ಸಚಿನ್ ದಾಖಲೆಯ ಜತೆಗೆ ಟೆಂಬಾ ಬವುಮಾರ ವಿಶ್ವದಾಖಲೆ ಮುರಿದ ಸೂರ್ಯಕುಮಾರ್ ಯಾದವ್; ಹಲವು ಮೈಲಿಗಲ್ಲು ಸೃಷ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಚಿನ್ ದಾಖಲೆಯ ಜತೆಗೆ ಟೆಂಬಾ ಬವುಮಾರ ವಿಶ್ವದಾಖಲೆ ಮುರಿದ ಸೂರ್ಯಕುಮಾರ್ ಯಾದವ್; ಹಲವು ಮೈಲಿಗಲ್ಲು ಸೃಷ್ಟಿ

ಸಚಿನ್ ದಾಖಲೆಯ ಜತೆಗೆ ಟೆಂಬಾ ಬವುಮಾರ ವಿಶ್ವದಾಖಲೆ ಮುರಿದ ಸೂರ್ಯಕುಮಾರ್ ಯಾದವ್; ಹಲವು ಮೈಲಿಗಲ್ಲು ಸೃಷ್ಟಿ

ಪಂಜಾಬ್ ಕಿಂಗ್ಸ್ ವಿರುದ್ಧದ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಮಿಂಚಿದ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ (ಮೇ 26) ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಮುಂಬೈ ಇಂಡಿಯನ್ಸ್ ಬ್ಯಾಟರ್​ ಸೂರ್ಯಕುಮಾರ್ ಯಾದವ್ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
icon

(1 / 11)

(REUTERS)

ತಮ್ಮ ಅದ್ಭುತ ಓಟವನ್ನು ಮುಂದುವರೆಸಿದ ಸೂರ್ಯ, 39 ಬಾಲ್​​​ಗಳಲ್ಲಿ 156.15 ಸ್ಟ್ರೈಕ್ ರೇಟ್​ನಲ್ಲಿ 6 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸುವ ಮೂಲಕ ಋತುವಿನ 5ನೇ ಅರ್ಧಶತಕ ಬಾರಿಸಿದರು.
icon

(2 / 11)

ಪ್ರಸಕ್ತ ಐಪಿಎಲ್​ನಲ್ಲಿ ಸೂರ್ಯ ಆಡಿದ ಲೀಗ್​ ಹಂತದ ಎಲ್ಲಾ (14) ಪಂದ್ಯಗಳಲ್ಲೂ 25 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್​ನಲ್ಲಿ ಈ ಸಾಧನೆ ಮೊಟ್ಟ ಮೊದಲ ಆಟಗಾರ.
icon

(3 / 11)

ಅಲ್ಲದೆ, ವಿಶ್ವದಾಖಲೆಯನ್ನೂ ತನ್ನ ಹೆಸರಿಗೆ ಸೂರ್ಯ ಬರೆದುಕೊಂಡಿದ್ದಾರೆ. ಸತತವಾಗಿ 14 ಟಿ20 ಇನ್ನಿಂಗ್ಸ್​​ಗಳಲ್ಲಿ 25 ಪ್ಲಸ್ ರನ್ ಗಳಿಸಿದ ಆಟಗಾರ ಎಂಬ ವಿಶ್ವದ ಮೊದಲ ಆಟಗಾರನೂ ಅವರೇ ಆಗಿದ್ದಾರೆ. ಆ ಮೂಲಕ ಟೆಂಬಾ ಬವುಮಾ ವಿಶ್ವದಾಖಲೆ ಮುರಿದಿದ್ದಾರೆ.
icon

(4 / 11)

(AFP)

2019-20ರಲ್ಲಿ ದಕ್ಷಿಣ ಆಫ್ರಿಕಾದ ಟೆಂಬಾ ಬವುಮಾ ಅವರು ಸತತ 13 ಬಾರಿ 25 ಪ್ಲಸ್​ ಸ್ಕೋರ್ ಮಾಡುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಆ ದಾಖಲೆಯನ್ನು ಸೂರ್ಯ ಮುರಿದಿದ್ದಾರೆ. ಐಪಿಎಲ್‌ನಲ್ಲಿ, ರಾಬಿನ್ ಉತ್ತಪ್ಪ 2024ರ ಋತುವಿನಲ್ಲಿ 25 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳನ್ನು ಸತತ 10 ಇನ್ನಿಂಗ್ಸ್‌ಗಳೊಂದಿಗೆ ದಾಖಲೆ ಹೊಂದಿದ್ದರು.
icon

(5 / 11)

(AP)

ಸೂರ್ಯಕುಮಾರ್ ಈಗ ಒಂದೇ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು 25 ಪ್ಲಸ್ ಸ್ಕೋರ್‌ ಗಳಿಸಿದ ದಾಖಲೆ ಹೊಂದಿದ್ದಾರೆ. ಈ ಹಿಂದೆ ಕೇನ್ ವಿಲಿಯಮ್ಸನ್ (13) ಮತ್ತು ಶುಭ್ಮನ್ ಗಿಲ್ (13) ಈ ದಾಖಲೆಯನ್ನು ಹೊಂದಿದ್ದರು.
icon

(6 / 11)

ಸೂರ್ಯಕುಮಾರ್ ಯಾದವ್ ಅವರು ಸಚಿನ್ ತೆಂಡೂಲ್ಕರ್ ದಾಖಲೆ ಮುರಿದು 600 ಪ್ಲಸ್ ರನ್​​ಗಳ ಕ್ಲಬ್ ಸೇರಿದ್ದಾರೆ. 2023ರ ನಂತರ ಸೂರ್ಯಕುಮಾರ್ ತಮ್ಮ ವೃತ್ತಿಜೀವನದಲ್ಲಿ 2ನೇ ಬಾರಿಗೆ 600 ರನ್ ಪೂರೈಸಿದ್ದಾರೆ.
icon

(7 / 11)

33 ವರ್ಷ ವಯಸ್ಸಿನ ಸೂರ್ಯ ಐಪಿಎಲ್ ಇತಿಹಾಸದಲ್ಲಿ 2 ಬಾರಿ 165 ಕ್ಕಿಂತ ಹೆಚ್ಚಿನ ಸ್ಟ್ರೈಕ್-ರೇಟ್‌ನೊಂದಿಗೆ 600 ಪ್ಲಸ್​ ರನ್‌ ಗಳಿಸಿದ ಮೊದಲ ಆಟಗಾರ. 160+ ಸ್ಟ್ರೈಕ್-ರೇಟ್​​ನೊಂದಿಗೆ ಎರಡು ಸಲ 600+ ರನ್‌ ಗಳಿಸಿದ ಏಕೈಕ ಆಟಗಾರ ಕ್ರಿಸ್ ಗೇಲ್.
icon

(8 / 11)

ಮುಂಬೈ ಪರ 2 ಬಾರಿ 600 ರನ್‌ ಗಡಿ ದಾಟಿದ ಮೊದಲ ಆಟಗಾರ ಸೂರ್ಯ. ಮುಂಬೈ ಪರ ಸಚಿನ್ ತೆಂಡೂಲ್ಕರ್ ಮಾತ್ರ ಒಂದೇ ಋತುವಿನಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಪ್ರಸಕ್ತ ಆವೃತ್ತಿಯಲ್ಲಿ ಸೂರ್ಯ 14 ಇನ್ನಿಂಗ್ಸ್‌ಗಳಲ್ಲಿ 71.11 ಸರಾಸರಿಯಲ್ಲಿ 640 ರನ್ ಗಳಿಸಿದ್ದಾರೆ.
icon

(9 / 11)

(PTI)

2016ರ ಋತುವಿನಲ್ಲಿ ವಿರಾಟ್ ಕೊಹ್ಲಿ (81.08) 973 ರನ್ ಗಳಿಸಿದ ದಾಖಲೆಯ ನಂತರ, ಐಪಿಎಲ್ ಋತುವಿನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರನ 2ನೇ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯನ್ನು ಸೂರ್ಯಕುಮಾರ್ ಹೊಂದಿದ್ದಾರೆ.
icon

(10 / 11)

ತಮ್ಮ ಅರ್ಧಶತಕದ ಮೂಲಕ ಸೂರ್ಯಕುಮಾರ್, ಮುಂಬೈ ಪರ ಒಂದೇ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್​ರ ದಾಖಲೆ ಮುರಿದಿದ್ದಾರೆ. 2010ರ ಋತುವಿನಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದಾಗ ಮುಂಬೈ ಪರ ಸಚಿನ್ 618 ರನ್ ಗಳಿಸಿದ್ದರು.
icon

(11 / 11)

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು