ಕನ್ನಡ ಸುದ್ದಿ  /  Photo Gallery  /  Summer Drinks And Health: Some Summer Beverages For Metabolic Problem And Summer Heat

Summer drinks and health: ಜೀರ್ಣಕ್ರಿಯೆಯ ಸಮಸ್ಯೆಗೂ, ಬಿಸಿಲಿನ ದಾಹಕ್ಕೂ ಈ ಪಾನೀಯಗಳೇ ತಂಪು

  • Summer drinks and health: ಬೇಸಿಗೆಯಲ್ಲಿ ಬಿಸಿಲಿನ ದಾಹದ ಜೊತೆಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತವೆ. ಆಸಿಡಿಟಿ, ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನೂ ಎದುರಿಸಬೇಕಾಗಬಹುದು. ಈ ಸಮಸ್ಯೆಯ ನಿವಾರಣೆಗೆ ಬೇಸಿಗೆಯ ತಂಪು ಪಾನೀಯಗಳು ಸಹಾಯ ಮಾಡಬಹುದು.  

ಬಿಸಿಲಿನ ತಾಪ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ದೇಹವನ್ನು ತಣಿಸಲು ತಂಪು ಪಾನೀಯಗಳ ಮೊರೆ ಹೋಗುವುದು ಅವಶ್ಯವಾಗುತ್ತದೆ. ಬೇಸಿಗೆಯ ದಾಹಕ್ಕೂ, ಉತ್ತಮ ಜೀರ್ಣಕ್ರಿಯೆಗೂ ನೆರವಾಗುವ ಕೆಲವು ಪಾನೀಯಗಳು ಇಲ್ಲಿವೆ. 
icon

(1 / 5)

ಬಿಸಿಲಿನ ತಾಪ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ದೇಹವನ್ನು ತಣಿಸಲು ತಂಪು ಪಾನೀಯಗಳ ಮೊರೆ ಹೋಗುವುದು ಅವಶ್ಯವಾಗುತ್ತದೆ. ಬೇಸಿಗೆಯ ದಾಹಕ್ಕೂ, ಉತ್ತಮ ಜೀರ್ಣಕ್ರಿಯೆಗೂ ನೆರವಾಗುವ ಕೆಲವು ಪಾನೀಯಗಳು ಇಲ್ಲಿವೆ. (Freepik)

ಸತ್ತು ಶರಬತ್‌: ಇದು ಬಿಹಾರ ಮೂಲದ ಪಾನೀಯ. ಸದ್ಯ ಭಾರತದಾದ್ಯಂತ ಎಲ್ಲಾ ಕಡೆ ಬೇಸಿಗೆಯಲ್ಲಿ ಕಾಣ ಸಿಗುತ್ತದೆ. ಚೆನ್ನಾ ಕಡಲೆಯನ್ನು ಪುಡಿ ಮಾಡಿ, ಆ ಪುಡಿಯಿಂದ ಈ ಪಾನೀಯವನ್ನು ತಯಾರಿಸಲಾಗುತ್ತದೆ. ಇದರೊಂದಿಗೆ ನೀರು, ಕೊತ್ತಂಬರಿ ಸೊಪ್ಪು ಹಾಗೂ ಈರುಳ್ಳಿಯನ್ನು ಬೆರೆಸಲಾಗುತ್ತದೆ. ಇದು ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲ, ಹಸಿವನ್ನು ನಿಯಂತ್ರಿಸುತ್ತದೆ. 
icon

(2 / 5)

ಸತ್ತು ಶರಬತ್‌: ಇದು ಬಿಹಾರ ಮೂಲದ ಪಾನೀಯ. ಸದ್ಯ ಭಾರತದಾದ್ಯಂತ ಎಲ್ಲಾ ಕಡೆ ಬೇಸಿಗೆಯಲ್ಲಿ ಕಾಣ ಸಿಗುತ್ತದೆ. ಚೆನ್ನಾ ಕಡಲೆಯನ್ನು ಪುಡಿ ಮಾಡಿ, ಆ ಪುಡಿಯಿಂದ ಈ ಪಾನೀಯವನ್ನು ತಯಾರಿಸಲಾಗುತ್ತದೆ. ಇದರೊಂದಿಗೆ ನೀರು, ಕೊತ್ತಂಬರಿ ಸೊಪ್ಪು ಹಾಗೂ ಈರುಳ್ಳಿಯನ್ನು ಬೆರೆಸಲಾಗುತ್ತದೆ. ಇದು ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲ, ಹಸಿವನ್ನು ನಿಯಂತ್ರಿಸುತ್ತದೆ. (Instagram/@pakka_bihaarii)

ಮಜ್ಜಿಗೆ: ಮೊಸರಿಗೆ ಉಪ್ಪು ಹಾಗೂ ಮಸಾಲೆ ಪದಾರ್ಥಗಳನ್ನು ಸೇರಿಸಿ ಮಜ್ಜಿಗೆ ಮಾಡಲಾಗುತ್ತದೆ. ಮಜ್ಜಿಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮತ್ತು ನಿರ್ಜಲೀಕರಣವನ್ನು ತಡೆಯಲು ಸಹಕಾರಿಯಾಗಿದೆ. ಇದರಲ್ಲಿ ಎಲೆಕ್ಟ್ರೋಲೈಟ್‌ ಅಂಶ ಅಧಿಕವಾಗಿದೆ. ಬಿಸಿಲಿನ ವಿರುದ್ಧ ಹೋರಾಡಲು ಇದು ಉತ್ತಮ ಪಾನೀಯವಾಗಿದೆ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಮಜ್ಜಿಗೆ ಬೇಸಿಗೆ ಸಂಬಂಧಿತ ಆರೋಗ್ಯ ಸಮಸ್ಯೆಗಳ ಪರಹಾರಕ್ಕೆ ಉತ್ತಮ ಪಾನೀಯ. 
icon

(3 / 5)

ಮಜ್ಜಿಗೆ: ಮೊಸರಿಗೆ ಉಪ್ಪು ಹಾಗೂ ಮಸಾಲೆ ಪದಾರ್ಥಗಳನ್ನು ಸೇರಿಸಿ ಮಜ್ಜಿಗೆ ಮಾಡಲಾಗುತ್ತದೆ. ಮಜ್ಜಿಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮತ್ತು ನಿರ್ಜಲೀಕರಣವನ್ನು ತಡೆಯಲು ಸಹಕಾರಿಯಾಗಿದೆ. ಇದರಲ್ಲಿ ಎಲೆಕ್ಟ್ರೋಲೈಟ್‌ ಅಂಶ ಅಧಿಕವಾಗಿದೆ. ಬಿಸಿಲಿನ ವಿರುದ್ಧ ಹೋರಾಡಲು ಇದು ಉತ್ತಮ ಪಾನೀಯವಾಗಿದೆ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಮಜ್ಜಿಗೆ ಬೇಸಿಗೆ ಸಂಬಂಧಿತ ಆರೋಗ್ಯ ಸಮಸ್ಯೆಗಳ ಪರಹಾರಕ್ಕೆ ಉತ್ತಮ ಪಾನೀಯ. (Unsplash)

ಬೇಲದ ಪಾನಕ: ಇದು ಅತಿಯಾದ ಬಿಸಿಲಿನಿಂದ ದೇಹವನ್ನು ರಕ್ಷಿಸುತ್ತದೆ. ದೇಹಕ್ಕೆ ಚೈತನ್ಯ ನೀಡುವ ಜೊತೆಗೆ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ರೈಬೊಪ್ಲಾವಿನ್‌ ಅಂಶ ಸಮೃದ್ಧವಾಗಿದೆ. ರೈಬೊಪ್ಲಾವಿನ್‌ ವಿಟಮಿನ್‌ ಬಿ ಅಂಶವಾಗಿದ್ದು, ಬಿಸಿಲಿನ ದಿನಗಳಲ್ಲಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.  
icon

(4 / 5)

ಬೇಲದ ಪಾನಕ: ಇದು ಅತಿಯಾದ ಬಿಸಿಲಿನಿಂದ ದೇಹವನ್ನು ರಕ್ಷಿಸುತ್ತದೆ. ದೇಹಕ್ಕೆ ಚೈತನ್ಯ ನೀಡುವ ಜೊತೆಗೆ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ರೈಬೊಪ್ಲಾವಿನ್‌ ಅಂಶ ಸಮೃದ್ಧವಾಗಿದೆ. ರೈಬೊಪ್ಲಾವಿನ್‌ ವಿಟಮಿನ್‌ ಬಿ ಅಂಶವಾಗಿದ್ದು, ಬಿಸಿಲಿನ ದಿನಗಳಲ್ಲಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.  (Pinterest)

ಸೌತೆಕಾಯಿ ಮತ್ತು ಪುದಿನಾ ಜ್ಯೂಸ್‌: ಬೇಸಿಗೆಗೆ ಈ ಪಾನೀಯ ಬಹಳ ಉತ್ತಮ ಹಾಗೂ ಇದು ದೇಹಕ್ಕೆ ಚೈತನ್ಯ ನೀಡುತ್ತದೆ. ಇದು ದೇಹವನ್ನು ತಂಪು ಮಾಡುವುದು ಮಾತ್ರವಲ್ಲ, ಶಾಖಾಘಾತವನ್ನು ತಡೆಯಲೂ ಸಹಕಾರಿ.  
icon

(5 / 5)

ಸೌತೆಕಾಯಿ ಮತ್ತು ಪುದಿನಾ ಜ್ಯೂಸ್‌: ಬೇಸಿಗೆಗೆ ಈ ಪಾನೀಯ ಬಹಳ ಉತ್ತಮ ಹಾಗೂ ಇದು ದೇಹಕ್ಕೆ ಚೈತನ್ಯ ನೀಡುತ್ತದೆ. ಇದು ದೇಹವನ್ನು ತಂಪು ಮಾಡುವುದು ಮಾತ್ರವಲ್ಲ, ಶಾಖಾಘಾತವನ್ನು ತಡೆಯಲೂ ಸಹಕಾರಿ.  (Shutterstock)


ಇತರ ಗ್ಯಾಲರಿಗಳು