ಕನ್ನಡ ಸುದ್ದಿ  /  Photo Gallery  /  Summer Terrace Garden How To Take Care Of Your Plants In Summer Watering Fertilizer Gardening Tips In Kannada Rst

Terrace Garden: ಚೆಂದದ ಮನೆಗಿರಲಿ ಅಂದದ ತಾರಸಿ ತೋಟ; ಬೇಸಿಗೆಯಲ್ಲಿ ಕಾಳಜಿ ಮಾಡೋದು ಮಾತ್ರ ಮರಿಬೇಡಿ

ಮನೆಯ ಟೆರೆಸ್‌ ಮೇಲೆ ಅಂದದ ಗಾರ್ಡನ್‌ ಇದ್ದರೆ ಎಷ್ಟು ಚೆನ್ನ ಅಲ್ಲವೇ? ಚಿಗುರಿ ನಿಂತಿರುವ ಗಿಡಗಳು, ಬಣ್ಣದ ಹೂಗಳು ಮನಸ್ಸಿಗೆ ಖುಷಿ ನೀಡುತ್ತವೆ. ಆದರೆ ಬಿಸಿಲಿನ ಝಳ ಕೇಳಬೇಕಲ್ಲ. ಗಿಡಗಳು ಬಾಡುವಂತೆ ಮಾಡುತ್ತದೆ. ಹಾಗಾದರೆ ಬಿಸಿಲಿನ ತಾಪದಿಂದ ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ, ಇಲ್ಲಿದೆ ಸಲಹೆ.

ಕಳೆದ ಕೆಲವು ದಿನಗಳಿಂದ ಬರೀ ಬಿಸಿಲು, ಬಿಸಿಲು, ಬಿಸಿಲು. ಎಲ್ಲಿ ನೋಡಿದರೂ ಬಿಸಿಲಿನದ್ದೇ ಸುದ್ದಿ. ಮಧಾಹ್ನದ ವೇಳೆಗೆ ತಾಪಮಾನ 41-42 ಡಿಗ್ರಿ ತಲುಪುತ್ತದೆ. ಇದರಿಂದಾಗಿ ಅನೇಕ ಸಂದರ್ಭಗಳಲ್ಲಿ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಎಲೆಗಳು ಉದುರುವ ಸಮಸ್ಯೆಯೂ ಈ ಸಮಯದಲ್ಲಿ ಹೆಚ್ಚು ಎನ್ನಬಹುದು. ಎಲೆಗಳು ಉದುರಿ, ಉದುರಿ ನಂತರ ಗಿಡ ಸಾಯುತ್ತದೆ. ಬೇಸಿಗೆಯಲ್ಲಿ ಸಸ್ಯಗಳ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬಹುದು ನೋಡಿ. 
icon

(1 / 5)

ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಗಿಡಗಳಿಗೆ ಹಾನಿಯಾಗುವ ಪ್ರಮಾಣ ಹೆಚ್ಚು. ಆ ಕಾರಣಕ್ಕೆ ತಾರಸಿ ಗಿಡಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಎರಡು ಬಾರಿ ನೀರುಣಿಸಬೇಕು. ಯಾವುದೇ ಕಾರಣಕ್ಕೂ ಬಿಸಿ ಹಾಗೂ ಕಲುಷಿತ ನೀರು ಗಿಡಗಳ ಬುಡಕ್ಕೆ ತಾಕದಂತೆ ನೋಡಿಕೊಳ್ಳಿ. 
icon

(2 / 5)

ಸಣ್ಣ ಪೈಪ್‌ ಅಥವಾ ಸ್ಪ್ರೇ ಬಾಟಲಿಯಿಂದ ಆಗಾಗ ಗಿಡಗಳಿಗೆ ನೀರು ಚಿಮುಕಿಸುತ್ತಿರಿ. ಇದರಿಂದ ಸಸ್ಯಗಳಿಗೆ ಮರುಜೀವ ಬಂದಂತಾಗುತ್ತದೆ. ಇದರಿಂದ ಹಳದಿ ಎಲೆಗಳ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಎಲೆಗಳ ಮೇಲೆ ಧೂಳು ಸಂಗ್ರಹವಾಗುವುದನ್ನು ತಪ್ಪಿಸಬಹುದು. ಕೀಟ ಬಾಧೆಯೂ ಸಾಕಷ್ಟು ಕಡಿಮೆಯಾಗುತ್ತದೆ. 
icon

(3 / 5)

ದಿನಕ್ಕೆರಡು ಬಾರಿ ನೀರು ಹಾಯಿಸಿದರೂ ಮಧ್ಯಾಹ್ನದ ವೇಳೆ ಗಿಡ ಒಣಗಿದ್ದರೆ ಶೆಡ್‌ನಲ್ಲಿ ಇಡುವ ವ್ಯವಸ್ಥೆ ಮಾಡಬೇಕು ಅಥವಾ ಈ ಸಮಯದಲ್ಲಿ ಸೂರ್ಯನ ಬೆಳಕು ನೇರವಾಗಿ ಗಿಡಗಳಿಗೆ ತಾಕದಂತೆ ನೋಡಿಕೊಳ್ಳಿ. ಸಾಧ್ಯವಾದರೆ ಟಾರ್ಪಲ್‌ ತಂದು ಹೊದೆಸಬಹುದು. ಇದು ಬೇಸಿಗೆಗೆ ಉತ್ತಮ. 
icon

(4 / 5)

ಬೇಸಿಗೆಯಲ್ಲಿ ಸಸ್ಯಗಳ ಬುಡಕ್ಕೆ ಹಾಕುವ ಗೊಬ್ಬರದ ಬಗ್ಗೆಯೂ ಎಚ್ಚರ ವಹಿಸಬೇಕು. ಈ ಸಮಯದಲ್ಲಿ ಸಾವಯವ ಗೊಬ್ಬರಗಳ ಬದಲಿಗೆ ರಾಸಾಯನಿಕ ಗೊಬ್ಬರ ಬಳಸಬಹುದು. ಸಾವಯವ ಗೊಬ್ಬರ ಹಾಕಿದಾಗ ಅವು ಮಣ್ಣಿನೊಳಗೆ ಹೋಗಿ ಶಾಖವನ್ನು ಉತ್ಪತ್ತಿ ಮಾಡಬಹುದು. ಬದಲಿಗೆ ರಾಸಾಯನಿಕ ಗೊಬ್ಬರವನ್ನು ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪಡಿಸಬಹುದು. ನಿಯಮಿತವಾಗಿ ಕೀಟನಾಶಕ ಮತ್ತು ಶಿಲೀಂಧ್ರನಾಶಕಗಳನ್ನು ಹಾಕುತ್ತಲೇ ಇರಬೇಡಿ. ಇದರಿಂದಲೂ ಗಿಡಗಳಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚು. 
icon

(5 / 5)

IPL_Entry_Point

ಇತರ ಗ್ಯಾಲರಿಗಳು