ನಾಸಾ ಗಗನ ಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ಮರುಪ್ರಯಾಣದ ಐತಿಹಾಸಿಕ ಕ್ಷಣಗಳ ಲೇಟೆಸ್ಟ್ ಫೋಟೋಸ್
Sunita Williams return: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 9 ತಿಂಗಳ ಕಾಲ ಅನಿವಾರ್ಯವಾಗಿ ಬಾಕಿ ಉಳಿದಿದ್ದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರು ಪ್ರಯಾಣ ಬೆಳೆಸಿದ್ದಾರೆ. ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್ ಇಂದು ಭೂ ಸ್ಪರ್ಶ ಮಾಡಲಿದೆ. ಈ ಐತಿಹಾಸಿಕ ಕ್ಷಣಗಳ ಲೇಟೆಸ್ಟ್ ಫೋಟೋಸ್ ಇಲ್ಲಿವೆ.
(1 / 9)
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 9 ತಿಂಗಳ ಕಾಲ ಅನಿವಾರ್ಯವಾಗಿ ಬಾಕಿ ಉಳಿದಿದ್ದ ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರುಪ್ರಯಾಣ ಬೆಳೆಸಿದ್ದಾರೆ. ಅವರ ಈ ಮರುಪ್ರಯಾಣದ ಇತ್ತೀಚಿನ ಚಿತ್ರನೋಟ ಇದೆ.
(NASA)(2 / 9)
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ನೇರ ಪ್ರಸಾರದ ವಿಡಿಯೋದಿಂದ ತೆಗೆದ ಚಿತ್ರ ಇದು. ಇದರಲ್ಲಿ ಸ್ಪೇಸ್ ಎಕ್ಸ್‌ನ ಕ್ರೂ ಕ್ಯಾಪ್ಸೂಲ್ ಭಾನುವಾರ ಯಶಸ್ವಿಯಾಗಿ ಐಎಸ್‌ಎಸ್‌ನಿಂದ ಹೊರಬಿದ್ದಿದೆ. ಗಗನಯಾತ್ರಿಗಳಾದ ಬುಚ್ ವಿಲ್ಮೋರ್, ಸುನಿತಾ ವಿಲಿಯಮ್ಸ್ ಅವರ ಮರು ಪ್ರಯಾಣದ ನೇರ ಪ್ರಸಾರದ ವಿಡಿಯೋವನ್ನು ನಾಸಾ ಮಾಡುತ್ತಿದೆ.
(NASA / PTI Photo)(3 / 9)
ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಭೂಮಿ ಮರುಪ್ರಯಾಣ ಶುರುಮಾಡಿದ ಸಂದರ್ಭದ ವಿಡಿಯೋ ಚಿತ್ರ.
(NASA / Handout via Reuters)(4 / 9)
ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಐಎಸ್‌ಎಸ್‌ನಲ್ಲಿ 9 ತಿಂಗಳು ಬಾಕಿ ಉಳಿಯಬೇಕಾಗಿ ಬಂದಿತ್ತು. ಅವರು ಕಳೆದ ವರ್ಷ ಜೂನ್‌ನಲ್ಲಿ ಅಲ್ಲಿಗೆ ಹೋಗಿದ್ದರು. ಅಲ್ಲಿಂದ ಈಗ ಭೂಮಿಗೆ ಮರಳುತ್ತಿದ್ದಾರೆ.
(Mint)(5 / 9)
ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಜತೆಗೆ ರೋಸ್ಕೋಸ್‌ಮೋಸ್ ಕೋಸ್ಮೋನಾಟ್ ಅಲೆಕ್ಸಾಂಡರ್ ಗೋರ್ಬನೋವ್ ಮತ್ತು ನಾಸಾ ಗಗನಯಾತ್ರಿ ನಿಕ್ ಹೇಗ್ ಮ್ಯಾನೋವರ್ಸ್ ಜತೆಯಾಗಿ ಭೂಮಿಗೆ ವಾಪಸಾಗುತ್ತಿದ್ದಾರೆ. ಈ ಕ್ಯಾಪ್ಸೂಲ್ ಇಂದು (ಮಾರ್ಚ್ 18) ಸಂಜೆ ಭೂ ಸ್ಪರ್ಶ ಮಾಡುವ ಸಾಧ್ಯತೆ ಇದೆ.
(NASA / Handout via Reuters)(6 / 9)
ಸುನಿತಾ ವಿಲಿಯಮ್ಸ್ ಮರು ಪ್ರಯಾಣ ಶುರುಮಾಡುವ ಸಂದರ್ಭದಲ್ಲಿ ತೆಗೆದ ಚಿತ್ರ. ಇದರಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಜತೆಗೆ ರೋಸ್ಕೋಸ್‌ಮೋಸ್ ಕೋಸ್ಮೋನಾಟ್ ಅಲೆಕ್ಸಾಂಡರ್ ಗೋರ್ಬನೋವ್ ಮತ್ತು ನಾಸಾ ಗಗನಯಾತ್ರಿ ನಿಕ್ ಹೇಗ್ ಮ್ಯಾನೋವರ್ಸ್ ಜತೆಗಿದ್ದಾರೆ.
(7 / 9)
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇಳಿದ ಸ್ಪೇಸ್ ಎಕ್ಸ್ ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿದ್ದ ಗಗನಯಾತ್ರಿಗಳು ಜತೆಯಾದ ಸಂಭ್ರಮದ ಕ್ಷಣ.
(NASA)(8 / 9)
ಸುನಿತಾ ವಿಲಿಯಮ್ಸ್ ಅವರ ಪೂರ್ವಿಕರಿದ್ದ ಗುಜರಾತ್‌ನ ಮೆಹ್ಸಾನ ಜಿಲ್ಲೆ ಝುಲ್ಸಾನ ಗ್ರಾಮದಲ್ಲಿ ಶಿವರಾತ್ರಿ ಉತ್ಸವದ ವೇಳೆ ವಿಶೇಷ ಪೂಜೆ ನೆರವೇರಿಸಿದ್ದರು.
(AP)ಇತರ ಗ್ಯಾಲರಿಗಳು