳಸಲು ಇಲ್ಲಿದೆ ಸುಲಭ ಸಲಹೆ.

(1 / 6)
ಏಸಿಯ ತಾಪಮಾನವನ್ನು 24 ರಲ್ಲಿ ಇರಿಸಿ. ಹೀಗೆ ಇಟ್ಟುಕೊಂಡರೆ ಹೆಚ್ಚು ವಿದ್ಯುತ್ ಬಿಲ್ ಬರುವುದಿಲ್ಲ. ತೀರಾ ಸೆಖೆ ಎನ್ನಿಸಿದ ಸಂದರ್ಭದಲ್ಲಿ ಮಾತ್ರ ತಾಪಮಾನ ಕಡಿಮೆ ಮಾಡಿ.
(Freepik)(2 / 6)
ಕನಿಷ್ಠ 4 ತಿಂಗಳಿಗೊಮ್ಮೆ ಮೆಕ್ಯಾನಿಕ್‌ನಿಂದ ಎಸಿಯನ್ನು ಸ್ವಚ್ಛಗೊಳಿಸಿ. ಫಿಲ್ಟರ್‌ನಲ್ಲಿ ಕೊಳಕು ತುಂಬಿದ್ದರೆ ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚುತ್ತದೆ. ಆ ಕಾರಣಕ್ಕೆ ಆಗಾಗ ಸ್ವಚ್ಛಗೊಳಿಸುತ್ತಿರಬೇಕು.
(Freepik)(3 / 6)
ಕೋಣೆಯ ಬಾಗಿಲು ಮತ್ತು ಕಿಟಕಿಯನ್ನು ಸಂಪೂರ್ಣವಾಗಿ ಮುಚ್ಚಿದ ನಂತರ ಎಸಿ ಆನ್ ಮಾಡಲು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ವಿದ್ಯುತ್ ಬಿಲ್ ಹೆಚ್ಚಾಗಬಹುದು.
(Freepik)(4 / 6)
ಏಸಿ ಖರೀದಿಗೂ ಮುನ್ನ ಆನ್‌ಲೈನ್ ಜಾಲತಾಣಗಳಲ್ಲಿ ರೇಟಿಂಗ್ ನೋಡಿ. ಹೆಚ್ಚಿನ ರೇಟಿಂಗ್ ಇರುವುದನ್ನು ಖರೀದಿ ಮಾಡಿ. ಇದು ಕೂಡ ವಿದ್ಯುತ್ ಉಳಿಕೆ ಸಹಾಯ ಮಾಡುತ್ತದೆ.
(Freepik)(5 / 6)
ಏಸಿ ಆನ್ ಆಗಿರುವಾಗ ಫ್ಯಾನ್ ಆನ್ ಮಾಡಿದರೆ, ಅದು ಕೋಣೆಯ ಎಲ್ಲಾ ಮೂಲೆಗಳಿಗೆ ಎಸಿ ಗಾಳಿಯನ್ನು ಹರಡುವಂತೆ ಮಾಡುತ್ತದೆ. ಇದರಿಂದ ವಿದ್ಯುತ್ ಬಿಲ್ ಕೂಡ ಕಡಿಮೆಯಾಗಲಿದೆ.
(Freepik)ಇತರ ಗ್ಯಾಲರಿಗಳು