Summer Pet Care: ಬೇಸಿಗೆ ಬಿಸಿ ನಿಮ್ಮ ಮುದ್ದು ಪ್ರಾಣಿಗಳನ್ನು ಬಾಧಿಸದಿರಲಿ; ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಈ 10 ಕ್ರಮ ಪಾಲಿಸಿ
- ಬಿಸಿಲಿನ ದಾಹ ಕೇವಲ ಮನುಷ್ಯರನ್ನ ಮಾತ್ರವಲ್ಲ ಪ್ರಾಣಿಗಳನ್ನೂ ಕೂಡ ಬಾಧಿಸುತ್ತದೆ. ಬೇಸಿಗೆಯಲ್ಲಿ ನಿಮ್ಮ ಮುದ್ದಿನ ಸಾಕುಪ್ರಾಣಿಗಳನ್ನು ಕಾಳಜಿ ಮಾಡುವುದು ಅವಶ್ಯ. ನಿಮ್ಮ ಮನೆಯಲ್ಲೂ ಸಾಕು ಪ್ರಾಣಿಗಳಿದ್ದರೆ, ಅವುಗಳ ಕಾಳಜಿ ಹಾಗೂ ರಕ್ಷಣೆಗೆ ಈ ಹತ್ತು ಕ್ರಮಗಳನ್ನು ತಪ್ಪದೇ ಪಾಲಿಸಿ.
- ಬಿಸಿಲಿನ ದಾಹ ಕೇವಲ ಮನುಷ್ಯರನ್ನ ಮಾತ್ರವಲ್ಲ ಪ್ರಾಣಿಗಳನ್ನೂ ಕೂಡ ಬಾಧಿಸುತ್ತದೆ. ಬೇಸಿಗೆಯಲ್ಲಿ ನಿಮ್ಮ ಮುದ್ದಿನ ಸಾಕುಪ್ರಾಣಿಗಳನ್ನು ಕಾಳಜಿ ಮಾಡುವುದು ಅವಶ್ಯ. ನಿಮ್ಮ ಮನೆಯಲ್ಲೂ ಸಾಕು ಪ್ರಾಣಿಗಳಿದ್ದರೆ, ಅವುಗಳ ಕಾಳಜಿ ಹಾಗೂ ರಕ್ಷಣೆಗೆ ಈ ಹತ್ತು ಕ್ರಮಗಳನ್ನು ತಪ್ಪದೇ ಪಾಲಿಸಿ.
(1 / 12)
ತಾಪಮಾನವು ಹೆಚ್ಚಾಗುತ್ತಿದ್ದಂತೆ, ಸುಡುವ ಶಾಖವನ್ನು ನಿಭಾಯಿಸಲು ಪ್ರಾಣಿಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತವೆ. ಅತಿಯಾದ ಬಿಸಿಲಿನಿಂದ ನಿಮ್ಮ ಸುತ್ತಲಿನ ಪ್ರಾಣಿಗಳು ತಂಪಾಗಿರಲು ಮತ್ತು ಸುರಕ್ಷಿತವಾಗಿರಲು ಸಹಾಯ ಮಾಡುವ ಹತ್ತು ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ. (Unsplash)
(2 / 12)
ತಾಜಾ ನೀರು ನೀಡಿ: ಸಾಕುಪ್ರಾಣಿಗಳಿಗೂ ಕೂಡ ನಮ್ಮಂತೆಯೇ ಡೀಹೈಡ್ರೇಷನ್ ಸಮಸ್ಯೆ ಕಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಅವುಗಳಿಗೆ ತಾಜಾ ನೀರು ಕೊಡುವುದನ್ನು ತಪ್ಪಿಸಬಾರದು. ಕೊಳಕು ನೀರಿನ ಸೇವನೆಯಿಂದ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಎದುರಾಗಬಹುದು.(Unsplash)
(3 / 12)
ನೆರಳಿನ ಪ್ರದೇಶ: ಸಾಕುಪ್ರಾಣಿಗಳಗಾಲಿ, ಬೀದಿ ಪ್ರಾಣಿಗಳಾಗಲಿ ಅವುಗಳು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡುವುದು ಅವಶ್ಯ. ಮನೆ ಅಥವಾ ಹೊರಗಡೆ ಪ್ರಾಣಿಗಳಿಗಾಗಿ ನೆರಳಿನ ಬೀಳುವ ತಂಪಾಗಿರುವ ಜಾಗದ ವ್ಯವಸ್ಥೆ ಮಾಡಿ. (Unsplash)
(4 / 12)
ವನ್ಯಜೀವಿಗಳನ್ನು ರಕ್ಷಿಸಿ: ಅತಿಯಾದ ಬಿಸಿಲಿನ ಕಾರಣ ನದಿ, ಕೆರೆ, ಕೊಳ್ಳಗಳಲ್ಲಿ ನೀರು ಬತ್ತಿ ಹೋಗಲು ಆರಂಭವಾಗಿದೆ. ಹಾಗಾಗಿ ವನ್ಯಜೀವಿಗಳಿಗಾಗಿ ಮನೆ ಅಥವಾ ತೋಟದಲ್ಲಿ ನೀರು ಹಾಗೂ ಆಹಾರಗಳನ್ನು ಇಡಿ. ವನ್ಯಜೀವಿಗಳ ರಕ್ಷಣೆಗೆ ಆದ್ಯತೆ ನೀಡಿ. (Unsplash)
(5 / 12)
ಒದ್ದೆ ಟವಲ್: ಬಿಸಿಲು ತಾಪ ದೇಹದ ಒಳಗೂ ಹೊರಗೂ ಬಾಧಿಸುವಂತೆ ಮಾಡುವುದು ಸುಳ್ಳಲ್ಲ. ಅದಕ್ಕಾಗಿ ಒದ್ದೆ ಟವಲ್ ಅನ್ನು ನಿಮ್ಮ ಸಾಕುಪ್ರಾಣಿ ಮಲಗುವ ಜಾಗದಲ್ಲಿ ಇಡಿ. ಒದ್ದೆ ಟವಲ್‌ನಿಂದ ಪ್ರಾಣಿಯ ಮೈ ಒರೆಸಿ. ಇದರಿಂದ ಇದಕ್ಕೆ ಆರಾಮ ಎನ್ನಿಸುತ್ತದೆ. (Unsplash)
(6 / 12)
ಬಿಸಿ ಮೇಲ್ಮೈಗಳನ್ನು ತಪ್ಪಿಸಿ: ಪಾದಾಚಾರಿ ಮಾರ್ಗ, ರಸ್ತೆ ಹಾಗೂ ಲೋಹದ ಮೇಲ್ಮೈಯಂತಹ ಅತಿಯಾಗಿ ಸುಡುವ ಜಾಗದಲ್ಲಿ ಪ್ರಾಣಿಗಳು ಓಡಾಡದಂತೆ ನೋಡಿಕೊಳ್ಳಿ. ಇದರಿಂದ ಕೈಕಾಲುಗಳು ಹಾಗೂ ಪಂಜ ಸುಡಬಹುದು ಎಚ್ಚರ. (Unsplash)
(7 / 12)
ತಣ್ಣನೆಯ ಆಹಾರ ನೀಡಿ: ನಿಮ್ಮ ಸಾಕುಪ್ರಾಣಿಗಳಿಗೆ ಆಗಾಗ ಹಣ್ಣುಗಳು, ಐಸ್‌ಕ್ರೀಮ್‌ನಂತಹ ತಣ್ಣನೆಯ ಆಹಾರಗಳನ್ನು ಕೊಡಿ. ಇದರಿಂದ ಅವುಗಳ ದೇಹ ತಣ್ಣಗಿರುತ್ತದೆ. ಕಲ್ಲಂಗಡಿ, ಕರ್ಜೂರದಂತಹ ಹಣ್ಣುಗಳನ್ನು ತಿನ್ನಿಸಲು ಅಭ್ಯಾಸ ಮಾಡಿಸಿ. (Unsplash)
(8 / 12)
ಗ್ರೂಮಿಂಗ್ ತಪ್ಪಿಸಬೇಡಿ: ಬೇಸಿಗೆಯಲ್ಲಿ ಬಿಸಿಲು, ಸೆಖೆಯ ಕಾರಣದಿಂದ ಸಾಕುಪ್ರಾಣಿಗಳು ವೇದನೆ ಪಡುವುದನ್ನು ತಪ್ಪಿಸಲು ಅವುಗಳಿಗೆ ಗ್ರೂಮಿಂಗ್ ಮಾಡಿಸುವುದು ಅವಶ್ಯ. ಕೂದಲು ಕತ್ತರಿಸುವುದರಿಂದ ಚಿಕುಟಿಯಂತಹ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನೂ ತಪ್ಪಿಸಬಹುದು. (Unsplash)
(9 / 12)
ವಾಕಿಂಗ್ ತಪ್ಪಿಸಿ: ಬಿಸಿಲಿನ ತಾಪ ಅತಿಯಾದಾಗ ಸಾಕುಪ್ರಾಣಿಗಳಿಗೆ ವಾಕಿಂಗ್ ಮಾಡಿಸುವುದು ನಿಲ್ಲಿಸಿ. ಸಾಧ್ಯವಾದರೆ ಮುಂಜಾನೆ ಅಥವಾ ಸಂಜೆ ವೇಳೆ ಮಾತ್ರ ವಾಕಿಂಗ್ ಕರೆದುಕೊಂಡು ಹೋಗಿ. ಬಿಸಿಲಿನಲ್ಲಿ ತಪ್ಪಿಯೂ ವಾಕಿಂಗ್ ಮಾಡಿಸಬೇಡಿ. (Unsplash)
(10 / 12)
ಶಾಖಾಘಾತದ ಲಕ್ಷಣಗಳನ್ನು ಪರೀಕ್ಷಿಸಿ: ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಶಾಖಾಘಾತವಾಗುತ್ತದೆ. ಉಸಿರುಗಟ್ಟುವಿಕೆ, ಜೊಲ್ಲು ಸುರಿಸುವುದು, ಆಲಸ್ಯದ ಭಾವ ಕಂಡುಬಂದರೆ ಜಾಗರೂಕರಾಗಿರಿ. ತಕ್ಷಣಕ್ಕೆ ತಜ್ಞ ವೈದ್ಯರ ಬಳಿ ತೋರಿಸಿ. (Unsplash)
(11 / 12)
ಜಾಗೃತಿ ಮೂಡಿಸಿ: ಬಿಸಿಲಿನ ವಾತಾವರಣದಲ್ಲಿ ಸಾಕುಪ್ರಾಣಿಗಳು ಹಾಗೂ ಇತರ ಪ್ರಾಣಿಗಳಿಗೆ ಸಹಾಯ ಮಾಡುವ ಮಹತ್ವದ ಬಗ್ಗೆ ಮನೆಯವರಲ್ಲಿ ಹಾಗೂ ಇತರರಲ್ಲಿ ಜಾಗೃತಿ ಮೂಡಿಸಿ. ಪ್ರತಿ ಮನೆಯ ತಾರಸಿಯ ಮೇಲೆ ಹಾಗೂ ಗೇಟಿನ ಮುಂಭಾಗ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಡಿ. (Unsplash)
ಇತರ ಗ್ಯಾಲರಿಗಳು