ಗೆಳತಿ ಆತ್ಮಹತ್ಯೆಯ ನೋವಿನಲ್ಲೂ ಐಪಿಎಲ್ನಲ್ಲಿ ಘರ್ಜಿಸ್ತಿದ್ದಾರೆ ಸನ್ರೈಸರ್ಸ್ ಹೈದರಾಬಾದ್ ಯಂಗ್ ಪ್ಲೇಯರ್
- Abhishek Sharma : ಎರಡು ತಿಂಗಳ ಹಿಂದೆ ಗೆಳತಿ ಆತ್ಮಹತ್ಯೆ ಮಾಡಿಕೊಂಡಿದ್ದ ನೋವಿನಲ್ಲೂ ಸನ್ರೈಸರ್ಸ್ ಹೈದರಾಬಾದ್ ಯುವ ಆಟಗಾರ ಅಭಿಷೇಕ್ ಶರ್ಮಾ ಐಪಿಎಲ್ನಲ್ಲೂ ಅಬ್ಬರಿಸುತ್ತಿದ್ದಾರೆ.
- Abhishek Sharma : ಎರಡು ತಿಂಗಳ ಹಿಂದೆ ಗೆಳತಿ ಆತ್ಮಹತ್ಯೆ ಮಾಡಿಕೊಂಡಿದ್ದ ನೋವಿನಲ್ಲೂ ಸನ್ರೈಸರ್ಸ್ ಹೈದರಾಬಾದ್ ಯುವ ಆಟಗಾರ ಅಭಿಷೇಕ್ ಶರ್ಮಾ ಐಪಿಎಲ್ನಲ್ಲೂ ಅಬ್ಬರಿಸುತ್ತಿದ್ದಾರೆ.
(1 / 9)
ಏಪ್ರಿಲ್ 5ರಂದು ಶುಕ್ರವಾರ ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ 6 ವಿಕೆಟ್ಗಳ ಸುಲಭ ಜಯ ಸಾಧಿಸಿತು. ಇದರೊಂದಿಗೆ ಸಿಎಸ್ಕೆ ಸತತ ಎರಡನೇ ಸೋಲು ಅನುಭವಿಸಿತು. ಹೈದರಾಬಾದ್ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.
(ANI)(2 / 9)
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ನೀರಸ ಪ್ರದರ್ಶನ ನೀಡಿತು. ಶಿವಂ ದುಬೆ (45) ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 165 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸನ್ರೈಸರ್ಸ್, ಇನ್ನೂ 11 ಎಸೆತಗಳು ಬಾರಿ ಇರುವಂತೆಯೇ ಜಯದ ನಗೆ ಬೀರಿತು.
(SRH-X)(3 / 9)
ಚೆನ್ನೈ ವಿರುದ್ಧ ಹೈದರಾಬಾದ್ ಮತ್ತೊಂದು ಅದ್ಭುತ ಪ್ರದರ್ಶನ ನೀಡಿದೆ. ಅದರಲ್ಲೂ ಮಯಾಂಕ್ ಅಗರ್ವಾಲ್ ಬದಲಿಗೆ ಆರಂಭಿಕ ಸ್ಥಾನದಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ ಶರ್ಮಾ ಅವರ ಇನ್ನಿಂಗ್ಸ್ ಎಲ್ಲರನ್ನೂ ಆಕರ್ಷಿಸಿತು. ಮುಕೇಶ್ ಚೌದರಿಗೆ ಒಂದೇ ಓವರ್ನಲ್ಲಿ 27 ರನ್ ಚಚ್ಚಿದರು. ಅರ್ಧಶತಕ ಸಿಡಿಸಿಲ್ಲವಾದರೂ ಆಟದ ಚಿತ್ರಣವನ್ನು ಬದಲಿಸಿದರು.
(IPL)(4 / 9)
ಕೇವಲ 12 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಿತ 308.33ರ ಸ್ಟ್ರೈಕ್ರೇಟ್ನಲ್ಲಿ ಭರ್ಜರಿ 37 ರನ್ ಬಾರಿಸಿದರು. ಈ ಅದ್ಭುತ ಪ್ರದರ್ಶನಕ್ಕೆ ಅವರು ಪ್ಲೇಯರ್ ಆಫ್ ದ ಮ್ಯಾಚ್ ಅವಾರ್ಡ್ ಕೂಡ ಪಡೆದರು. ಈ ಹಿಂದೆ ಮುಂಬೈ ವಿರುದ್ಧ ಕೇವಲ 16 ಎಸೆತಗಳಲ್ಲೇ ವೇಗದ ಹಾಫ್ ಸೆಂಚುರಿ ಬಾರಿಸಿದ್ದರು. ಆ ಬಳಿಕ ಈತ ಯಾರು? ಆತನ ಹಿನ್ನಲೆ ಏನು? ಎಂದೆಲ್ಲಾ ಗೂಗಲ್ನಲ್ಲಿ ಹುಡುಕಲಾಗುತ್ತಿದೆ.
(ANI )(5 / 9)
ದೇಶೀಯ ಕ್ರಿಕೆಟ್ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುವ ಅಭಿಷೇಕ್ ಒಬ್ಬ ಆಲ್ರೌಂಡರ್. ಐಪಿಎಲ್ನಲ್ಲಿ 55 ಲಕ್ಷಕ್ಕೆ ಖರೀದಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಪದಾರ್ಪಣೆಗೈದಿದ್ದರು. ನಂತರ 2019ರಲ್ಲಿ ಎಸ್ಆರ್ಹೆಚ್ 6.5 ಕೋಟಿ ಕೊಟ್ಟು ಖರೀದಿಸಿತು.
(ANI)(6 / 9)
ಭಾರತದ ಅಂಡರ್-19 ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿದ್ದ ಅಭಿಷೇಕ್ ಶರ್ಮಾ, ಐಪಿಎಲ್ಗೂ ಮುನ್ನ ಸಾಕಷ್ಟು ಸುದ್ದಿಯಲ್ಲಿದ್ದರು. ಹೌದು, ಆತನ ಗೆಳತಿ 28 ವರ್ಷದ ತಾನ್ಯಾ ಸಿಂಗ್, ಆತ್ಮಹತ್ಯೆ ಮಾಡಿಕೊಂಡಿದ್ದರು. ಫೆಬ್ರವರಿಯಲ್ಲಿ ಸೂರತ್ನಲ್ಲಿ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.
(AP)(7 / 9)
ಮಾಡೆಲ್ ಆಗಿದ್ದ ತಾನ್ಯಾ ಸಿಂಗ್ ಜೊತೆ ಅಭಿಷೇಕ್ ಶರ್ಮಾ ಉತ್ತಮ ಬಾಂಧವ್ಯ ಹೊಂದಿದ್ದರು. ಆತನ ಗೆಳತಿ ಎಂದೂ ವರದಿಯಗಿದೆ. ತಾನ್ಯಾ ಆತ್ಮಹತ್ಯೆಯ ಬಳಿಕ ಪೊಲೀಸರು ತನಿಖೆಯ ವೇಳೆ ಆಕೆಯ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ.
(8 / 9)
ಆಗ ಕಾಲ್ ಲೀಸ್ಟ್ನಲ್ಲಿ ಅಭಿಷೇಕ್ ಹೆಸರು ಕೂಡ ಇತ್ತು ಎಂದು ಹೇಳಲಾಗಿದೆ. ಆತ್ಮಹತ್ಯೆಗೂ ತಾನ್ಯಾ ಮುನ್ನ ಕ್ರಿಕೆಟಿಗನ ಜೊತೆ ಮಾತನಾಡಿದ್ದರು ಎಂದು ಸುದ್ದಿಯಾಗಿದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ಅಭಿಷೇಕ್ ಅವರನ್ನು ವಿಚಾರಣೆ ನಡೆಸಿದ್ದರು. ಕ್ರಿಕೆಟಿಗ ಕೂಡ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಈ ನೋವಿನ ನಡುವೆಯೂ ಯುವ ಆಟಗಾರ ಅಬ್ಬರಿಸುತ್ತಿದ್ದು, ಗಮನ ಸೆಳೆಯುತ್ತಿದ್ದಾರೆ.
ಇತರ ಗ್ಯಾಲರಿಗಳು