Summer Travel 2025 : ಬೇಸಿಗೆಯ ಮನಗಳಿಗೆ ತಂಪು ನೀಡಲಿದೆ ಮುಡುಕುತೊರೆ ಪ್ರವಾಸ; ದೇಗುಲದಿಂದ ಕಾವೇರಿ ನದಿ ವೈಭವದ ನೋಟ ಚಂದ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer Travel 2025 : ಬೇಸಿಗೆಯ ಮನಗಳಿಗೆ ತಂಪು ನೀಡಲಿದೆ ಮುಡುಕುತೊರೆ ಪ್ರವಾಸ; ದೇಗುಲದಿಂದ ಕಾವೇರಿ ನದಿ ವೈಭವದ ನೋಟ ಚಂದ

Summer Travel 2025 : ಬೇಸಿಗೆಯ ಮನಗಳಿಗೆ ತಂಪು ನೀಡಲಿದೆ ಮುಡುಕುತೊರೆ ಪ್ರವಾಸ; ದೇಗುಲದಿಂದ ಕಾವೇರಿ ನದಿ ವೈಭವದ ನೋಟ ಚಂದ

  • ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಬೇಸಿಗೆ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಮೆಟ್ಟಿಲು ಏರಿ ಬೆಟ್ಟಕ್ಕೆ ಹೋದರೆ ದೇಗುಲ, ಎದುರು ಕಾವೇರಿಯ ಮೋಹನ ಚಿತ್ರಣ.

ಶತಮಾನಗಳಷ್ಟು ಹಳೆಯಾದ ಕಾವೇರಿ ನದಿ ತೀರದ ಮುಡುಕುತೊರೆ, ಅಲ್ಲಿನ ದೇವಸ್ಥಾನ, ಸುತ್ತಮುತ್ತಲ ನೋಟ ಎಂತಹ ಪ್ರವಾಸಿಗರ ಮನ ಸೆಳೆಯುತ್ತದೆ.
icon

(1 / 10)

ಸುಮಾರು ಮೂರು ನೂರಕ್ಕೂ ಅಧಿಕ ಇರುವ ಮೆಟ್ಟಿಲುಗಳನ್ನು ಏರಿಕೊಂಡು ಹೋದರೆ ಸಿಗುವುದೇ ಬೆಟ್ಟದಲ್ಲಿರುವ ಮುಡುಕುತೊರೆ ಭ್ರಮರಾಂಭ ಸಹಿತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ.
icon

(2 / 10)

ಬೇಸಿಗೆ ಇರುವುದರಿಂದ ದೇಗುಲದ ಮೆಟ್ಟಿಲುಗಳನ್ನು ಏರಿಕೊಂಡು ಹೋದಲು ಮೇಲ್ಛಾವಣಿ ವ್ಯವಸ್ಥೆಯನ್ನು ಮಾಡಲಾಗಿದೆ. ಮೈಸೂರು, ಚಾಮರಾಜನಗರ, ಕೊಳ್ಳೇಗಾಲ,.ಮಳವಳ್ಳಿ ಮಾರ್ಗವಾಗಿ ಇಲ್ಲಿಗೆ ಬರಲು ವ್ಯವಸ್ಥೆಯಿದೆ.
icon

(3 / 10)

ಬೆಟ್ಟದ ಮೇಲಿದೆ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಭ್ರಮರಾಂಬಿಕ ದೇವಾಲಯ. ಇಲ್ಲಿ ಮಲ್ಲಿಕಾರ್ಜುನನಿಗೆ ನಿತ್ಯ ಪೂಜೆಗಳು ನೆರವೇರುತ್ತವೆ.
icon

(4 / 10)

ಮಲ್ಲಿಕಾರ್ಜುನನ ಜತೆಯಲ್ಲಿ ಭ್ರಮರಾಂಭ ಕೂಡ ಇಲ್ಲಿನ ಆಕರ್ಷಣೆ, ಮಹಾಭಾರತ ಕಾಲದಲ್ಲಿ ಅರ್ಜುನ ಅಜ್ಞಾತವಾಸದಲ್ಲಿದ್ದ ಸಂದರ್ಭದಲ್ಲಿ ಈ ಮಾರ್ಗವಾಗಿ ಸಂಚರಿಸುವಾಗ ಮಲ್ಲಿಕಾ ಎಂಬ ಪುಷ್ಪದಿಂದ ಶಿವಲಿಂಗಕ್ಕೆ ಅರ್ಚನೆ ಮಾಡಿದ್ದ. ಅದಕ್ಕಾಗಿಯೇ ಈ ದೇವರಿಗೆ ಮಲ್ಲಿಕಾರ್ಜುನ ಎಂಬ ಹೆಸರು ಬಂತು ಎನ್ನುವ ಸ್ಥಳ ಮಹಾತ್ಮೆ ಇದೆ.
icon

(5 / 10)

ದೇಗುಲದ ಎದುರಿಗೆ ನೋಡಿದರೆ ಸಿಗುವುದೇ ಕಾವೇರಿ ನದಿ ಹರಿಯುವ ಮೋಹಕ ದೃಶ್ಯ.
icon

(6 / 10)

ದೇಗುಲದ ಎದುರಿಗೆ ನೋಡಿದರೆ ಸಿಗುವುದೇ ಕಾವೇರಿ ನದಿ ಹರಿಯುವ ಮೋಹಕ ದೃಶ್ಯ.

ದೇಗುಲದ ಮೆಟ್ಟಿಲುಗಳನ್ನು ಏರಿ ಹೋದಾಗ ಅಬ್ಬಬ್ಬಾ ಎನ್ನುವ ಭಕ್ತರು, ಪ್ರವಾಸಿಗರು ಎದುರಿಗೆ ನೋಡಿದಾಗ ಕಾಣುವ ಮನಮೋಹನ ನೋಟ ಕಂಡಾಗ ವಾವ್‌ ಎಂದು ಬಿಡುತ್ತಾರೆ.
icon

(7 / 10)

ತಿರುಮಕೂಡಲು ನರಸೀಪುರದಲ್ಲಿ ಕಪಿಲಾ ನದಿ ಸಂಗಮವಾಗಿ ಮುಂದೆ ವಿಶಾಲವಾಗಿ ಹರಿಯುವ ಕಾವೇರಿ ನದಿ ಇಂತಹ ಮೋಹಕ ಸನ್ನಿವೇಶವನ್ನು ಸೃಷ್ಟಿಸಿದೆ.
icon

(8 / 10)

ಕಾವೇರಿ ನದಿ ಇಲ್ಲಿ ಕವಲೊಡೆದು ದ್ವೀಪ ರೂಪದಲ್ಲಿ ಹರಿದು ಬರುತ್ತದೆ. ಇಲ್ಲಿಂದ ಮುಂದೆ ತಲಕಾಡು ಮಾರ್ಗವಾಗಿ ತಮಿಳುನಾಡಿನತ್ತು ಕಾವೇರಿ ನದಿ ಹರಿಯುವುದು ವಿಶೇಷ.
icon

(9 / 10)

ಈಗ ಮುಡುಕುತೊರೆ ದೇಗುಲದ ಪುನರುತ್ಥಾನ ಚಟುವಟಿಕೆ ನಾಲ್ಕೈದು ವರ್ಷದಿಂದ ನಡೆದಿದೆ. ದೇಗುಲದ ಒಳ ಭಾಗವನ್ನು ಹೊಸದಾಗಿಯೇ ನಿರ್ಮಿಸುವ ಕಾರ್ಯ ನಡೆದಿದೆ,
icon

(10 / 10)

ಈಗ ಮುಡುಕುತೊರೆ ದೇಗುಲದ ಪುನರುತ್ಥಾನ ಚಟುವಟಿಕೆ ನಾಲ್ಕೈದು ವರ್ಷದಿಂದ ನಡೆದಿದೆ. ದೇಗುಲದ ಒಳ ಭಾಗವನ್ನು ಹೊಸದಾಗಿಯೇ ನಿರ್ಮಿಸುವ ಕಾರ್ಯ ನಡೆದಿದೆ,

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು