Summer Travel: ಬೇಸಿಗೆಯಲ್ಲೂ ಭೇಟಿ ನೀಡಬಹುದಾದ ಭೀಮಾ ನದಿ ತೀರದ ಪ್ರಮುಖ ಪ್ರವಾಸಿ ತಾಣಗಳು
- ಕರ್ನಾಟಕದ ಪ್ರಮುಖ ನದಿಗಳಲ್ಲಿ ಭೀಮಾ ಕೂಡ ಒಂದು. ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಕೃಷ್ಣಾ ನದಿ ಜತೆಗೆ ಸೇರುವ ಭೀಮಾ ನದಿ ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಹರಿಯುತ್ತದೆ. ಭೀಮಾ ನದಿ ಉದ್ದಕ್ಕೂ ಹಲವಾರು ಧಾರ್ಮಿಕ, ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಬೇಸಿಗೆಯಲ್ಲೂ ಭೀಮಾ ತಟದ ನದಿ ತೀರದಲ್ಲಿ ಕಳೆಯುವ ಪ್ರಮುಖ ತಾಣಗಳ ನೋಟ ಇಲ್ಲಿದೆ.
- ಕರ್ನಾಟಕದ ಪ್ರಮುಖ ನದಿಗಳಲ್ಲಿ ಭೀಮಾ ಕೂಡ ಒಂದು. ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಕೃಷ್ಣಾ ನದಿ ಜತೆಗೆ ಸೇರುವ ಭೀಮಾ ನದಿ ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಹರಿಯುತ್ತದೆ. ಭೀಮಾ ನದಿ ಉದ್ದಕ್ಕೂ ಹಲವಾರು ಧಾರ್ಮಿಕ, ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಬೇಸಿಗೆಯಲ್ಲೂ ಭೀಮಾ ತಟದ ನದಿ ತೀರದಲ್ಲಿ ಕಳೆಯುವ ಪ್ರಮುಖ ತಾಣಗಳ ನೋಟ ಇಲ್ಲಿದೆ.
(1 / 9)
ಮಹಾರಾಷ್ಟ್ರದ ಫಂಡರಾಪುರದಲ್ಲಿ ಚಂದ್ರಭಾಗ ನದಿಯಾಗಿ ಕರ್ನಾಟಕದ ವಿಜಯಪುರ ಜಿಲ್ಲೆಯ ಧೂಳಖೇಡ ಬಳಿ ಕಾಣುವ ಭೀಮಾ ನದಿ. ಇಲ್ಲಿನ ಶಂಕರಲಿಂಗ ದೇಗುಲ ಆಕರ್ಷಣೀಯ. ವಿಜಯಪುರದಿಂದ ಸುಮಾರು 65 ಕಿ.ಮಿ. ದೂರದಲ್ಲಿದೆ ಧೂಳಖೇಡ.
(2 / 9)
ಧೂಳಖೇಡದ ನಂತರ ವಿಜಯಪುರ ಜಿಲ್ಲೆಯ ಚಡಚಣ, ಇಂಡಿ ತಾಲ್ಲೂಕಿನಲ್ಲಿ ಹರಿವ ಭೀಮಾ ನದಿ ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಮಣ್ಣೂರು ಗ್ರಾಮ ಪ್ರವೇಶಿಸುತ್ತದೆ. ಇಲ್ಲಿಯೂ ಹಲವು ಧಾರ್ಮಿಕ ತಾಣಗಳಿವೆ. ರೇಣುಕಾ ಯಲ್ಲಮ್ಮ ದೇಗುಲದ ಪಕ್ಕದಲ್ಲಿಯೇ ಹಾದು ಹೋಗುತ್ತದೆ ನೀರಿನ ನಡುವೆ ಇರುವ ದೇಗುಲವದು. ಅಲ್ಲಿಯೇ ಮಠ, ದೇಗುಲಗಳೂ ಇವೆ.
(prajavani)(3 / 9)
ಮಣ್ಣೂರ ರೇಣುಕಾ ಯಲ್ಲಮ್ಮ ದೇಗುಲವೂ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ವಿಜಯಪುರ ಇಂಡಿ ಮಾರ್ಗವಾಗಿಯೂ ಮಣೂರಿಗೆ ಹೋಗಬಹುದು. ಕಲಬುರಗಿ ಮೂಲಕವೂ ಬರಬಹುದು.
(4 / 9)
ಕಲಬುರಗಿ ಜಿಲ್ಲೆ ಅಫಜಪುರ ತಾಲ್ಲೂಕು ಹಾಗೂ ವಿಜಯಪುರ ಜಿಲ್ಲೆ ದೇವಣಗಾಂವಕ್ಕೆ ಹೊಂದಿಕೊಂಡಂತೆ ಇರುವ ಸೊನ್ನ ಬ್ಯಾರೇಜ್ ಕೂಡ ಭೀಮಾ ನದಿಯ ಭಾಗ. ಇಲ್ಲಿಗೂ ಭೇಟಿ ನೀಡಬಹುದು.
(5 / 9)
ಅಫಜಲಪುರ ತಾಲ್ಲೂಕಿನಲ್ಲೇ ಇರುವ ಗಾಣಗಾಪುರವು ಭೀಮಾ ಹಾಗೂ ಅಮರಜಾ ನದಿ ಸಂಗಮ ಸ್ಥಳ. ಭೀಮಾ ನದಿ ತೀರದ ಗಾಣಗಾಪುರ ದತ್ತಾತ್ರೇಯ ಕ್ಷೇತ್ರ. ಇಲ್ಲಿಗೂ ಭೇಟಿ ನೀಡಬಹುದು. ಕಲಬುರಗಿಯಿಂದ ಗಾಣಗಾಪುರ ಮೂವತ್ತೈದು ಕಿ.ಮಿ ದೂರದಲ್ಲಿದೆ.
(6 / 9)
ಗಾಣಗಾಪೂರ ನಂತರ ಯಾದಗಿರಿ ಜಿಲ್ಲೆಗೆ ಪ್ರವೇಶಿಸುವ ಭೀಮಾ ನದಿ ಯಾದಗಿರಿ ಸಮೀಪದಲ್ಲಿಯೇ ಹರಿಯುತ್ತದೆ. ಕಾಳಬೆಳಗುಂದಿ ಬಳಿ ಬನದೇಶ್ವರ ದೇಗುಲಕ್ಕೂ ಹೋಗಿ ಭೀಮಾ ನದಿಯಲ್ಲಿ ಮಿಂದು ಬರಬಹುದು.
(7 / 9)
ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲ್ಲೂಕಿನ ಸನ್ನತಿ ಕೂಡ ಭೀಮಾ ತೀರದ ಪ್ರಮುಖ ದೇಗುಲ. ಇಲ್ಲಿನ ಚಂದ್ರಲಾ ಪರಮೇಶ್ವರಿ ದೇಗುಲ ಆಕರ್ಷಣೀಯ. ನದಿ ಸಮೀಪದಲ್ಲಿರುವ ಬುದ್ದಸ್ಥೂಪವೂ ಪ್ರಮುಖ ತಾಣಗಳಲ್ಲೊಂದು.
(8 / 9)
ಭೀಮಾ ನದಿ ತೀರದಲ್ಲಿಯೇ ಘತ್ತರಗಿ ಭಾಗ್ಯವಂತಿ. ಹೊನಗುಂಟಾ ಚಂದ್ರಲಾ ಪರಮೇಶ್ವರಿ, ಹೆರೂರು ಹುಲಿಕುಂಠೇಶ್ವರ ದೇಗುಲ, ಜೇವರ್ಗಿ ತಾಲ್ಲೂಕಿನ ರಾಸಣಗಿ ಬಲಭೀಮ ದೇವಸ್ಥಾನ, ಕೋಳಕೂರದ ಸಿದ್ದಬಸವೇಶ್ವರ ದೇಗುಲ ಕೂಡ ಪ್ರಮುಖವಾದವು.
ಇತರ ಗ್ಯಾಲರಿಗಳು