ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಲ್ಲಂಗಡಿ ಅಥವಾ ಕರ್ಬೂಜ; ಹೆಚ್ಚು ನೀರಿನಂಶ ಇರುವ ಹಣ್ಣು ಯಾವುದು, ಬೇಸಿಗೆಗೆ ಯಾವುದು ಉತ್ತಮ?

ಕಲ್ಲಂಗಡಿ ಅಥವಾ ಕರ್ಬೂಜ; ಹೆಚ್ಚು ನೀರಿನಂಶ ಇರುವ ಹಣ್ಣು ಯಾವುದು, ಬೇಸಿಗೆಗೆ ಯಾವುದು ಉತ್ತಮ?

  • ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಹಣ್ಣುಗಳು ಬೇಕೇ ಬೇಕು. ಸಾಕಷ್ಟು ನೀರು ಕುಡಿಯುವ ಜೊತೆಗೆ ಹಣ್ಣು ತಿನ್ನುವ ಮೂಲಕ ದೇಹವನ್ನು ಹೈಡ್ರೇಟೆಡ್‌ ಆಗಿ ಇರಿಸಿಕೊಳ್ಳಬಹುದು. ಈ ಋತುವಿನಲ್ಲಿ ಸಿಗುವ ಹಣ್ಣುಗಳಲ್ಲಿ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿರುತ್ತದೆ. ಬೇಸಿಗೆಯ ಶಾಖಕ್ಕೆ ಕಲ್ಲಂಗಡಿ ಮತ್ತು ಕರ್ಬೂಜ ಹಣ್ಣು ಅತ್ಯುತ್ತಮ ಆಯ್ಕೆ.

ಕರ್ಬೂಜ ಮತ್ತು ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ನೀರಿನ ಅಂಶವಿದ್ದು, ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಹಣ್ಣುಗಳಾಗಿವೆ. ಹಾಗಿದ್ದರೆ, ಕಲ್ಲಂಗಡಿ ಮತ್ತು ಕರ್ಬೂಜ ಹಣ್ಣುಗಳಲ್ಲಿ ಯಾವ ಹಣ್ಣು ದೇಹವನ್ನು ಹೆಚ್ಚು ಹೈಡ್ರೇಟೆಡ್‌ ಆಗಿರಿಸುತ್ತದೆ ಎಂಬುದನ್ನು ತಿಳಿಯೋಣ
icon

(1 / 7)

ಕರ್ಬೂಜ ಮತ್ತು ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ನೀರಿನ ಅಂಶವಿದ್ದು, ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಹಣ್ಣುಗಳಾಗಿವೆ. ಹಾಗಿದ್ದರೆ, ಕಲ್ಲಂಗಡಿ ಮತ್ತು ಕರ್ಬೂಜ ಹಣ್ಣುಗಳಲ್ಲಿ ಯಾವ ಹಣ್ಣು ದೇಹವನ್ನು ಹೆಚ್ಚು ಹೈಡ್ರೇಟೆಡ್‌ ಆಗಿರಿಸುತ್ತದೆ ಎಂಬುದನ್ನು ತಿಳಿಯೋಣ(Pixabay)

ಕಲ್ಲಂಗಡಿಯು ಬೇಸಿಗೆಗೆ ಸೂಕ್ತ ಹಣ್ಣು. ಇದರಲ್ಲಿ 92 ಪ್ರತಿಶತದಷ್ಟು ನೀರಿನ ಅಂಶವಿದೆ. ಸ್ಮೂಥಿಗಳು, ಸಲಾಡ್‌ಗಳು, ಐಸ್ ಕ್ರೀಮ್‌ಗಳು ಮತ್ತು ಕಾಕ್‌ಟೇಲ್‌ಗಳು ಮತ್ತು ಮಾಕ್‌ಟೇಲ್‌ಗಳಂಥ ಪಾನೀಯಗಳಿಗೆ ಉತ್ತಮ ಹಣ್ಣು.
icon

(2 / 7)

ಕಲ್ಲಂಗಡಿಯು ಬೇಸಿಗೆಗೆ ಸೂಕ್ತ ಹಣ್ಣು. ಇದರಲ್ಲಿ 92 ಪ್ರತಿಶತದಷ್ಟು ನೀರಿನ ಅಂಶವಿದೆ. ಸ್ಮೂಥಿಗಳು, ಸಲಾಡ್‌ಗಳು, ಐಸ್ ಕ್ರೀಮ್‌ಗಳು ಮತ್ತು ಕಾಕ್‌ಟೇಲ್‌ಗಳು ಮತ್ತು ಮಾಕ್‌ಟೇಲ್‌ಗಳಂಥ ಪಾನೀಯಗಳಿಗೆ ಉತ್ತಮ ಹಣ್ಣು.(Pixabay)

ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಎ, ಬಿ6 ಮತ್ತು ಸಿ ಹೇರಳವಾಗಿದೆ. ಜೊತೆಗೆ ಲೈಕೋಪೀನ್‌ನಂಥ  ಆಂಟಿಆಕ್ಸಿಡೆಂಟ್‌ಗಳಿವೆ. ಲೈಕೋಪೀನ್‌ನಂಥ ಆಂಟಿಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ನೆರವಾಗುತ್ತವೆ. ಇದು ಕ್ಯಾನ್ಸರ್‌ ಅಪಾಯವನ್ನು ತಗ್ಗಿಸುತ್ತದೆ ಎಂದು ತಿಳಿದುಬಂದಿದೆ. 
icon

(3 / 7)

ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಎ, ಬಿ6 ಮತ್ತು ಸಿ ಹೇರಳವಾಗಿದೆ. ಜೊತೆಗೆ ಲೈಕೋಪೀನ್‌ನಂಥ  ಆಂಟಿಆಕ್ಸಿಡೆಂಟ್‌ಗಳಿವೆ. ಲೈಕೋಪೀನ್‌ನಂಥ ಆಂಟಿಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ನೆರವಾಗುತ್ತವೆ. ಇದು ಕ್ಯಾನ್ಸರ್‌ ಅಪಾಯವನ್ನು ತಗ್ಗಿಸುತ್ತದೆ ಎಂದು ತಿಳಿದುಬಂದಿದೆ. (Pixabay)

ಕಲ್ಲಂಗಡಿಯಲ್ಲಿ ಕಡಿಮೆ ಕ್ಯಾಲರಿಗಳಿದ್ದು, ಸಿಟ್ರುಲಿನ್ ಎಂಬ ಅಮೈನೋ ಆಮ್ಲ ಕೂಡಾ ಇದೆ. ಇದು ರಕ್ತದ ಹರಿವನ್ನು ಸುಧಾರಿಸುವ ಮೂಲಕ ಸ್ನಾಯುವಿನ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಎ ಮತ್ತು ಫೈಬರ್ ಉತ್ತಮ ರೋಗನಿರೋಧಕ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಚರ್ಮ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.
icon

(4 / 7)

ಕಲ್ಲಂಗಡಿಯಲ್ಲಿ ಕಡಿಮೆ ಕ್ಯಾಲರಿಗಳಿದ್ದು, ಸಿಟ್ರುಲಿನ್ ಎಂಬ ಅಮೈನೋ ಆಮ್ಲ ಕೂಡಾ ಇದೆ. ಇದು ರಕ್ತದ ಹರಿವನ್ನು ಸುಧಾರಿಸುವ ಮೂಲಕ ಸ್ನಾಯುವಿನ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಎ ಮತ್ತು ಫೈಬರ್ ಉತ್ತಮ ರೋಗನಿರೋಧಕ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಚರ್ಮ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.(Pixabay)

ಪೌಷ್ಟಿಕಾಂಶದ ವಿಷಯದಲ್ಲಿ ಕರ್ಬೂಜ ಹಣ್ಣು ಕೂಡಾ ಕಲ್ಲಂಗಡಿಗಿಂತ ಕಡಿಮೆಯೇನಿಲ್ಲ. ಈ ಹಣ್ಣಿನಲ್ಲೂ ಸುಮಾರು 90 ಪ್ರತಿಶತದಷ್ಟು ನೀರಿನ ಅಂಶವಿರುತ್ತದೆ. ಜ್ಯೂಸ್‌ಗಾಗಿ ಹೆಚ್ಚಾಗಿ ಬಳಕೆಯಾಗುವ ಕರ್ಬೂಜ, ಪುಡಿಂಗ್‌ಗಳ ರೂಪದಲ್ಲೂ ಬಳಸಲಾಗುತ್ತದೆ.
icon

(5 / 7)

ಪೌಷ್ಟಿಕಾಂಶದ ವಿಷಯದಲ್ಲಿ ಕರ್ಬೂಜ ಹಣ್ಣು ಕೂಡಾ ಕಲ್ಲಂಗಡಿಗಿಂತ ಕಡಿಮೆಯೇನಿಲ್ಲ. ಈ ಹಣ್ಣಿನಲ್ಲೂ ಸುಮಾರು 90 ಪ್ರತಿಶತದಷ್ಟು ನೀರಿನ ಅಂಶವಿರುತ್ತದೆ. ಜ್ಯೂಸ್‌ಗಾಗಿ ಹೆಚ್ಚಾಗಿ ಬಳಕೆಯಾಗುವ ಕರ್ಬೂಜ, ಪುಡಿಂಗ್‌ಗಳ ರೂಪದಲ್ಲೂ ಬಳಸಲಾಗುತ್ತದೆ.(Pixabay)

ಕರ್ಬೂಜ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿದೆ. ಜೊತೆಗೆ ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶವು ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ಕಾಪಾಡಲು ನೆರವಾಗುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡಬಲ್ಲ ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಅಂಶವಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಹಣ್ಣು ಆರೋಗ್ಯಕರ ಮತ್ತು ಕಾಂತಿಯುತ ಚರ್ಮ ಪಡೆಯಲು ಕೂಡಾ ಸಹಕಾರಿ.
icon

(6 / 7)

ಕರ್ಬೂಜ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿದೆ. ಜೊತೆಗೆ ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶವು ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ಕಾಪಾಡಲು ನೆರವಾಗುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡಬಲ್ಲ ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಅಂಶವಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಹಣ್ಣು ಆರೋಗ್ಯಕರ ಮತ್ತು ಕಾಂತಿಯುತ ಚರ್ಮ ಪಡೆಯಲು ಕೂಡಾ ಸಹಕಾರಿ.(Pixabay)

ಈ ಎರಡೂ ಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚಿದೆ. ಹೀಗಾಗಿ ದೇಹವನ್ನು ಹೈಡ್ರೇಟ್ ಮಾಡಲು ಸಹಕಾರಿ. ಆದರೂ, ಕರ್ಬೂಜ ಹಣ್ಣಿಗೆ ಹೋಲಿಸಿದರೆ ಕಲ್ಲಂಗಡಿ ಸ್ವಲ್ಪ ಹೆಚ್ಚಿನ ನೀರಿನ ಅಂಶ ಹೊಂದಿದೆ. ಹೀಗಾಗಿ ಬೇಸಿಗೆಯ ಶಾಖಕ್ಕೆ ಕಲ್ಲಂಗಡಿ ತುಸು ಹೆಚ್ಚು ಪರಿಣಾಮಕಾರಿಯಾಗಿದೆ. 
icon

(7 / 7)

ಈ ಎರಡೂ ಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚಿದೆ. ಹೀಗಾಗಿ ದೇಹವನ್ನು ಹೈಡ್ರೇಟ್ ಮಾಡಲು ಸಹಕಾರಿ. ಆದರೂ, ಕರ್ಬೂಜ ಹಣ್ಣಿಗೆ ಹೋಲಿಸಿದರೆ ಕಲ್ಲಂಗಡಿ ಸ್ವಲ್ಪ ಹೆಚ್ಚಿನ ನೀರಿನ ಅಂಶ ಹೊಂದಿದೆ. ಹೀಗಾಗಿ ಬೇಸಿಗೆಯ ಶಾಖಕ್ಕೆ ಕಲ್ಲಂಗಡಿ ತುಸು ಹೆಚ್ಚು ಪರಿಣಾಮಕಾರಿಯಾಗಿದೆ. (Pixabay)


IPL_Entry_Point

ಇತರ ಗ್ಯಾಲರಿಗಳು